ಸಿಪಿಎಂ ವಿರುದ್ಧ ಮತ ನೀಡಿದಕ್ಕೆ ಮಹಿಳೆ ಕೊಲೆ
ಅಗರ್ತಲಾ: ದೇಶದಲ್ಲಿ ಕಮ್ಯುನಿಸ್ಟರ್ ವಿಕೃತ ಮನಸ್ಥಿತಿಯ ಕುಕೃತ್ಯಗಳು ಮುಂದುವರಿದಿದ್ದು, ಕೇರಳದಲ್ಲಿ ವಿರೋಧ ಪಕ್ಷಗಳ, ಭಿನ್ನ ಸಿದ್ಧಾಂತ ಹೊಂದಿರುವವರ ಮೇಲೆ ಹಲ್ಲೆ ಮಾಡುವುದು, ಹಿಂಸಿಸುವುದು, ಕೊಲೆ ಮಾಡುವ ವಿಕೃತ ಕೃತ್ಯಗಳು ಸಾಮಾನ್ಯವೆಂಬತಾಗಿದೆ. ಇದೀಗ ಕಮ್ಯುನಿಸ್ಟ್ ವಿಕೃತ ಮನಸ್ಥಿತಿ ಮತ್ತೊಮ್ಮೆ ಅನಾವರಣವಾಗಿದ್ದು, ತ್ರಿಪುರಾದಲ್ಲಿ ಸಿಪಿಎಂ ಪಕ್ಷಕ್ಕೆ ಮತ ನೀಡಿಲ್ಲ ಎಂದು ಮಹಿಳೆಯೊಬ್ಬಳನ್ನು ಹೀನಾಯವಾಗಿ ಸಂಬಂಧಿಗಳೇ ಕೊಲೆ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ.
ತ್ರಿಪುರಾದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ವಿರುದ್ಧ ಮತ ಚಲಾಯಿಸಿದ್ದಾಳೆ ಎಂದು ಮಹಿಳೆಯೊಬ್ಬಳನ್ನು ಕೊಲೆ ಮಾಡುವ ಮೂಲಕ ಕಮ್ಯುನಿಸ್ಟರು ಮತ್ತೊಮ್ಮೆ ತಮ್ಮ ವಿಕೃತ ಮನಸ್ಥಿತಿಯನ್ನು ಸಾರಿದ್ದಾರೆ. ಮಹಿಳೆಯ ಮಾವ ಮತ್ತು ಭಾವನೇ ಸಿಪಿಎಂ ವಿರುದ್ಧ ಮತ ನೀಡಿದ್ದಾಳೆ ಎಂದು ರಾತ್ರಿ ತೀವ್ರ ಕಿರುಕುಳ ನೀಡಿ, ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕಿರಾತಕರ ಕೃತ್ಯವನ್ನು ನೋಡಿದ ಅಕ್ಕಪಕ್ಕದವರೂ ಮಹಿಳೆಯ ರಕ್ಷಣೆಗೆ ಧಾವಿಸಿದಾಗ ಕೊಲೆಗಾರರು ಓಡಿ ಹೋಗಿದ್ದಾರೆ. ಈ ಕುರಿತು ಮಹಿಳೆಯ ಪತಿ ಮೂವರ ವಿರುದ್ಧ ದೂರು ನೀಡಿದ್ದು, ಇದುವರೆಗೆ ಯಾರನ್ನು ಬಂಧಿಸಿಲ್ಲ
Leave A Reply