ಸೈನ್ಯಕ್ಕೆ ಕೇಂದ್ರದ ಭರ್ಜರಿ ಕೊಡುಗೆ: ಸಿಆರ್ ಫಿಎಫ್ ಗೆ 100 ಬುಲೆಟ್ ಫ್ರೂಫ್ ವಾಹನ
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ಉಗ್ರ ಕೃತ್ಯಗಳನ್ನು ಸದೆ ಬಡೆಯಲು ಹಲವು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿದೆ. ಅಲ್ಲದೇ ಸೈನಿಕರಿಗೆ ಬೇಕಾದ ಪೂಕರ ಸೌಲಭ್ಯಗಳನ್ನು ಅತಿ ಹೆಚ್ಚಿನ ಕಾಳಜಿ ವಹಿಸಿ, ಪೂರೈಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ತರ ನಿರ್ಧಾರ ಕೈಗೊಂಡಿದ್ದು ಸಿಆರ್ ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಭಯೋತ್ಪಾದಕರು ಸೈನಿಕರ ಮೇಲೆ ದಾಳಿ ನಡೆಸಿದಾಗ ಸೈನಿಕರ ರಕ್ಷಣೆಗಾಗಿ ಈ ನಿರ್ಧಾರ ಕೈಗೊಂಡಿದ್ದು, ವಿಶೇಷವಾಗಿ ಕಾಶ್ಮೀರದಲ್ಲಿ ಉಗ್ರರ ಉಪಟಳದಿಂದ ಸೈನಿಕರಿಗೆ ರಕ್ಷಣೆ ನೀಡಲಿದೆ. ಕೇಂದ್ರ ಸರ್ಕಾರ 141 ಬುಲೆಟ್ ಫ್ರೂಫ್ ವಾಹನಗಳನ್ನು ನೀಡುವ ಪ್ರಸ್ತಾವನೆ ನೀಡಿದ್ದು, ಇನ್ನು ಎರಡು ತಿಂಗಳಲ್ಲಿ ಮೊದಲ ಹಂತದಲ್ಲಿ 20 ವಾಹನಗಳು ಸೈನ್ಯದ ಕೈಸೇರಲಿವೆ.
ಛತ್ತಿಸಗಡ್ದ ಭಾರತ-ಟಿಬೆಟ್ ಗಡಿಯಲ್ಲಿ 20, ಜಮ್ಮು ಕಾಶ್ಮೀರದ ಸಶಸ್ತ್ರ ಸೀಮಾ ದಳಕ್ಕೆ 15 ಆರಂಭಿಕ ಹಂತದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ನೂತನ ಬುಲೆಟ್ ಫ್ರೂಫ್ ವಾಹನಗಳು ಎಕೆ ಸಿರೀಸ್ ಸಂಖ್ಯೆಯ ಗನ್ ಗಳ ಬುಲೆಟ್ ಗಳಿಂದ ರಕ್ಷಣೆ ನೀಡುತ್ತವೆ. ವಿಶೇಷವಾಗಿ ಭಯೋತ್ಪಾದಕ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್ ಈ ತಯ್ಯಬಾ, ಜೈಷ್ ಎ ಮಹಮ್ಮದ್ ಸಂಘಟನೆಗಳು ಬಳಸುವ ಗನ್ ಗಳನ್ನು ಗಮನದಲ್ಲಿಟ್ಟುಕೊಂಡು ಈ ವಾಹನಗಳನ್ನು ಖರೀದಿಸಲಾಗಿದೆ. ಪ್ರತಿ ವಾಹನ 10 ರಿಂದ 12 ಯೋಧರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ.
Leave A Reply