ಯೋಗಿ ಆದಿತ್ಯನಾಥರ ಗುಟುರಿಗೆ ಹೆದರಿದ ರೌಡಿಗಳು, ಶರಣಾದವರನ್ನು ಜೈಲಿಗೆ ಹಾಕಲು ಸ್ಥಳವೇ ಸಾಕಾಗುತ್ತಿಲ್ಲ
ಲಖನೌ: ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ಪ್ರಸ್ತುತ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ.
ಹೌದು, ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿರುವ ಸಿಎಂ ಆದಿತ್ಯನಾಥರು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದಾರೆ.
ಇದರಿಂದ ಪತರಗುಟ್ಟಿರುವ ಉತ್ತರ ಪ್ರದೇಶದ ರೌಡಿಗಳು ಈಗ ಹಿಂಡು ಹಿಂಡಾಗಿ ಬಂದು ಶರಣಾಗುತ್ತಿದ್ದು, ಅವರನ್ನು ಇಡಲು ಜೈಲಿನಲ್ಲಿ ಸ್ಥಳವೇ ಸಾಕಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಉತ್ತರ ಪ್ರದೇಶ ಡಿಜಿಪಿ ಕಚೇರಿಯೇ ಮಾಹಿತಿ ನೀಡಿರುವ ಪ್ರಕಾರ, ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ ಸುಮಾರು 142 ಕ್ರಿಮಿನಲ್ ಗಳು ಶರಣಾಗಿದ್ದಾರೆ. ಈ ಕುರಿತು ಸುಮಾರು 26 ಕ್ರಿಮಿನಲ್ ಗಳಿಗೆ ಜಾಮೀನು ಮಂಜೂರಾಗಿದ್ದರೂ ಜೈಲು ಬಿಟ್ಟಲು ಹೋಗುತ್ತಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೆಲ್ಲ ಕಾರಣ ಯೋಗಿ ಆದಿತ್ಯನಾಥರು ಕೈಗೊಂಡ ನಿರ್ಧಾರವೇ ಆಗಿದ್ದು, 2017ರ ಮಾರ್ಚ್ 20ರಿಂದ ಇದುವರೆಗೆ ಉತ್ತರ ಪ್ರದೇಶದಲ್ಲಿ 1240 ಎನ್ ಕೌಂಟರ್ ನಡೆದಿವೆ. ಅದರಲ್ಲಿ 40ಕ್ಕೂ ಅಧಿಕ ಕ್ರಿಮಿನಲ್ ಗಳು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ರೌಡಿಗಳು ಗಾಯಗೊಂಡಿದ್ದಾರೆ.
ಅಲ್ಲದೆ, ಶರಣಾಗಲು ಒಪ್ಪದಿದ್ದರೆ ಎನ್ ಕೌಂಟರ್ ಮಾಡಿ ಎಂದು ಯೋಗಿ ಆದಿತ್ಯನಾಥರು ಆದೇಶಿಸಿರುವುದರಿಂದ ಜೀವ ಉಳಿದರೆ ಸಾಕು ಎನ್ನುತ್ತಿರುವ ರೌಡಿಗಳು, ಜೈಲಿಗೆ ಬಂದು ಶರಣಾಗುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಎಂದರೆ ಇದೇ ಅಲ್ಲವೆ? ನಮ್ಮ ಸಿದ್ದರಾಮಯ್ಯನವರು ಇಂತಹ ಕ್ರಮ ಕೈಗೊಳ್ಳಬೇಕು.
Leave A Reply