ಮೂರು ದಶಕ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿ, ಯಾತ್ರೆ ಮುಗಿಸಿದ ಐಎನ್ ಎಸ್ ಗಂಗಾ
ಮುಂಬೈ: ಭಾರತೀಯ ನೌಕಾ ದಳಕ್ಕೆ ಮಹತ್ವದ ಕೊಡುಗೆ ನೀಡಿದ, ರಕ್ಷಣಾ ದಳಕ್ಕೆ ಹೊಸ ತಾಕತ್ತು ನೀಡಿದ್ದ, ಮೂರು ದಶಕಗಳ ಕಾಲ ಭಾರತೀಯ ನೌಕದಳದ ಶಕ್ತಿಯಾಗಿದ್ದ ಐಎನ್ ಎಸ್ ಗಂಗಾ ನೌಕೆ ತನ್ನ ಯಾತ್ರೆ ಗುರುವಾರ ಯಶಸ್ವಿಯಾಗಿ ಮುಗಿಸಿತು. ಅಧಿಕೃತವಾಗಿ ಮಾರ್ಚ್ 22ರಂದು ತನ್ನ ಕಾರ್ಯ ಚಟುವಟಿಕೆಗಳಿಗೆ ಗಂಗಾ ನೌಕೆ ವಿರಾಮ ಘೋಷಿಸಿದ್ದು, ಕೇಂದ್ರ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ಶುಕ್ರವಾರ ನಡೆಯಿತು.
1985 ಡಿಸೆಂಬರ್ 30 ರಂದು ದೇಶದ ನೌಕಾ ದಳಕ್ಕೆ ಸೇರ್ಪಡೆಯಾಗಿದ್ದ ಐಎನ್ ಎಸ್ ಗಂಗಾ ನೌಕೆ ರಕ್ಷಣಾ ವಲಯದಲ್ಲಿ ಹೊಸ ತಾಕತ್ತು ನೀಡಿತ್ತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ನೌಕೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿ ನಿವೃತ್ತರಾದ ಅಧಿಕಾರಿಗಳು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ ವಿಶೇಷ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಮತ್ತು ಕೊನೆಯದಾಗಿ ಗಂಗಾ ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಮಾಂಡಿಂಗ್ ಆಫಿಸರ್ ಕ್ಯಾಪ್ಟನ್ ಎನ್ ಪಿ ಪ್ರದೀಪ್ ನೇತೃತ್ವದಲ್ಲಿ ವಿದಾಯ ಕಾರ್ಯ ಕ್ರಮ ನಡೆಯಿತು. ವೈಸ್ ಅಡ್ಮಿರಲ್ ಎಕೆ ಭಾಲ್, ವೈಸ್ ಅಡ್ಮಿರಲ್ ನಿವೃತ್ತ ಕೆ.ಕೆ.ಕೋಹ್ಲಿ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Leave A Reply