ನಮ್ಮ ವೈಯಕ್ತಿಕ ಬದುಕಿನೊಳಕ್ಕೆ ಇಣುಕಿ ನೋಡುವ ದುಷ್ಟ ಕಾಂಗ್ರೆಸ್ಸು!
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸು ಮುಖಭಂಗವನ್ನು ಅನುಭವಿಸಿದೆ. ಕಳೆದ ವರ್ಷ ಇಂಗ್ಲೆಂಡಿನ ಕೇಂಬ್ರಿಡ್ಜ್ ಅನಾಲಿಟಿಕಾದೊಂದಿಗೆ ಒಪ್ಪಂದ ಮಾಡಿಕೊಂಡು ಮೋದಿಯನ್ನು ಮಣಿಸಲು ಸರ್ವ ಸನ್ನದ್ಧರಾಗಿದ್ದೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ಸು ಈಗ ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದಿದೆ. ಜಾತಿ-ಮತ-ಪಂಥಗಳನ್ನು ವಿಭಜಿಸಿ ವೋಟು ಗಳಿಸುವ ತನ್ನ ಎಪ್ಪತ್ತು ವರ್ಷಗಳ ಹಳೆಯ ಚುನಾವಣಾ ಚಾಳಿಯಿಂದ ಹೊರಬರಲು ಅದಕ್ಕೆ ಇನ್ನೂ 70 ವರ್ಷಗಳೇ ಬೇಕೇನೊ! ಕೇಂಬ್ರಿಡ್ಜ್ ಅನಾಲಿಟಿಕಾದಂತಹ ಸಂಸ್ಥೆಗಳಿಗೆ ತಮ್ಮನ್ನು ತಾವು ಸಂಪೂರ್ಣ ಶರಣಾಗಿಸಿಕೊಂಡ ಕನರ್ಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಮ್ಮದ್ದೇ ಹೆಸರಿನ ಅಪ್ಲಿಕೇಶನ್ ಅನ್ನು ತುತರ್ಾಗಿ ಪ್ಲೇ ಸ್ಟೋರ್ನಿಂದ ತೆಗೆದು ಹಾಕಿ ಮಾನ ಉಳಿಸಿಕೊಂಡಿದ್ದಾರೆ. ಹಾಸ್ಯಾಸ್ಪದ ಸಂಗತಿ ಎಂದರೆ ನರೇಂದ್ರ ಮೋದಿಯವರ ಆ್ಯಪ್ ಅನ್ನು ತಮ್ಮ ಮೊಬೈಲುಗಳಿಂದ ತೆಗೆದು ಬಿಸಾಡಿ ಎಂಬ ಅಭಿಯಾನ ಆರಂಭಿಸಿದ ಕಾಂಗ್ರೆಸ್ಸು ಈ ಅಭಿಯಾನ ಮುಗಿಯುವ ಮೊದಲೇ ತನ್ನದೇ ಆ್ಯಪ್ ಅನ್ನು ತೆಗೆದು ಬಿಸಾಡುವ ದಾರುಣ ಸ್ಥಿತಿಗೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ಈ ಅಭಿಯಾನದ ಹೊತ್ತಲ್ಲಿ ನಮೋ ಆ್ಯಪ್ ನ ಬಗ್ಗೆ ಗೊತ್ತಿರದಂತ ಅನೇಕರು ತಾವೂ ಡೌನ್ಲೋಡ್ ಮಾಡಿಕೊಂಡು ಕಾಂಗ್ರೆಸ್ಸಿಗೆ ಸರಿಯಾದ ತಪರಾಕಿಯನ್ನೇ ಕೊಟ್ಟಿದ್ದರು.
