ನಾಲ್ವರು ಮಹಿಳಾ ಕೆಂಪು ಉಗ್ರರ ಹೊಡೆದುರುಳಿಸಿದ ಒಡಿಸ್ಸಾ ಪೊಲೀಸರು
ಕೋರಾಪತ್: ದೇಶದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಮಿತಿ ಹೇರುವ ಕೇಂದ್ರ ಸರ್ಕಾರದ ದಿಟ್ಟ ನಡೆಗಳಿಂದ ನಿತ್ಯ ಮಾವೋವಾದಿಗಳ ಹುಟ್ಟಡಿಸುವ ಕಾರ್ಯವನ್ನು ಸೈನಿಕರು, ಆಯಾ ರಾಜ್ಯಗಳ ಪೊಲೀಸರು ಮುಂದುವರಿಸಿದ್ದಾರೆ. ಒಡಿಸ್ಸಾದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಭಾನುವಾರ ರಾತ್ರಿ ನಾಲ್ವರು ಮಹಿಳಾ ನಕ್ಸಲರನ್ನು ಹೊಡೆದುರುಳಿಸಿದ್ದು, ಉಳಿದಂತೆ ಇನ್ನಷ್ಟು ಕೆಂಪು ಉಗ್ರರನ್ನು ಸದೆ ಬಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಹರ್ಯಾಣದ ಕೊರಾಪತ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಭಾರಿ ಕಾರ್ಯಚರಣೆ ನಡೆಸಲಾಗಿದೆ. ಆಂಧ್ರಪ್ರದೇಶ ಒಡಿಸ್ಸಾ ಗಡಿಯಲ್ಲಿರುವ ಡಿಕ್ರಿ ಘಾಟ್ ನಲ್ಲಿ ಜಿಲ್ಲೆಯ ನಕ್ಸಲ ನಿಯಂತ್ರಣ ತಂಡದ ನೇತೃತ್ವದೊಂದಿಗೆ ದಾಳಿ ನಡೆಸಿ, ನಕ್ಸಲರನ್ನು ಸದೆ ಬಡೆಯುವ ಕಾರ್ಯಚರಣೆ ನಡೆಸಲಾಗಿದೆ.
ದಾಳಿ ನಡೆಸುವ ಮುನ್ನ ಕೆಲವೇ ಕ್ಷಣಗಳಲ್ಲಿ ಮಾವೋವಾದಿಗಳು ಆ ಸ್ಥಳದಿಂದ ಬೇರೆಡೆ ಪರಾರಿಯಾಗುವ ಲಕ್ಷಗಳಿತ್ತು. ಸೂಕ್ತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ, ನಾಲ್ವರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ಇನ್ನು ಮುಂದುವರಿದಿದೆ ಎಂದು ಕೊರಾಪತ್ ಐಜಿ ಆರ್ ಪಿ ಕೊಚ್ಚೆ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಡೊಕ್ರಾ ಘಾಟ್ ನಲ್ಲಿ ಮಾವೋವಾದಿ ಚಟುವಟಿಕೆಗಳು ತೀವ್ರ ಚುರುಕುತನ ಪಡೆದುಕೊಂಡಿದ್ದವು. ಎರಡು ದಿನದ ಹಿಂದೆ ಮಲ್ಕನಗಿರಿ ಜಿಲ್ಲೆಯ ತುಲ್ಸಿ ಡೊಂಗರ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.
Leave A Reply