ಕಾಶ್ಮೀರದಲ್ಲಿ ಕಂಗೆಟ್ಟ ಉಗ್ರರು, ಬಿಜೆಪಿ ಮುಖಂಡನ ಮೇಲೆ ದಾಳಿ, ಸೈನ್ಯದಿಂದ ಪ್ರತಿದಾಳಿ
ಪುಲ್ವಾಮ: ಕರ್ನಾಟಕ, ಕೇರಳ ಸೇರಿ ನಾನಾ ಕಡೆ ರಾಷ್ಟ್ರಭಕ್ತ ಸಂಘಟನೆಗಳು, ಬಿಜೆಪಿ ಮುಖಂಡರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಯುತ್ತಿರುವುದು ಸಾಮಾನ್ಯ. ಆದರೆ ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರು ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ದಿಟ್ಟ ನಿರ್ಧಾರಗಳಿಂದ ಕಂಗಾಲಾಗಿರುವ ಭಯೋತ್ಪಾದಕರು ಮತ್ತು ಕೆಲವು ದೇಶ ದ್ರೋಹಿಗಳು ಬಿಜೆಪಿ ಮುಖಂಡರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವ ಅನುಮಾನ ಮೂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಮೇಲೆ ದಾಳಿ ನಡೆಸಿ, ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಅನ್ವರ್ ಖಾನ್ ಮೇಲೆ ಏಕಾಏಕಿ ಪಾಕ್ ಪ್ರಚೋಧಿತ, ದೇಶವಿರೋಧಿ ಕೃತ್ಯಗಳ ಬೆಂಬಲಿತ ಕೆಲ ಸ್ಥಳೀಯರ ಬೆಂಬಲದೊಂದಿಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ದಿಟ್ಟ ಕ್ರಮಗಳಿಂದ ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ನೆಲೆ ಕಳೆದುಕೊಂಡಿರುವ ಭಯೋತ್ಪಾದಕರು ಇದೀಗ ಬಿಜೆಪಿ ಮುಖಂಡರನ್ನೆ ಮುಗಿಸುವ ಹುನ್ನಾರ ನಡೆಸಿದ್ದಾರೆ. ದಾಳಿಯಲ್ಲಿ ಬಿಜೆಪಿ ಮುಖಂಡ ಅನ್ವರ್ ಖಾನ್ ಗೆ ಯಾವುದೇ ಪ್ರಾಣಾಪಾಯವಾಗಲಿಲ್ಲ. ದಾಳಿಯಲ್ಲಿ ಅನ್ವರ್ ಖಾನ್ ಜೊತೆಗಿದ್ದ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.
ಅನ್ವರ್ ಖಾನ್ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಭಯೋತ್ಪಾದಕರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಿಂದ ಬಿಜೆಪಿ ಅನ್ವರ್ ಖಾನ್ ರನ್ನು ರಕ್ಷಿಸಿದ್ದಾರೆ. ಇನ್ನು ಉಗ್ರರೊಂದಿಗಿನ ಹೋರಾಟದಲ್ಲಿ ಸೈನ್ಯದ ಓರ್ವ ಸಿಬ್ಬಂದಿಗೆ ಗಾಯಗಳಾಗಿವೆ.
Leave A Reply