ಇಷ್ಟಕ್ಕೂ ಆದದ್ದೇನು ಗೊತ್ತೇ? ಬ್ರಿಟನ್ ಯೂರೋಪಿನಿಂದ ಹೊರಹೋಗುವಲ್ಲಿ ಮತ್ತು ಡೊನಾಲ್ಡ್ ಟ್ರಂಪ್ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಅಧ್ಯಕ್ಷ ಪದವಿಗೆ ಏರುವಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಕಂಪೆನಿಯೊಂದರ ಕೊಡುಗೆಯಿದ್ದದ್ದು ಸ್ಪಷ್ಟವಾಗಿ ಕಂಡು ಬಂದಿತ್ತು. ಈ ಕಂಪೆನಿಯನ್ನೇ ಮೋದಿಯನ್ನು ಹಣಿಯಲು ತಾವು ಬಳಸಬೇಕೆಂದು ನಿರ್ಧರಿಸಿತು ಕಾಂಗ್ರೆಸ್ಸು! ಅದಕ್ಕೆ ಪೂರಕವಾಗಿ ಒಪ್ಪಂದವೂ ಆಯ್ತು. ಕೇಂಬ್ರಿಡ್ಜ್ ಅನಾಲಿಟಿಕಾ ಭಾರತದಲ್ಲಿ ಅನೇಕ ಕಡೆಗಳಲ್ಲಿ ತನ್ನ ಕಚೇರಿಗಳನ್ನು ತೆರೆದು ಗುಜರಾತಿನ ಚುನಾವಣೆಗೆ ತನ್ನ ದಾಳ ಎಸೆಯಿತು. ಅಲ್ಲಿ ಹಾದರ್ಿಕ್, ಜಿಗ್ನೇಶ್, ಅಲ್ಪೇಶ್ ಈ ಮೂವರನ್ನು ಬಳಸಿಕೊಂಡು ಹಿಂದುಗಳನ್ನು ಒಡೆಯುವ ಮತ್ತು ರಾಹುಲ್ ಗಾಂಧಿಗೆ ಜನಿವಾರಧಾರಿ ಬ್ರಾಹ್ಮಣನ ರೂಪಕೊಡುವ ಆಲೋಚನೆ ರೂಪುಗೊಂಡದ್ದೇ ಕೇಂಬ್ರಿಡ್ಜ್ ಅನಾಲಿಟಿಕಾದಿಂದ. ಆ ಮೂಲಕ ಹಿಂದೂ ಧರ್ಮದಿಂದ ದಲಿತರನ್ನು ಪಟೇಲರನ್ನು ಪ್ರತ್ಯೇಕಗೊಳಿಸಿ, ಅವರ ವೋಟನ್ನು ಖಾತ್ರಿ ಮಾಡಿಕೊಳ್ಳುವುದಷ್ಟೇ ಅಲ್ಲದೇ, ಕಠೋರ ಹಿಂದುಗಳ ಹೃದಯದಲ್ಲೂ ಕಾಂಗ್ರೆಸ್ಸಿನ ಕುರಿತಂತೆ ಮೃದು ಧೋರಣೆಯನ್ನು ಉಂಟುಮಾಡುವ ಯೋಜನೆ ರೂಪಿಸಿತ್ತು ಕೇಂಬ್ರಿಡ್ಜ್ ಅನಾಲಿಟಿಕಾ. ಗುಜರಾತ್ನ ಚುನಾವಣೆಯ ಒಟ್ಟಾರೆ ಓಟವನ್ನು ನೋಡಿದವರಿಗೆ ಕಾಂಗ್ರೆಸ್ಸಿನ ಒಡೆದು ಆಳುವ ನೀತಿ ಸ್ಪಷ್ಟವಾಗಿ ಅರಿವಾಗಿರಲಿಕ್ಕೆ ಸಾಕು. ಅದರ ಹಿಂದು-ಹಿಂದೆಯೇ ಜಿಗ್ನೇಶ್ನ ಮೂಲಕ ಕಾಂಗ್ರೆಸ್ಸು ಮಹಾರಾಷ್ಟ್ರದಲ್ಲಿ ಇದೇ ಪ್ರಯತ್ನಕ್ಕೆ ಕೈ ಹಾಕಿತು, ಕೊನೆಗೆ ಕನರ್ಾಟಕದಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿ, ಅವರನ್ನು ಕಾಂಗ್ರೆಸ್ಸಿನ ಮತದಾರರಾಗುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿತು.
