ಯುಪಿ ಪೊಲೀಸ್ ಭರ್ಜರಿ ಕಾರ್ಯಾಚರಣೆ, ಪಾತಕಿಯ ಎನ್ಕೌಂಟರ್, ಎಕೆ 47 ಗನ್, 1 ಲಕ್ಷ ರೂ. ವಶಕ್ಕೆ
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದ ಗುಂಡಾರಾಜ್ಯವಾಗಿದ್ದ ಉತ್ತರ ಪ್ರದೇಶವನ್ನು ಶಾಂತಿ ಸುವ್ಯವಸ್ಥೆಯ ನಾಡನ್ನಾಗಿ ಬದಲಾಯಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಅಪರಾಧಿಗಳನ್ನು ಹತ್ತಿಕ್ಕಲು ಉತ್ತರ ಪ್ರದೇಶ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಶನಿವಾರ ಭಾರಿ ಕಾರ್ಯಾಚರಣೆ ನಡೆಸಿದ್ದು, ಪಾತಕಿಯೊಬ್ಬನನ್ನು ಎನ್ ಕೌಂಟರ್ ಮಾಡಿ, ಬಿಸಾಕಿದ್ದು, ಆತನಿಂದ ಎಕೆ 47 ಗನ್ ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾ ಬಳಿ ಎನ್ ಕೌಂಟ್ ನಡೆದಿದ್ದು, ಪಾತಕಿ ಶ್ರವಣ್ ಚೌದರಿ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಶ್ರವಣ್ ಚೌದರಿಯ ಒಂದು ಮೋಟಾರ್ ಸೈಕಲ್, ಒಂದು ಲಕ್ಷ ಹಣ ಮತ್ತು ಎಕೆ 47 ಗನ್ ಸೇರಿ ನಾನಾ ಆಯುದ್ಧಗಳನ್ನು ವಶಕ್ಕೆ ಪಡೆಯಲಾಗಿದೆ.
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಇದುವರೆಗೆ 1100 ಎನ್ ಕೌಂಟರ್ ಗಳು ನಡೆದಿದ್ದು, 34 ಕ್ರಿಮಿನಲ್ ಗಳು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. 265 ಪಾತಕಿಗಳು ಗಾಯಾಳುಗಳಾಗಿದ್ದಾರೆ. 2774 ರೌಡಿ ಶೀಟರ್ ಗಳು ಬಂಧಿಸಲಾಗಿದೆ. ಯೋದಿ ಆದಿತ್ಯನಾಥ್ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಇದೀಗ ಇಡೀ ಉತ್ತರ ಪ್ರದೇಶದಲ್ಲಿ ಬದಲಾವಣೆಯ ಪರ್ವ ಬೀಸುತ್ತಿದೆ. ಅಲ್ಲದೇ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಪರಾಧ ಲೋಕದಿಂದ ಹೊರ ಬಂದಿರುವ ಕ್ರಿಮಿನಲ್ ಗಳು ಇದೀಗ ಸ್ವಾವಲಂಭಿ ಜೀವನ ಸಾಗಿಸಲು ಯತ್ನಿಸುತ್ತಿದ್ದು, ತರಕಾರಿ, ಹಣ್ಣು ಮಾರಾಟ ಸೇರಿ ನಾನಾ ಉದ್ಯೋಗದಲ್ಲಿ ತೊಡಗಿಸಿದ್ದು ಗಮನಾರ್ಹ.
Leave A Reply