ಬಿಹಾರದಲ್ಲಿ ‘ ಮೋದಿ ವೃತ್ತ’ ನಾಮಕರಣ ಮಾಡಿದಕ್ಕೆ ವ್ಯಕ್ತಿಯ ತಲೆ ಕಡಿದು ಕೊಲೆ
ದರ್ಬಾಂಗ್: ರೌಡಿ ರಾಜ್ಯ ಎಂದು ಕುಖ್ಯಾತಿ ಪಡೆದಿರುವ ಬಿಹಾರದಿಂದ ದೇಶವೆ ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದ್ದು, ವಿಶ್ವವೇ ಮೆಚ್ಚುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯೊಬ್ಬ ನರೇಂದ್ರ ಮೋದಿ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿದಕ್ಕೆ ಆತನ ತಲೆಯನ್ನು ಕಡಿದು ಕೊಲೆ ಮಾಡಲಾಗಿದೆ.
ಕೊಲೆಯಾದ ರಾಮಚಂದ್ರ ಯಾದವ್ ಪುತ್ರ
ಬಿಹಾರನ ದರ್ಭಾಂಗ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ರಾಮಚಂದ್ರ ಎಂಬುವವರು ವೃತ್ತವೊಂದಕ್ಕೆ ನರೇಂದ್ರ ಮೋದಿ ಅವರ ನಾಮಕರಣ ಮಾಡಿದ್ದಾರೆ. ಇದನ್ನು ವಿರೋಧಿಸಿದ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಕಾರ್ಯಕರ್ತರು ಹಾಕಿ ಸ್ಟಿಕ್ ಗಳು, ರಾಡ್ ಗಳು, ಕತ್ತಿಗಳೊಂದಿಗೆ ಬಂದ 40 ರಿಂದ 45ಜನ ರಾಮಚಂದ್ರ ಯಾದವ್ ಮತ್ತು ಅವರ ಮಗ ಕಮಲ್ ಯಾದವ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರಾಮಚಂದ್ರ ಯಾದವ್ ಅವರನ್ನು ಸ್ಥಳದಲ್ಲೇ ಕತ್ತಿಯಿಂದ ಕತ್ತರಿಸಿ ಹಾಕಲಾಗಿದೆ ಎಂದು ಅವರ ಮಗ ದೂರು ನೀಡಿದ್ದಾರೆ.
ಆರ್ ಜೆಡಿ ಪಕ್ಷದ ಬೆಂಬಲಿಗರು ವೃತ್ತದ ಹೆಸರನ್ನು ಲಾಲು ಪ್ರಸಾದ್ ಯಾದವ್ ಎಂದು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೇ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಆದ್ದರಿಂದ ವೃತ್ತದ ಹೆಸರು ಬದಲಾಯಿಸಬೇಕು ಎಂದು ಬೆದರಿಕೆ ಒಡ್ಡಿದ್ದರು ಎಂದು ರಾಮಚಂದ್ರ ಯಾದವ್ ಪುತ್ರ ತಿಳಿಸಿದ್ದಾರೆ.
25 ರಿಂದ 30 ಬೈಕ್ ಗಳ ಮೇಲೆ ಹಾಕಿ ಸ್ಟಿಕ್, ಕಬ್ಬಿಣದ ರಾಡ್ ಗಳನ್ನು ತೆಗೆದುಕೊಂಡು ಬಂದ 40ರಿಂದ 45ಜನರ ತಂಡ ನನ್ನ ತಂದೆಯ ಮೇಲೆ ದಾಳಿ ನಡೆಸಿದೆ. ನನ್ನ ತಂದೆಗೆ ಮಾತನಾಡಲು ಅವಕಾಶ ನೀಡದೇ ಅವರನ್ನು ಕತ್ತರಿಸಿ ಹಾಕಲಾಗಿದೆ. ಅಲ್ಲದೇ ನನ್ನ ಸಹೋದರನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಕೊಲೆಗೀಡಾಗಿರುವ ರಾಮಚಂದ್ರ ಯಾದವ್ ಮಗ ನಾರಾಯಣ್ ಯಾದವ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಕಟುಕರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂದಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ದರ್ಬಾಂಗ್ ಡಿಎಸ್ ಪಿ ದಿಲ್ ನವಾಜ್ ಅಹ್ಮದ್ ತಿಳಿಸಿದ್ದಾರೆ.
Leave A Reply