ಎಲ್ಲವೂ ಸರಿಯಾಗಿದ್ದಿದ್ದರೆ ಯಾವ ಸಮಸ್ಯೆಯೂ ಇರಲಿಲ್ಲ. ಒಬ್ಬ ಕ್ರಿಸ್ಟೋಫರ್ ವಿಲಿ ಕಾಂಗ್ರೆಸ್ನ ಭವಿಷ್ಯವನ್ನೇ ತಲೆಕೆಳಗು ಮಾಡಿಬಿಟ್ಟ. ಕೇಂಬ್ರಿಡ್ಜ್ ಅನಾಲಿಟಿಕಾದ ಹಳೆಯ ಉದ್ಯೋಗಿಯಾಗಿದ್ದ ಆತ ಈ ಸಂಸ್ಥೆ ಹೇಗೆ ಫೇಸ್ಬುಕ್ನಲ್ಲಿರುವ ನಮ್ಮ ಮಾಹಿತಿಗಳನ್ನು ಕದ್ದು ಅದನ್ನು ಜನಾಭಿಪ್ರಾಯ ರೂಪಿಸಲು ಬಳಸುತ್ತದೆ ಎಂಬುದನ್ನು ವಿವರವಾಗಿ ಜಗತ್ತಿನ ಮುಂದೆ ತೆರೆದಿಟ್ಟ. ಬ್ರಿಟನ್ ಯೂರೋಪಿಯನ್ ಯುನಿಯನ್ನಿಂದ ಆಚೆ ಬರುವಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬನನ್ನೂ ಪರೋಕ್ಷವಾಗಿ ಪ್ರಭಾವಿಸಿದ್ದು ಇದೇ ಸಂಸ್ಥೆ ಎಂದು ಹೇಳಿದ. ಸೋಲುವ ಎಲ್ಲ ಲಕ್ಷಣಗಳನ್ನು ಹೊಂದಿದ್ದು ಡೊನಾಲ್ಡ್ ಟ್ರಂಪ್ನನ್ನು ವ್ಯವಸ್ಥಿತವಾಗಿ ಗೆಲುವಿನತ್ತ ಕೊಂಡೊಯ್ದದ್ದು ಇದೇ ಕಂಪೆನಿ ಎಂದ. ಹಾಗೆ ಸೋಲುಗಳನ್ನು ಗೆಲುವಾಗಿ ಮಾರ್ಪಡಿಸಲು ಕೇಂಬ್ರಿಡ್ಜ್ ಅನಾಲಿಟಿಕಾ ಫೇಸ್ಬುಕ್ನಲ್ಲಿರುವ ನಮ್ಮ ಮಾಹಿತಿಯನ್ನು ಅಧ್ಯಯನ ಮಾಡಿ ಮಾನಸಿಕವಾಗಿ ನಾವು ಪ್ರಭಾವಿತರಾಗುವಲ್ಲಿ ನಮಗೇ ಬೇಕಾದ ಅಂಶಗಳನ್ನು ತೋರಿಸುವ ಮೂಲಕ ಕತ್ತಲಲ್ಲಿ ಚಿತ್ತಾರ ಮೂಡಿಸುತ್ತದೆ. ಇದನ್ನು ಸೈಕೋಮೆಟ್ರಿಕ್ ಅನಾಲಿಸಿಸ್ ಅಂತ ಕರೀತಾರೆ. ಕೇಂಬ್ರಿಡ್ಜ್ನ ಸೈಕೋಮೆಟ್ರಿಕ್ ಸೆಂಟರ್ನಲ್ಲಿ ಈ ಕುರಿತಂತೆ ಭಾರಿ ಭಾರಿ ಸಂಶೋಧನೆಗಳೇ ನಡೆದಿವೆ. 1980 ರಲ್ಲಿ ಒಂದಷ್ಟು ಮನಃಶಾಸ್ತ್ರಜ್ಞರು ಅಧ್ಯಯನ ನಡೆಸಿ ವ್ಯಕ್ತಿಯೊಬ್ಬನ ಕುರಿತಂತೆ 5 ಅಂಶಗಳ ಆಧಾರದ ಮೇಲೆ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾದರೆ ಆತನನ್ನು ವೈಯಕ್ತಿಕವಾಗಿ ಪ್ರಭಾವಿಸುವುದು ಸಾಧ್ಯ ಎಂದು ಗುರುತಿಸಿದ್ದವು. ಹೊಸ ವಿಚಾರಗಳಿಗೆ ಆತ ಎಷ್ಟು ಮುಕ್ತವಾಗಿದ್ದಾನೆ, ಯಾವುದೇ ಕೆಲಸವನ್ನು ಆತ ಅದೆಷ್ಟು ವ್ಯವಸ್ಥಿತವಾಗಿ ಮಾಡಬಲ್ಲ, ಇತರರೊಂದಿಗೆ ಆತ ಎಷ್ಟು ಬೆರೆಯಬಲ್ಲ, ಎಷ್ಟು ಸಹಕಾರಿಯಾಗಿರಬಲ್ಲ ಮತ್ತು ಯಾವ ವಿಚಾರಗಳಿಗೆ ಆತ ತತ್ಕ್ಷಣ ಮಾನಸಿಕೆ ಖಿನ್ನತೆಗೆ ಒಳಗಾಗುವನು ಎಂಬ ಐದು ಅಂಶಗಳನ್ನು ನೀವು ದಾಖಲಿಸಲು ಸಾಧ್ಯವಾದರೆ ವ್ಯಕ್ತಿಯೊಬ್ಬನ ಮನಸ್ಸಿನ ಸ್ಥಿತಿಗತಿಯನ್ನು ಜ್ಯೋತಿಷಿಯಂತೆ ಹೇಳಿಬಿಡಬಹುದು.
2008 ರಲ್ಲಿ ಇದರ ಮೇಲೆ ಅಧ್ಯಯನ ಮಾಡಿದ ಮೈಕಲ್ ಕೊಸಿಂಸ್ಕಿ ನೂರಾರು ಜನರ ಫೇಸ್ಬುಕ್ ಲೈಕ್ಗಳನ್ನು ಅಧ್ಯಯನ ಮಾಡಿ ಅಚ್ಚರಿಯ ಫಲಿತಾಂಶ ಹೊರಹಾಕಿದ. ಆತನ ಪ್ರಕಾರ ವ್ಯಕ್ತಿಯೊಬ್ಬನ 68 ಲೈಕ್ಗಳನ್ನು ಗಮನಿಸಿದರೆ ಆತನ ಚರ್ಮದ ಬಣ್ಣ ಹೇಳಬಹುದು. ಆತ ಯಾವ ಪಕ್ಷಕ್ಕೆ ಬೆಂಬಲಿಸುತ್ತಾನೆ ಎಂಬುದನ್ನೂ ಹೇಳಬಹುದು. ಅಷ್ಟೇ ಅಲ್ಲ. ಫೇಸ್ಬುಕ್ನಲ್ಲಿ ನೀವು ಕೊಡುವ 10 ಲೈಕ್ಗಳನ್ನು ಅಧ್ಯಯನ ಮಾಡಿದರೆ ನಿಮ್ಮ ಸಹೋದ್ಯೋಗಿಗಿಂತ ಚೆನ್ನಾಗಿ ನಿಮ್ಮನ್ನು ಅರಿಯಬಹುದು. 70 ಲೈಕ್ಗಳನ್ನು ಗಮನಿಸಿದರೆ ನಿಮ್ಮ ಮಿತ್ರನಿಗಿತ ಚೆನ್ನಾಗಿ, 150 ಲೈಕ್ಗಳ ಮೂಲಕ ಪೋಷಕರಿಗಿಂತಲೂ ಚೆನ್ನಾಗಿ, 300 ಲೈಕ್ಗಳನ್ನು ಅಧ್ಯಯನ ಮಾಡಿದರೆ ಹೆಂಡತಿಗಿಂತಲೂ ಚೆನ್ನಾಗಿ ಅದಕ್ಕಿಂತಲೂ ಹೆಚ್ಚು ಲೈಕ್ಗಳನ್ನು ಗಮನಿಸುವುದಾದರೆ ಸ್ವತಃ ನಿಮಗಿಂತಲೂ ಚೆನ್ನಾಗಿ ನಿಮ್ಮನ್ನು ಅರಿಯಬಹುದಂತೆ! ಈ ಅಧ್ಯಯನವನ್ನು ಗಮನಿಸಿದ ಸ್ಟ್ರಾಟಜಿಕ್ ಕಮ್ಯುನಿಕೇಷನ್ ಲ್ಯಾಬೊರೇಟರಿ ಎಂಬ ಕಂಪೆನಿಯೊಂದು ಅಲೆಕ್ಸಾಂಡರ್ ಕೊಗನ್ ಎಂಬುವವನನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಆತ ಈ ಅಧ್ಯಯನವನ್ನು