• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಾಜಿ ಮೇಯರ್ ಅಶ್ರಫ್ ಯಾವ ಪಕ್ಷದಲ್ಲಿದ್ದರೂ ಆ ಪಕ್ಷದ ಆಸ್ತಿ!

Hanumantha Kamath Posted On March 2, 2018


  • Share On Facebook
  • Tweet It

ಅಶ್ರಫ್ ಒಬ್ಬ ಪ್ರಭಾವಿ ಮುಸ್ಲಿಂ ನಾಯಕ ಎನ್ನುವುದು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮಾತ್ರವಲ್ಲ ಹೆಚ್ಚಿನವರಿಗೆ ಗೊತ್ತಿರುವ ವಿಷಯ. ಇದಕ್ಕೆ ಕಾರಣ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅವರು ಮೇಯರ್ ಆಗಿದ್ದಾಗ ಕೊಟ್ಟ ಆಡಳಿತ. ಪ್ರತಿಯೊಬ್ಬ ಕಾರ್ಪೋರೇಟರ್ ಗೂ ವರ್ಷಕ್ಕೆ 15 ಲಕ್ಷ ಅನುದಾನ ಸಿಗುತ್ತದೆ. ಅದು ಅವರವರ ಕ್ಷೇತ್ರದಲ್ಲಿ ಎಷ್ಟು ಸಾಕಾಗುತ್ತೋ ಅವರಿಗೆ ಗೊತ್ತು. ಅದೇ ನೀವು ಮೇಯರ್ ಆದರೆ ಒಂದು ಕೋಟಿ ಅನುದಾನ ಸಿಗುತ್ತದೆ. ಅದನ್ನು ಮೇಯರ್ ತಮ್ಮ ವಿವೇಚನೆಯ ಮೇಲೆ ಯಾವ ವಾರ್ಡಿಗೆ ಬೇಕಾದರೂ ಹಂಚಬಹುದು. ಆದರೆ ಮೇಯರ್ ಆಗುವವರು ಆ ಅನುದಾನವನ್ನು ತಮ್ಮ ವಾರ್ಡಿನ ಅಭಿವೃದ್ಧಿಗಾಗಿಯೇ ವಿನಿಯೋಗಿಸುತ್ತಾರೆ. ಮೇಯರ್ ಆಗಿಯೂ ತಮ್ಮ ವಾರ್ಡಿಗೆ ಏನೂ ಮಾಡಿಲ್ಲ ಎನ್ನುವ ಆರೋಪ ಬರಬಾರದಲ್ಲ, ಆ ಕಾರಣಕ್ಕೆ. ಆದರೆ ಅಶ್ರಫ್ ಆ ನಿಟ್ಟಿನಲ್ಲಿ ಉಳಿದ ಎಲ್ಲಾ ಮೇಯರ್ ಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಯಾಕೆಂದರೆ ಅವರು ಮೇಯರ್ ಆಗಿದಷ್ಟು ದಿನ ತಮ್ಮ ವಾರ್ಡಿಗಿಂತ ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಮೇಯರ್ ಫಂಡ್ ಖರ್ಚು ಮಾಡಿದ್ದೇ ಜಾಸ್ತಿ. ಎಲ್ಲಿಯ ತನಕ ಎಂದರೆ ಪಾಲಿಕೆಯ ಯಾವುದೋ ವಾರ್ಡುಗಳಲ್ಲಿರುವ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು ಹರಿದು ಬರುವ ಪೈಪುಗಳನ್ನು, ನೀರಿನ ಟಾಂಕಿಗಳನ್ನು ಹಾಕಿಸಿ ಮಕ್ಕಳಿಗೆ, ಶಿಕ್ಷಕರಿಗೆ ನೆರವಾಗಿದ್ದರು. ನಾಗರಿಕರು ಯಾವುದೇ ಸಮಸ್ಯೆಗಳನ್ನು ಅವರ ಬಳಿ ತೆಗೆದುಕೊಂಡು ಹೋದರೆ ತಕ್ಷಣ ಸ್ಪಂದಿಸುತ್ತಿದ್ದರು. ಆದ್ದರಿಂದ ಇವತ್ತಿಗೂ ಅವರಿಗೆ ಹೆಸರಿದೆ. ನೀವು ಬೇಕಾದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಂಗಳೂರಿನಲ್ಲಿ ಆಳಿ ಹೋದ ಮೇಯರ್ ಗಳಲ್ಲಿ ಎಷ್ಟು ಮಂದಿಯನ್ನು ಗುರುತು ಹಿಡಿಯಬಲ್ಲಿರಿ ಎಂದು ನೆನಪಿಸಿಕೊಳ್ಳಿ. ಅದರಲ್ಲಿ ಅಶ್ರಫ್ ಮೊದಲಿಗೆ ನೆನಪಿಗೆ ಬರುತ್ತಾರೆ. ರಾಜಕೀಯದಲ್ಲಿ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಅಶ್ರಫ್ ಎನ್ನುವ ಹೆಸರು ಕೇಳಿದ ತಕ್ಷಣ ಬಾಯಿಂದ ಹೊರಡುವ ಮೊದಲ ಉದ್ಘಾರ “ಯಾರು ಮಾಜಿ ಮೇಯರಾ?”.

