ರಾಜಸ್ಥಾನದಲ್ಲಿ ಹಿಂದೂವೊಬ್ಬರ ಮದುವೆ ಸ್ಥಳಕ್ಕೆ ನುಗ್ಗಿ ಮುಸ್ಲಿಂ ಮೂಲಭೂತವಾದಿಗಳ ಗಲಾಟೆ, ಕ್ರಮಕ್ಕೆ ಒತ್ತಾಯ
ಜೈಪುರ: ದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳಿಂದ ಹಿಂದೂಗಳ ಬಲವಂತದ ಮತಾಂತರ, ಲವ್ ಜಿಹಾದ್, ಹಿಂದೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣ ಜಾಸ್ತಿಯಾಗುತ್ತಿವೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ರಾಜಸ್ಥಾನದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಹೊಸ ವರಸೆ ಆರಂಭಿಸಿದ್ದಾರೆ.
ರಾಜಸ್ಥಾನದ ಟಾಂಕ್ ಎಂಬ ಪ್ರದೇಶದಲ್ಲಿ ಗುಜಾರ್ ಸಮುದಾಯದ ವ್ಯಕ್ತಿಯೊಬ್ಬರ ಮದುವೆ ನಡೆಯುತ್ತಿದ್ದು, ಸ್ಥಳಕ್ಕೆ ಕೆಲವು ಮುಸ್ಲಿಂ ಮೂಲಭೂತವಾದಿಗಳು ನುಗ್ಗಿ, ಕಲ್ಲೆಸೆದು ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ಮಾಡಿದವರೆಲ್ಲರೂ ಮುಸ್ಲಿಮರೇ ಆಗಿದ್ದು, ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ ಕಾರಣ ಹಲವರು ಗಾಯಗೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಗುಜಾರ್ ಸಮುದಾಯ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಯುವ ಗುಜಾರ್ ಮಹಾಸಭಾ ನಗರ ಉಪಾಧ್ಯಕ್ಷ ಮಾತನಾಡಿದ್ದು, ಈ ಹಿಂದೆ ಮುಸ್ಲಿಮರು ಸವಾಯಿ ಮೋಧೋಪುರ್ ಎಂಬಲ್ಲಿ ಹಿಂದೂ ಕುಟುಂಬಗಳ ಮೇಲೆ ದಾಳಿ ಮಾಡಿದ್ದಾರೆ. ಈಗ ನಮ್ಮ ಮೇಲೂ ದಾಳಿ ಮಾಡಿದ್ದಾರೆ. ಮುಸ್ಲಿಮರ ಇಂತಹ ಉಪಟಳ ನಾವು ಸಹಿಸುವುದಿಲ್ಲ, ಪರಿಸ್ಥಿತಿ ಕೈ ಮೀರುವ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Leave A Reply