ಮುಂದುವರಿಸುವಂತೆ ಮಾಡಿ ಫೇಸ್ಬುಕ್ನೊಂದಿಗೆ ಒಪ್ಪಂದ ಮಾಡಿಕೊಂಡು ತಾನು ರೂಪಿಸಿದ ಆ್ಯಪ್ ಅನ್ನು ಬಳಸಿ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಒಂದು ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿದ. ಲಕ್ಷಾಂತರ ಜನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಈ ಅಧ್ಯಯನಕ್ಕೆ ಸಹಕರಿಸಿದರು. ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಂತಹ ವ್ಯಕ್ತಿಯ ಫೇಸ್ಬುಕ್ ಅಕೌಂಟಿನೊಳಕ್ಕೆ ನುಗ್ಗಿದ ಕೊಗನ್ ಆ ಮೂಲಕ ಆತನ ಗೆಳೆಯರೆಲ್ಲರ ಫೇಸ್ಬುಕ್ ಅಕೌಂಟುಗಳನ್ನು ತೆರೆದು ನೋಡಿದ. ಕೋಟ್ಯಂತರ ಜನರ ಕುರಿತಂತಹ ದತ್ತಾಂಶಗಳು ಅವನ ಬಳಿ ಸಂಗ್ರಹವಾಗತೊಡಗಿದವು. ಹೆಚ್ಚು-ಕಡಿಮೆ ಯೂರೋಪ್ ಮತ್ತು ಅಮೇರಿಕನ್ನರೆಲ್ಲರ ದತ್ತಾಂಶ ಈಗವನ ಬಳಿ ಸುರಕ್ಷಿತವಾಗಿತ್ತು. ಅದನ್ನು ಪಡೆದ ಎಸ್ಸಿಎಲ್ ಕಂಪೆನಿ 2013ರಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಕಂಪೆನಿಯನ್ನು ಹುಟ್ಟುಹಾಕಿತು. ಅದಾಗಲೇ ನೈಜೀರಿಯಾ, ಶ್ರೀಲಂಕಾ, ಆಫ್ರಿಕಾ ಮೊದಲಾದ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆಯ ವಿಚಾರದಲ್ಲಿ ಕೈಯಾಡಿಸಿ ಗೆಲುವು ತಂದುಕೊಟ್ಟಿದ್ದ ಎಸ್.ಸಿ.ಎಲ್ ಈಗ ಹೊಸ ಕಂಪೆನಿಯ ಮೂಲಕ ಜಗತ್ತನ್ನಾಳಲು ಹೊರಟಿತ್ತು. ಬ್ರೆಕ್ಸಿಟ್ ಮತ್ತು ಟ್ರಂಪ್ ಗೆಲುವುಗಳು ಅದಕ್ಕೆ ಕಿರೀಟವಾಗಿತ್ತು. ಇದರ ಆಧಾರದ ಮೇಲೆಯೇ ಕೇಂಬ್ರಿಡ್ಜ್ ಅನಾಲಿಟಿಕಾದ ಸಿಇಒ ನಿಕ್ಸ್ ಜಗತ್ತಿನ ರಾಜಕೀಯ ಪಕ್ಷಗಳಿಗೆ ಮುಕ್ತ ಆಹ್ವಾನ ಕೊಟ್ಟರು. ಆ ಆಹ್ವಾನಕ್ಕೆ ಬಲಿಬಿದ್ದದ್ದು ಕಾಂಗ್ರೆಸ್ಸು.