ಪೂಜಾರಿಯ ನೀಲಿಕಣ್ಣಿನ ಹುಡುಗ….

ಅಷ್ಟಕ್ಕೂ ಅಶ್ರಫ್ ಅವರಿಗೆ ಆ ರಾಜಕೀಯ ಇಮೇಜ್ ಅಷ್ಟು ಸುಲಭವಾಗಿ ಒಲಿದಿಲ್ಲ. ಅದಕ್ಕಾಗಿ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅಶ್ರಫ್ ನಿಜಕ್ಕೂ ಹಾರ್ಡ್ ವರ್ಕರ್. ಒಳ್ಳೆಯ ಕೆಲಸ ಮಾಡುತ್ತಾ ಆಗಿನ ನವಾಯತ್ ಅಥವಾ ಈಗಿನ ಬಂದರ್ ವಾರ್ಡಿನಲ್ಲಿ ಹೆಸರು ಮಾಡುತ್ತಿದ್ದ ಯುವಕ. ಇವರು ತಮ್ಮ ಪಾಡಿಗೆ ತಾವು ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತಿದ್ದಾಗ ಒಂದು ದಿನ ಜನಾರ್ಧನ ಪೂಜಾರಿ ಅವರ ಕಣ್ಣಿಗೆ ಬೀಳುತ್ತಾರೆ. ಪಕ್ಷಕ್ಕಾಗಿ ದುಡಿಯುವ ಯುವಕರನ್ನು ಗುಂಪಿನ ಮಧ್ಯದಿಂದಲೇ ಮೇಲಕ್ಕೆತ್ತುವ ಗುಣದ ಜನಾರ್ಧನ ಪೂಜಾರಿಯವರಿಗೆ ಅಶ್ರಫ್ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದ ರೀತಿ ನೋಡಿ ಇಷ್ಟವಾಗುತ್ತದೆ. ಅದಕ್ಕೆ ಸರಿಯಾಗಿ ಪಾಲಿಕೆಗೆ ಚುನಾವಣೆ ಬರುತ್ತದೆ. ನವಾಯತ್ ವಾರ್ಡಿನಲ್ಲಿ ಅಶ್ರಫ್ ಗೆ ಟಿಕೆಟ್ ಕೊಡಿ ಎಂದು ಖುದ್ದು ಪೂಜಾರಿಯವರೇ ಸೂಚಿಸುತ್ತಾರೆ. ಅಶ್ರಫ್ ತಮ್ಮ ಮೇಲೆ ಪೂಜಾರಿಯವರು ಇಟ್ಟ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಅಶ್ರಫ್ ಗೆಲ್ಲುತ್ತಾರೆ. ಅಲ್ಲಿಂದ ಬಂದರು ವಾರ್ಡ್ ಕಾಂಗ್ರೆಸ್ ಮಟ್ಟಿಗೆ ಭದ್ರಕೋಟೆಯಾಗುತ್ತದೆ. ಹಾಗೆ ಅಶ್ರಫ್ ಇಲ್ಲದ ಬಂದರು ವಾರ್ಡನ್ನು ಕಲ್ಪಿಸಿಕೊಳ್ಳಲು ಆಗದಂತಹ ವಾತಾವರಣವನ್ನು ಅಶ್ರಫ್ ಸೃಷ್ಟಿಸುತ್ತಾರೆ. ಪೂಜಾರಿಯವರ ನೀಲಿಗಣ್ಣಿನ ಹುಡುಗ ಎಂದೇ ಅಶ್ರಫ್ ಅವರನ್ನು ಗುರುತಿಸಲಾಗುತ್ತದೆ. ಅಶ್ರಫ್ ಮಾತಿಗೆ ಪಕ್ಷದಲ್ಲಿ ಬೆಲೆ ಜಾಸ್ತಿಯಾಗುತ್ತಾ ಹೋಗುತ್ತದೆ. ಅಶ್ರಫ್ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಪೂಜಾರಿಯವರು ನೀಡುತ್ತಾ ಹೋಗುತ್ತಾರೆ. ಅದ್ಯಾಕೋ ಏನೋ ಪೂಜಾರಿಯವರು ಎತ್ತಿ ಬೆಳೆಸಿದ ಹೆಚ್ಚಿನ ನಾಯಕರು ಅವರ ಹಾಗೆನೆ ನೇರವಾಗಿ ದಿಟ್ಟವಾಗಿ ಮಾತನಾಡುವವರು. ಅಶ್ರಫ್ ವಿಷಯದಲ್ಲಿಯೂ ಅದೇ ಆಯಿತು. ಅದು ಕಾಂಗ್ರೆಸ್ಸಿನ ಅನೇಕ ನಾಯಕರಿಗೆ ಪಥ್ಯವಾಗುತ್ತಿರಲಿಲ್ಲ. ಯಾವುದೋ ಕೆಟ್ಟಘಳಿಗೆಯಲ್ಲಿ ಒಂದು ಸಣ್ಣ ಕಾರಣಕ್ಕೆ ಪೂಜಾರಿ ಮತ್ತು ಅಶ್ರಫ್ ನಡುವೆ ಮಾತಿನ ವ್ಯತ್ಯಾಸವಾಗಿ ಅಶ್ರಫ್ ಅವರಿಂದ ದೂರವಾಗುತ್ತಾರೆ. ಅದನ್ನೇ ಕೆಲವರು ಕಡ್ಡಿ ಇದ್ದದ್ದು ಗುಡ್ಡೆ ಮಾಡುತ್ತಾರೆ. ನಂತರ ಅಶ್ರಫ್ ಅವರು ರಮಾನಾಥ ರೈ ಅವರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಆದರೆ ಅಲ್ಪಸಂಖ್ಯಾತರ ವಿಷಯ ಬಂದಾಗ ತಮ್ಮ ಸಮುದಾಯದವರಿಗೆ ತೊಂದರೆ ಆದಾಗ ಅಶ್ರಫ್ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಹೋರಾಟ, ಪ್ರತಿಭಟನೆ ಮಾಡುತ್ತಾರೆ. ಇದು ಕಾಂಗ್ರೆಸ್ಸಿನ ಒಳಗಿನವರ ಕೆಂಗೆಣ್ಣಿಗೆ ಗುರಿಯಾಗುತ್ತದೆ. ನಾವು ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕಿಗೆ ಮಾತ್ರ ಬಳಸಿಕೊಂಡರೆ ಈ ಅಶ್ರಫ್ ನಿಜಕ್ಕೂ ಅವರ ಪರವಾಗಿ ಹೋರಾಟ ಮಾಡುತ್ತಾನಲ್ಲ ಎಂದು ನಾಯಕರಿಗೆ ಚಾಡಿ ಹೇಳುತ್ತಾರೆ. ಹಿತ್ತಾಳೆ ಕಿವಿಯವರು ನಂಬಿ ಅವರನ್ನು ದೂರ ಇಡಲು ಶುರು ಮಾಡುತ್ತಾರೆ.

