ಕಾಶಿ ವಿಶ್ವನಾಥ ದೇವಾಲಯ ಬಳಿಯ ಮಸೀದಿ ಎದುರು ಸುರಂಗ ಮಿನಿ ನಗರ ಪತ್ತೆ, ಭಯೋತ್ಪಾದನೆಗೆ ಸಂಚು?
ಲಖನೌ: ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯಕ್ಕೆ ಬಿಗಿ ಭದ್ರತೆಯಿದ್ದರೂ ಭಯೋತ್ಪಾದಕರು ಮಾತ್ರ ಆಗಾಗ ನಾವು ಬಾಂಬು ಹಾಕುತ್ತೇವೆ ಎಂದು ಹೆದರಿಕೆ ಹಾಕುತ್ತಾರೆ, ಎಚ್ಚರಿಸುತ್ತಾರೆ. ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಈ ದೇವಾಲಯ ಎಂದಿಗೂ ಉಗ್ರರ ಟಾರ್ಗೆಟ್ ಲಿಸ್ಟ್ ನಲ್ಲಿ ಇರುತ್ತದೆ.
ಇದಕ್ಕೆ ಪೂರಕವಾಗಿ ಕಾಶಿ ವಿಶ್ವನಾಥ ದೇವಾಲಯ ಬಳಿಕ ಮಸೀದಿಯೊಂದರ ಎದುರು ನೆಲಮಹಡಿಯಲ್ಲಿ ಕೊರೆದ ಮಿನಿ ನಗರ ಅಥವಾ ಸಮುಚ್ಚಯವೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವಾರಣಸಿಯ ದಲ್ಮಂಡಿ ಪ್ರದೇಶದ ಲಾಂಗ್ಡಾ ಹಫೀಜ್ ಮಸೀದಿ ಎದುರಿನಲ್ಲಿ ಭೂಮಿಯ ಆಳಕ್ಕೆ ಸುರಂಗ ಕೊರೆದಿದ್ದು, ಅಲ್ಲೇ ಸಮ್ಮುಚ್ಚಯ (ಕಾಂಪ್ಲೆಕ್ಸ್) ಪತ್ತೆಯಾಗಿದೆ. ಅಕ್ರಮ ಒತ್ತುವರಿ ತಡೆ ಪಡೆ ಎಂದಿನಂತೆ ಗಸ್ತು ನಡೆಸುವಾಗ, ನಿರ್ಮಾಣ ಹಂತದಲ್ಲಿರುವ ಸುರಂಗ ಪತ್ತೆಯಾಗಿದೆ.
ಎಸ್ಎಸ್ ಪಿ ಆರ್.ಕೆ.ಭಾರದ್ವಾಜ್ ತಂಡ ಈ ಸುರಂಗ ಸಮುಚ್ಚಯವನ್ನು ಪತ್ತೆ ಹಚ್ಚಿದ್ದು, ಯಾರು ಈ ಸಮುಚ್ಚಯ ನಿರ್ಮಿಸುತ್ತಿದ್ದಾರೆ? ಯಾವ ಕಾರಣಕ್ಕಾಗಿ ಭೂಮಿಯ ಆಳದಲ್ಲಿ ಸುರಂಗ ಕೊರೆಯುತ್ತಿದ್ದಾರೆ? ಎಂಬ ಕುರಿತು ಅನುಮಾನಗಳು ಉದಯಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುರಂಗ ಸಮುಚ್ಚಯವು ಸುಮಾರು 5000 ಚದುರ ಮೀಟರ್ ನಷ್ಟು ವಿಸ್ತಾರ ಹೊಂದಿದ್ದು, ಭಯೋತ್ಪಾದನೆ ದಾಳಿ, ಸಂಚಿಗಾಗಿ ಸಮುಚ್ಚಯ ನಿರ್ಮಿಸುತ್ತಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪಕ್ಕದಲ್ಲೇ ಕಾಶಿ ವಿಶ್ವನಾಥ ದೇವಾಲಯವೂ ಇರುವುದರಿಂದ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Leave A Reply