ಐಸಿಸ್ ನಿರ್ನಾಮಕ್ಕೆ ಸುಬ್ರಮಣಿಯನ್ ಸ್ವಾಮಿ ನೀಡಿದ ಭರ್ಜರಿ ಪ್ಲಾನ್ ಏನು ಗೊತ್ತೆ..?
ದೆಹಲಿ: ಮೌಸುಲ್ ನಲ್ಲಿ 39 ಭಾರತೀಯರನ್ನು ಕೊಲೆ ಮಾಡಿರುವ ಐಸಿಸ್ ಭಯೋತ್ಪಾದಕರ ವಿರುದ್ಧ ಇಡೀ ವಿಶ್ವವೇ ಸಿಡಿದು ನಿಂತಿದೆ. ಐಸಿಸ್ ನಿರ್ನಾಮ ಮಾಡದೇ ವಿಶ್ವಕ್ಕೆ ಶಾಂತಿ ದೊರಕುವುದಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ಭಾರತ ಸೇರಿ ವಿಶ್ವದ ಭಾಗಶಃ ರಾಷ್ಟ್ರಗಳು ಐಸಿಸ್ ವಿರುದ್ಧ ಸಿಡಿದೆದ್ದು, ಇದೀಗ ಭಾರತ 39 ನಿವಾಸಿಗಳನ್ನು ಕಳೆದುಕೊಂಡು ಕುದ್ದು ಹೋಗಿದೆ. ಆದ್ದರಿಂದ ಐಸಿಸ್ ನಿರ್ನಾಮಕ್ಕೆ ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭರ್ಜರಿ ಯೋಜನೆಯೊಂದ ಸಲಹೆ ನೀಡಿದ್ದಾರೆ.
ಐಸಿಸ್ ನಿರ್ನಾಮವಾಗಬೇಕಾದರೆ ಬದಲಾಗಬೇಕು ಕಾರ್ಯ ಶೈಲಿ. ಐಸಿಸ್ ಕೊಳಕರನ್ನು ಹತ್ತಿಕ್ಕಲು ಭಾರತದ ಮಾನವ ಶಕ್ತಿ, ಅಮೆರಿಕಾದ ಅಸ್ತ್ರದ ತಾಕತ್ತು ಮತ್ತು ಇಸ್ರೇಲ್ ದೇಶದ ಬುದ್ಧಿಮತ್ತೆಯನ್ನು ಒಗ್ಗಟ್ಟಾಗಿ ಬಳಸಿಕೊಂಡರೇ ನಿಶ್ಚಿತವಾಗಿ ಐಸಿಸ್ ನನ್ನು ಬಗ್ಗು ಬಡಿಯಬಹುದು ಎಂಬ ಸಲಹೆ ನೀಡಿದ್ದಾರೆ. ಐಸಿಸ್ ನ್ನು ನಿರ್ನಾಮ ಮಾಡಲು ನಿಶ್ಚಿತವಾಗಿ ಸಂಯುಕ್ತ ಬಲ ನಿರ್ಮಿಸಿಕೊಳ್ಳಬೇಕು. ಎಲ್ಲ ರಾಷ್ಟ್ರಗಳು ಒಗ್ಗೂಡಿ ಕಾರ್ಯಾಚರಣೆ ನಡೆಸಿದಾಗ ಮಾತ್ರ ಐಸಿಸ್ ದುಷ್ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
ಸಂಸತ್ ನಲ್ಲಿ ಕಾಂಗ್ರೆಸ್ ಭಾರತೀಯರ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಎಲ್ಲ ಭಾರತೀಯರ ಕಳೆಬರಹವನ್ನು ವಾಪಸ್ಸ ತರಲು ಕ್ರಮ ಕೈಗೊಂಡಿದ್ದಾರೆ. ಆದರೆ ಸಕಾರಾತ್ಮಕ ಸಲಹೆ ನೀಡಬೇಕಾದ ಕಾಂಗ್ರೆಸ್ ಸರ್ಕಾರ ಕೇವಲ ಕಾಟಾಚಾರಕ್ಕೆ ಪ್ರತಿಭಟನೆ ಮಾಡುತ್ತ ಸಂಸತ್ ಸಮಯವನ್ನು ಹಾಳು ಮಾಡುತ್ತಿದೆ. ಆದರೆ ಇದೆಲ್ಲದ ಮಧ್ಯೆ ಸುಬ್ರಮಣಿಯನ್ ಸ್ವಾಮಿ ನೀಡಿರುವ ಸಲಹೆಗೆ ಬಾರಿ ಶ್ಲಾಘನೆ ವ್ಯಕ್ತವಾಗಿದೆ.
Leave A Reply