ಮಸೀದಿಯ ಪಕ್ಕ ಸಾರ್ವಜನಿಕ ಟಾಯ್ಲೆಟ್….

ಅದರ ನಂತರ ತಾವು ಕಾಂಗ್ರೆಸ್ಸನಲ್ಲಿ ಇದ್ದರೆ ಕೇವಲ ಬೂಟಾಟಿಕೆಗೆ ಮಾತ್ರ, ಅದರಿಂದ ತಮ್ಮ ಸಮಾಜಕ್ಕೆ ಏನು ಒಳ್ಳೆಯದಾಗುವುದಿಲ್ಲ ಎಂದು ಗ್ಯಾರಂಟಿ ಆದ ಕಾರಣ ಅವರು ಕಾಂಗ್ರೆಸ್ ನಿಂದ ಹೊರಗೆ ನಡೆದಿದ್ದಾರೆ. ಇತ್ತೀಚೆಗೆ ಶಾಸಕ ಜೆ ಆರ್ ಲೋಬೋ ಅವರು ಮುಸ್ಲಿಂ ಮತಗಳನ್ನು ಸೆಳೆಯುವುದಕ್ಕಾಗಿ ಬಾವುಟಗುಡ್ಡೆಯ ಈದ್ಗಾ ಮಸೀದಿಯ ಸನಿಹದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಕಟ್ಟಲು ಹೊರಟಿದ್ದರು. ಅದನ್ನು ಮೊದಲು ವಿರೋಧಿಸಿದವರೇ ಅಶ್ರಫ್. ಯಾಕೆಂದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಲೋಬೋ ಸಾರ್ವಜನಿಕ ಶೌಚಾಲಯ ಕಟ್ಟಿ ಕೊಡಬಹುದು. ಆದರೆ ಇಲೆಕ್ಷನ್ ಆದ ನಂತರ ಅದೇ ಶೌಚಾಲಯ ಕೊಳೆತು ನಾರುತ್ತದೆ. ಮಸೀದಿಯ ಪಕ್ಕದಲ್ಲಿ ಕಟ್ಟಲ್ಪಡುವುದರಿಂದ ಅದು ಮಸೀದಿಯ ಪಾವಿತ್ರತೆ ಹಾಳಾಗುವ ಸಂಭವ ಇದೆ. ಆದ್ದರಿಂದ ಅಶ್ರಫ್ ವಿರೋಧಿಸಿದ್ದಾರೆ. ಒಟ್ಟಿನಲ್ಲಿ ಜೀವದಂತಿದ್ದ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅಶ್ರಫ್ ಹೊರನಡೆದಿದ್ದಾರೆ. ಜಾತ್ಯಾತೀತ ಜನತಾದಳ ಸೇರಿದ್ದಾರೆ. ಅವರು ಎಲ್ಲಿದ್ದರೂ ಅದು ಆ ಪಕ್ಷದ ಆಸ್ತಿನೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search