ಬಿಜೆಪಿ ಗೆದ್ದರೆ ಭಾರತ ಮಾತಾಕಿ ಜೈ, ಆರ್ ಜೆಡಿ ಸರ್ಫಾಜ್ ಅಲಂ ಗೆದ್ದರೆ ಪಾಕ್ ಗೆ ಜೈ. ಇದಲ್ಲವೇ ದುರಂತ
![](https://tulunadunews.com/wp-content/uploads/2018/03/pak-flag.png)
ಅರಾರಿಯಾ: ಭಾರತದ ರಾಜಕಾರಣದಲ್ಲಿ ಬಿಜೆಪಿ ವಿಭಿನ್ನವಾಗಿ ನಿಲ್ಲುವುದು ತನ್ನ ಎಲ್ಲ ಕಾರ್ಯಕ್ರಮಗಳಲ್ಲಿ, ವಿಜಯೋತ್ಸವದಲ್ಲಿ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎನ್ನುವ ಕಾರಣಕ್ಕೆ. ಆದರೆ ಬಿಜೆಪಿಯೇತರ ಪಕ್ಷಗಳವರು ಅದೇ ಮುಖಂಡರ, ಪಕ್ಷದ ಹೆಸರಿಗೆ ಜೈ ಅಂತಾರೆ. ಇನ್ನು ಕೆಲವು ದೇಶವಿರೋಧಿ ರಾಜಕೀಯ ಪಕ್ಷಗಳ ಬೆಂಬಲಿತರು ಪಾಕಿಸ್ತಾನಕ್ಕೆ ಜೈ ಅಂತಾರೆ. ಅಂತದ್ದೊಂದು ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ.
![](https://tulunadunews.com/wp-content/uploads/2018/03/araria_protest15032018.jpg)
ದೇಶವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ
ಇತ್ತೀಚೆಗೆ ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಸರ್ಫಾಜ್ ಅಲಂ ಬೆಂಬಲಿಗರು ಪಾಕಿಸ್ತಾನದ ಪರ ಜೈಘೋಷಣೆಗಳನ್ನು ಕೂಗುವ ಮೂಲಕ ದೇಶ ವಿರೋಧಿ ಎಂಬುದನ್ನು ಆರಂಭದಲ್ಲೇ ಸಾಬೀತು ಪಡಿಸಿದ್ದಾರೆ. ಸರ್ಫಾಜ್ ಅಲಂ ನ ಮೂವರು ಬೆಂಬಲಿಗರು ಈ ದೇಶ ವಿರೋಧಿ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ರಾಷ್ಟ್ರಭಕ್ತರ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವುದು ಸ್ಪಷ್ಟವಾಗಿದ್ದು, ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ರಾಷ್ಟ್ರಭಕ್ತ ಸಂಘಟನೆಗಳು ಬೀದಿಗಿಳದು ಹೋರಾಟ ಆರಂಭಿಸಿವೆ. ಇನ್ನು ವಿಡಿಯೋದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಮೂವರನ್ನು ಬಂಧಿಸುವ ಕುರಿತು ಪೊಲೀಸರು ಜಾಲ ಬೀಸಿದ್ದು, ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ಸಂಸದ ಮಹಮ್ಮದ್ ತಸ್ಲಿಮುದ್ದೀನ್ ಕಳೆದ ವರ್ಷ ನಿಧನರಾಗಿದ್ದರಿಂದ ಅರಾರಿಯಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಆ ಕ್ಷೇತ್ರದಲ್ಲಿ ತಸ್ಲಿಮುದ್ದೀನ್ ಮಗ ಸರ್ಫಾಜ್ ಅಲಂ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ವರದಿಗಳ ಪ್ರಕಾರ ಪಾಕ ಪರ ಘೋಷಣೆ ಕೂಗಿದವರು ಸರ್ಫಾಜ್ ಅಲಂ ಬೆಂಬಲಿಗರು ಎಂದು ತಿಳಿದು ಬಂದಿದೆ.
Leave A Reply