ನಿಲ್ಲದ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ, ಶಾಸಕ ಭೈರತಿ ಬಸವರಾಜು ಬೆಂಬಲಿಗನಿಂದ ವ್ಯಕ್ತಿಗೆ ಇರಿತ!
ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಮಾಡಿ ಜೈಲು ಸೇರಿರುವ ಬೆನ್ನಲ್ಲೇ, ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಹಾಕಿ ಸುಡುವೆ ಎಂದು ಗೂಂಡಾಗಿರಿ ನಡೆಸಿದ ಬೆನ್ನಲ್ಲೇ, ಕಾಂಗ್ರೆಸ್ಸಿನ ಮತ್ತೊಬ್ಬ ಮುಖಂಡ ಗೂಂಡಾಗಿರಿ ಮಾಡಿದ್ದಾರೆ.
ಹೌದು, ಶಾಸಕ ಭೈರತಿ ಬಸವರಾಜು ಬೆಂಬಲಿಗ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಸುರೇಶ್ ಎಂಬಾತ ಬೆಂಗಳೂರಿನ ಕಾಡುಗೋಡಿ ಬಳಿ ವ್ಯಕ್ತಿಗೆ ಚಾಕುವಿನಿಂದ ಇರಿದು, ಗೂಂಡಾಗಿರಿ ಪ್ರದರ್ಶಿಸಿದ್ದಾರೆ.
ಮಾರ್ಚ್ 17ರಂದು ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಖಂಡ ಸುರೇಶ್ ಕಾಡುಗೋಡಿ ಬಳಿ ನಿಂತಿದ್ದು, ಹಿಂದಿನಿಂದ ವಾಹನದಲ್ಲಿ ಬಂದ ಸಾಮಾಜಿಕ ಹೋರಾಟಗಾರ ಪರಮೇಶ್ವರ್ ದಾರಿ ಬಿಡಲು ಹಾರ್ನ್ ಮಾಡಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಸುರೇಶ್ ಪರಮೇಶ್ವರ್ ಅವರಿಗೆ ಚಾಕುವಿನಿಂದ ಇರಿದಿದ್ದಾರೆ.
ಸಾಮಾಜಿಕ ಹೋರಾಟಗಾರ ಪರಮೇಶ್ವರ್ ಈ ಹಿಂದೆ ಹಲವು ಬಾರಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಕೇಸ್ ಹಾಕಿದ್ದಲ್ಲದೆ, ಮಾಹಿತಿ ಹಕ್ಕು ಕಾಯಿದೆ ಬಳಸಿ ಅವರ ವಿವಿಧ ಹಗರಣ ಬಯಲಿಗೆ ಎಳೆದಿದ್ದರು. ಇದೇ ಸಿಟ್ಟಿನಲ್ಲಿ ಸುರೇಶ್ ಬೇಕು ಅಂತಲೇ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಪರಮೇಶ್ವರ್ ಅವರು ಕಾಂಗ್ರೆಸ್ ಮುಖಂಡ ಸುರೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಪೆಟ್ರೋಲ್ ಸುರಿದು ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚುತ್ತೇನೆ ಎಂದು ರೌಡಿಸಂ ಮಾಡಿದ್ದ ನಾರಾಯಣ ಸ್ವಾಮಿ ಸಹ ಭೈರತಿ ಬಸವರಾಜ್ ಬೆಂಬಲಿಗ ಎಂದೇ ಹೇಳಲಾಗಿತ್ತು.
Leave A Reply