ವಿಶ್ವಕ್ಕೆ ಸನ್ಮಾರ್ಗ ತೋರಿಸುವ ಶಕ್ತಿ ಭಾರತಕ್ಕೆ ಮಾತ್ರ: ಮೋಹನ್ ಭಾಗವತ್ ಜೀ
ಮೀರತ್: ಭಾರತ ಮಾತ್ರ ವಿಶ್ವಕ್ಕೆ ಸನ್ಮಾನ ತೋರುವ ಶಕ್ತಿ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜೀ ಹೇಳಿದರು.
ಪಶ್ಚಿಮ ಉತ್ತರ ಪ್ರದೇಶದ ಮೀರನ್ ನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ “ರಾಷ್ಟ್ರೋದಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ದೇಶದ ಪ್ರತಿ ನಾಗರೀಕರು ಒಗ್ಗಟ್ಟಿನಿಂದ ಇರಬೇಕು. ಭಾರತದ ಏಕತೆಗೆ ಧಕ್ಕೆ ಉಂಟು ಮಾಡುವ ಪಿತೂರಿಗಳು ನಡೆದಿವೆ. ಅವುಗಳನ್ನು ಎದುರಿಸಲು ಪ್ರತಿ ಭಾರತೀಯ ಒಗ್ಗೂಡಬೇಕು. ಇಲ್ಲದಿದ್ದರೇ ದುಷ್ಟಶಕ್ತಿಗಳು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೇ ಎಂದು ಹೇಳಿದರು.
ಎಲ್ಲ ಹಿಂದೂಗಳು ಒಂದೇ. ನಾವು ಹೆಮ್ಮೆಯಿಂದ ಒಂದೇ ಎಂಬ ಭಾವದಿಂದ ಇರಬೇಕು. ಹಿಂದೂಗಳ ಏಕತೆಗೆ ಶ್ರಮಿಸುವುದು ನಮ್ಮ ಕಾರ್ಯ. ಆಗ ಹಿಂದೂಗಳಿಗೆ ಉಂಟಾಗಿರುವ ತೊಡಕುಗಳನ್ನು ತಡೆಗಟ್ಟಿ ಎಲ್ಲವನ್ನೂ ಎದುರಿಸಬಹುದು. ನಾವು ಏಕತೆ ಸಾಧಿಸದಿದ್ದರೇ ದುಷ್ಟಶಕ್ತಿಗಳನ್ನು ಅದನ್ನು ಉಪಯೋಗಿಸಿಕೊಂಡು, ನಮ್ಮನ್ನು ಒಡೆದು ಆಳುತ್ತಾರೆ ಎಂದು ಹೇಳಿದರು.
ದೇಶದಲ್ಲಿ 1,70,000 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ದೇಶದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ಮೀರತ್ ನಲ್ಲಿ ನಡೆದ ರಾಷ್ಟ್ರೋದಯ ಸಮ್ಮೇಳನದಲ್ಲಿ 3 ಲಕ್ಷಕ್ಕಿಂತ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಿಸ್ತಿಗೆ ಹೆಸರಾದ ಸಂಘಟನೆಯ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
Leave A Reply