ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲಿಸಲು ರಾಹುಲ್ ಗಾಂಧಿಗೆ ವಾಸೀಮ್ ರಿಜ್ವಿ ಪತ್ರ
ದೆಹಲಿ: ಕೋಟ್ಯಂತರ ಹಿಂದೂಗಳ ಅಸ್ಮಿತೆಯ ಕೇಂದ್ರ ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ಶ್ರೀರಾಮನ ಬೃಹತ್ ಮಂದಿರ ನಿರ್ಮಿಸಬೇಕು ಮತ್ತು ಲಖನೌನಲ್ಲಿ ಮಸೀದ್ ಈ ಅಮನ್ ಮಸೀದಿಯನ್ನು ನಿರ್ಮಿಸಲು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ಶಿಯಾ ಮುಸ್ಲಿಂ ವಕ್ಫ್ ಬೋರ್ಡ್ ಕಾರ್ಯದರ್ಶಿ ವಾಸೀಮ್ ರಿಜ್ವಿ ಪತ್ರ ಬರೆದಿದ್ದಾರೆ.
2017ರ ನವೆಂಬರ್ ನಲ್ಲಿ ಶಿಯಾ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಮಾತುಕತೆ ಮೂಲಕ ರಾಮಮಂದಿರ ವಿವಾದವನ್ನು ಬಗೆಹರಿಸಬೇಕು ಎಂದು ಸಲಹೆ ನೀಡಿದ್ದರು. ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಆಗ್ರಹಕ್ಕೆ ಬೆಂಬಲವಾಗಿ ನಿಂತಿದ್ದರು. ಈ ಕುರಿತು ಎಲ್ಲ ಪಕ್ಷಗಳೊಂದಿಗೆ, ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸಿದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಲಖೌನನಲ್ಲಿ ಮಸೀದಿ ನಿರ್ಮಿಸಿ ಕೊಡಬೇಕು ಎಂಬ ಆಗ್ರಹಕ್ಕೆ ಒಪ್ಪಿಗೆ ನೀಡಲಾಗಿತ್ತು ಎಂದು ವಾಸೀಮ್ ರಿಜ್ವಿ ತಿಳಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.
Leave A Reply