ಮಾತೆತ್ತಿದರೆ ಆಧಾರ್ಕಾಡರ್್ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತದೆ ಎಂದು ಬೊಬ್ಬಿಡುವಂತ ಕಾಂಗ್ರೆಸ್ಸು ಇಂಗ್ಲೆಂಡಿನ ಈ ಕಂಪೆನಿಯೊಂದಿಗೆ ಸೇರಿ ದೇಶದ ಕೋಟ್ಯಂತರ ಫೇಸ್ಬುಕ್ ಬಳಕೆದಾರರ ಮಾಹಿತಿ ಕದಿಯಲು ಹೊರಟಿತ್ತು. ಜೊತೆಗೆ ಎಸ್ಸಿಎಲ್ ಕಂಪೆನಿಯೇ ಹೇಳಿಕೊಂಡಿರುವಂತೆ ಹಣ ಮತ್ತು ಹೆಂಗಸರನ್ನು ಬಳಸಿ ರಾಜಕಾರಣಿಗಳನ್ನು ಸಿಲುಕಿ ಹಾಕಿಸುವ ಅತ್ಯಂತ ಹೀನ ಕಾಯಕಕ್ಕೂ ಇಳಿಯಲು ಸಿದ್ಧತೆ ನಡೆಸಿತ್ತು. ಗುಜರಾತಿನಲ್ಲಿ ಈ ಕಂಪನಿಯನ್ನು ಬಳಸಿ ಚುನಾವಣೆ ಗೆಲ್ಲಲು ಕಸರತ್ತು ನಡೆಸಿದ್ದ ಕಾಂಗ್ರೆಸ್ಸು ಒಂದು ಬಗೆಯಲ್ಲಿ ರಕ್ತಬೀಜಾಸುರನಂತೆ ಮರುಹುಟ್ಟು ಪಡೆದಿತ್ತು. ಅದೇ ಸಂಭ್ರಮದಲ್ಲಿ ಸಿದ್ದರಾಮಯ್ಯನವರನ್ನು ಆತುಕೊಂಡು ಅವರನ್ನು ಗೆಲ್ಲಿಸಲು ಬೇಕಾದ ಎಲ್ಲ ತಂತ್ರಗಳನ್ನು ಪ್ರಯೋಗಿಸಲಾರಂಭಿಸಿತು. ಲಿಂಗಾಯತ ಮತವನ್ನು ಧರ್ಮವಾಗಿಸಿ ಒಡೆಯಬೇಕೆಂಬ ಸಿದ್ದರಾಮಯ್ಯನವರ ಕಲ್ಪನೆ ಇಂದು ನಿನ್ನೆಯದಲ್ಲ. ಆದರೆ ಚುನಾವಣೆ ಹತ್ತಿರ ಬಂದೊಡನೆ ಗಾಬರಿಗೊಳಗಾದಂತೆ ಕಂಡ ಸಿದ್ದರಾಮಯ್ಯ ಈ ಪ್ರಸ್ತಾವನೆಯನ್ನು ಹೆಚ್ಚು-ಕಡಿಮೆ ಮರೆತೇ ಬಿಟ್ಟಿದ್ದರು. ಆಗ ಮತ್ತೆ ಸಹಕಾರಕ್ಕೆ ಬಂದಿದ್ದು ಕೇಂಬ್ರಿಡ್ಜ್ ಅನಾಲಿಟಿಕಾ. ನಮ್ಮೆಲ್ಲರ ಫೇಸ್ಬುಕ್ ಖಾತೆಗಳನ್ನು ಒಳಹೊಕ್ಕು ಗಮನಿಸುವ ಈ ಡಾಟಾ ಚೋರ್ ಸಂಸ್ಥೆ ಸೂಕ್ತ ಸಂದರ್ಭವನ್ನು ಸೂಚಿಸಿ ಲಿಂಗಾಯತರನ್ನು ವಿಭಜಿಸುವ ಸ್ಪಷ್ಟ ಮಾರ್ಗ ತೋರಿಸಿತು. ಅಷ್ಟೇ ಅಲ್ಲ. ಈ ವಿಚಾರವನ್ನು ರಾಹುಲ್ ರಾಷ್ಟ್ರಮಟ್ಟದಲ್ಲಿ ಎಲ್ಲೂ ಹೇಳದಂತೆ ನೋಡಿಕೊಂಡಿತು. ಅಂದರೆ ರಾಜ್ಯದಲ್ಲಿ ಹಿಂದೂ ವಿರೋಧಿಯಾಗಿ ರಾಷ್ಟ್ರದಲ್ಲಿ ಹಿಂದೂ ಪರವಾಗಿರುವ ನಿಲುವು ತಳೆಯುವ ಐಡಿಯಾ ಅದು.
