ರಾಷ್ಟ್ರ ರಾಜಧಾನಿಯಲ್ಲಿ ಬಾಲಕಿ ಮೇಲೆ ನಾಲ್ವರು ಮುಸ್ಲಿಮರ ಅತ್ಯಾಚಾರ, ಲವ್ ಜಿಹಾದ್ ಶಂಕೆ!
ದೆಹಲಿ: ದೇಶದಲ್ಲಿ ದಿನೇದಿನೆ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂಬ ಮಾತುಕೇಳಿಬರುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಇಂಥಾದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದೆಹಲಿಯಲ್ಲಿ ಹತ್ತನೇ ತರಗತಿ ಓದುತ್ತಿರುವ ಬಾಲಕಿಯನ್ನು ಪ್ರೀತಿಸುತ್ತೇನೆ ಎಂದು ದುಂಬಾಲು ಬಿದ್ದಿದ್ದ ಸಲ್ಮಾನ್ ಎಂಬ ಮುಸ್ಲಿಂ ಯುವಕ, ಮದುವೆ ಕುರಿತು ನಿಮ್ಮ ತಂದೆ-ತಾಯಿ ಹತ್ತಿರ ಮಾತನಾಡುತ್ತೇನೆ ಎಂದು ಭರವಸೆ ಮೂಡಿಸಿದ್ದಾನೆ.
ಆದರೆ ಮನಸ್ಸಲ್ಲೇ ಬೇರೆ ಉದ್ದೇಶ ಇಟ್ಟುಕೊಂಡಿದ್ದ ಆತನ ಬಾಲಕಿಯನ್ನು ಅಪಾರ್ಟ್ ಮೆಂಟ್ ಒಂದಕ್ಕೆ ಕರೆದೊಯ್ದ ಆತ ತನ್ನ ಮೂವರು ಗೆಳೆಯರೊಂದಿಗೆ ಎರಡು ದಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರ ಎಸಗಿದ ಬಳಿಕ ಕಳೆದ ಗುರುವಾರ ರಾತ್ರಿ ಬಾಲಕಿಯ ಮನೆಗೆ ಸಮೀಪದ ನತ್ತುಪುರ ಚೌಕ್ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಬಳಿಕ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದು, ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಸಲ್ಮಾನ್ (21), ಇಮ್ರಾನ್ (22) ಎಂಬುವವರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
ದೆಹಲಿಯ ಜ್ಯೋತಿ ನಗರ ನಿವಾಸಿಯಾಗಿರುವ ಬಾಲಕಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆಯಾದರೂ, ಮಾನಸಿಕವಾಗಿ ಒತ್ತಡಕ್ಕೊಳಗಾಗಿರುವ ಆಕೆಗೆ ಆಪ್ತ ಸಮಾಲೋಚನೆಯ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Leave A Reply