ಫತ್ವಾ ಹೊರಡಿಸುವ ಮೂಲಭೂತವಾದಿಗಳೇ ಕೇಳಿ ಸೌದಿಯಲ್ಲೂ ಮಹಿಳಾ ಸೈನಿಕರು
ಮನಾಮ: ಕಠೋರ ಮುಸ್ಲಿಂ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಸೌದಿ ಅರೇಬಿಯಾ ಮುಸ್ಲಿಂ ಧರ್ಮದ ಅಂಧಾಚರಣೆಗಳಿಗೆ ವಿರಾಮ ಹೇಳುತ್ತಿದ್ದು, ನಿರಂತರವಾಗಿ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳುವ ಮೂಲಕ, ವಿಶೇಷವಾಗಿ ಮುಸ್ಲಿಂ ಧರ್ಮದಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿದ್ದ ಮಹಿಳೆಯರ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯ ನೀಡುತ್ತ ವಿಶ್ವದ ಗಮನ ಸೆಳೆದಿದೆ. ಅಲ್ಲದೇ ಮುಸ್ಲಿಂ ಧರ್ಮದಲ್ಲೂ ಬದಲಾವಣೆಗೆ ಮುನ್ನಡೆ ಬರೆಯುವ ಮೂಲಕ ಮೂಲಭೂತವಾದಿಗಳಿಗೆ ಸ್ವಾತಂತ್ರ್ಯ, ಸಮಾನತೆಯ ಸಂದೇಶ ನೀಡಿದ್ದಾರೆ. ಇದೀಗ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ಸೈನ್ಯದಲ್ಲಿ ಸೇರಲು ಅವಕಾಶ ನೀಡುವ ಐತಿಹಾಸಿಕ, ಕ್ರಾಂತಿಕಾರಿ ನಿರ್ಧಾರ ಪ್ರಕಟಿಸಿದೆ.
ಮಹಿಳೆಯರನ್ನು ಸರ್ವ ಕ್ಷೇತ್ರಗಳಲ್ಲಿ ತೊಡಗಿಸಬೇಕು ಎಂಬ ನಿರ್ಧಾರದೊಂದಿಗೆ ಕಳೆದ ವಾರವೇ ಸೇನೆಗೆ ಸೇರಲು ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮಾರ್ಚ್ 1ರಂದು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.
ಸೇನೆ ಸೇರುವ ಮಹಿಳೆಯರು ಕಡ್ಡಾಯವಾಗಿ ಸೌದಿ ನಾಗರಿಕರಾಗಿರಬೇಕು. ಪ್ರೌಢ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು ಎಂಬ ಅರ್ಹತೆ ವಿಧಿಸಲಾಗಿದೆ. 25 ರಿಂದ 35 ವರ್ಷ ವಯಸ್ಸಯ ಇರಬೇಕು, ಕನಿಷ್ಠ 155 ಸೆಂ.ಮೀ ಉದ್ದ ಇರಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿತ್ತು.
ಪರೀಕ್ಷೆ ಪಾಸಾದ ಬಳಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ ಎಂದು ತಿಳಿಸಿದೆ. ಅದೇ ರೀತಿ ಅಭ್ಯರ್ಥಿ ಸೌದಿಯೇತರ ವ್ಯಕ್ತಿಯನ್ನು ವಿವಾಹವಾಗಿರಬಾರದು ಎಂಬ ನಿಯಮವನ್ನೂ ವಿಧಿಸಿದೆ. ಆಯ್ಕೆಯಾದ ಮಹಿಳೆಯರನ್ನು ರಿಯಾದ್, ಮೆಕ್ಕಾ, ಮದೀನಾ, ಖಾಸಿಮ್, ಅಸ್ಸೆರ್, ಅಲ್ ಬಹಾ, ಈಸ್ಟ್ರನ್ ಪ್ರಾವಿನ್ಸ್‌ಗಳಲ್ಲಿ ನಿಯಮಿಸಲಾಗುವುದು ಎಂದು ಪಬ್ಲಿಕ್ ಸೆಕ್ಯುರಿಟಿ ಜನರಲ್ ಡೈರೆಕ್ಟರ್ ತಿಳಿಸಿದೆ.
ಇತ್ತೀಚೆಗೆ ಸೌದಿ ಸರ್ಕಾರ ಯೋಗಕ್ಕೆ, ಮಹಿಳೆಯರು ಫುಟ್ಬಾಲ್ ನೋಡಲು ಅವಕಾಶ, ಸ್ವಂತ ಉದ್ದಿಮೆ ನಡೆಸಲು ಅವಕಾಶ ನೀಡುವುದು ಸೇರಿ ಹಲವು ಮಹತ್ತರ ಕ್ರಾಂತಿಕಾರಿ ನಿರ್ಧಾರಗಳನ್ನು ಸೌದಿ ಸರ್ಕಾರ ತೆಗೆದುಕೊಂಡಿತ್ತು.
Leave A Reply