ಜಗತ್ತಿನಾದ್ಯಂತ ಕೇಂಬ್ರಿಡ್ಜ್ ಅನಾಲಿಟಿಕಾದ ಚಚರ್ೆ ತೀವ್ರಗೊಳ್ಳುತ್ತಿದ್ದಂತೆ ಪತರಗುಟ್ಟಿದ್ದ ಕಾಂಗ್ರೆಸ್ ತಮಗೂ ಈ ಸಂಸ್ಥೆಗೂ ಸಂಬಂಧವಿಲ್ಲವೆಂದು ಹೇಳಲು ಹರಸಾಹಸ ಮಾಡಿತು. ಈ ಕಂಪೆನಿಯ ಕಚೇರಿಯಲ್ಲಿಯೇ ಕಾಂಗ್ರೆಸ್ಸಿನ ಫಲಕ ರಾರಾಜಿಸುತ್ತಿರುವುದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಅನಿವಾರ್ಯವಾಗಿ ತೆಪ್ಪಗಾಯ್ತು. ಬಖರ್ಾ ದತ್ಗೆ ನೀಡಿದ ಇಂಟರ್ವ್ಯೂನಲ್ಲಿ ಈ ಕಂಪೆನಿ ಕಾಂಗ್ರೆಸ್ಸನ್ನು ಭೇಟಿ ಮಾಡಿದ್ದರೂ ಇರಬಹುದು ಎಂದು ಹೇಳಿಕೆ ಕೊಟ್ಟ ರಮ್ಯ ಅಪಹಾಸ್ಯಕ್ಕೀಡಾದರು. ಆಗಲೇ ತರಾತುರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಹೆಸರಿನ ಅಪ್ಲಿಕೇಶನ್ನ್ನೇ ಡಿಲೀಟ್ ಮಾಡಿಕೊಂಡಿದ್ದು. ಆಧುನಿಕ ತಂತ್ರಜ್ಞಾನ, ಆಧುನಿಕ ವಿಚಾರಧಾರೆ, ಚಿಂತನೆಗಳಿಂದ ಬಲುದೂರವಿರುವ ಕಾಂಗ್ರೆಸ್ಸಿಗೆ ನಿಮ್ಮ ಜಾತಿ ಕೇಳಿ ವೋಟ್ ಹಾಕಿಸಿಕೊಳ್ಳುವುದು ಮಾತ್ರ ಗೊತ್ತು. ಇಂತವರ ಬೆಂಬಲಕ್ಕೆ ಕಾವಿ ಧರಿಸಿದ ಕೆಲವು ಸಾಧುಗಳು ಬೇರೆ. ತರುಣರಿಗೆ ಇವೆಲ್ಲವೂ ಚೆನ್ನಾಗಿ ಅರ್ಥವಾಗುತ್ತದೆ. ಫೇಸ್ಬುಕ್ಕಿನ ಒಳಹೊಕ್ಕು ನಮ್ಮ ವೈಯಕ್ತಿಕ ಬದುಕನ್ನು ಇಣುಕಿ ನೋಡುವ ಕಾಂಗ್ರೆಸ್ಸಿಗೆ ಈ ಬಾರಿ ಸರಿಯಾದ ಪಾಠ ಕಲಿಸಲೇಬೇಕಿದೆ.
Leave A Reply