ವಿಶ್ವಗೆದ್ದ ಮೋದಿ ದೇಶದಲ್ಲೂ ಮೋಡಿ, ರಾಷ್ಟ್ರದ ಪ್ರಭಾವಿ ವ್ಯಕ್ತಿಯಾದರು ನೋಡಿ!
ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಯಾವ ರಾಷ್ಟ್ರ ಅವರಿಗೆ ವೀಸಾ ನೀಡುವುದಿಲ್ಲ ಎಂದು ತಿರಸ್ಕರಿಸಿತ್ತೋ, ಅದೇ ಅಮೆರಿಕ ಇಂದು ಅವರಿಗೆ ರತ್ನಗಂಬಳಿ ಹಾಸಿ ಕರೆಯುವಂತಾಗಿದೆ. ಬರೀ ಅಮೆರಿಕವೊಂದೇ ಅಲ್ಲ, ಈ ನಾಲ್ಕು ವರ್ಷದಲ್ಲಿ ಮೋದಿ ವಿಶ್ವವನ್ನೇ ಆವರಿಸಿದ್ದಾರೆ.
ಇಂತಹ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಭಾರತದ ಅತೀ ಪ್ರಭಾವಿ ವ್ಯಕ್ತಿಗಳಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಹೌದು, ಇತ್ತೀಚೆಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿಸಂಸ್ಥೆ ಭಾರತದ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿ ಮಾಡಿದ್ದು, ಅದರಲ್ಲಿ ಮೋದಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ.
ಅಲ್ಲದೆ, ಈ ಸುದ್ದಿ ಸಂಸ್ಥೆ ತಾವು ಏಕೆ ಮೋದಿ ಅವರನ್ನೇ ನಂಬರ್ ಒನ್ ಸ್ಥಾನವನ್ನು ಮೋದಿ ಅವರಿಗೆ ನೀಡಿದ್ದೇವೆ ಎಂಬುದನ್ನು ಸಹ ಸ್ಪಷ್ಟಪಡಿಸಿದ್ದು, 2014ರ ಬಳಿಕ ದೇಶದೆಲ್ಲೆಡೆ ನಡೆದ ಸ್ಥಳೀಯ ಚುನಾವಣೆಯಿಂದ ಹಿಡಿದು, ಲೋಕಸಭೆ ಉಪಚುನಾವಣೆ ವರೆಗೂ ಮೋದಿ ಅವರ ಹೆಸರು ಬಳಸಿಯೇ ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆ ಪರಿಗಣಿಸಿದೆ.
ಅಷ್ಟೇ ಅಲ್ಲದೆ, ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಜನರನ್ನು ಸೆಳೆದಿದ್ದು, ಜಿಎಸ್ಟಿ, ನೋಟು ನಿಷೇಧಗೊಳಿಸಿ ವಿಶ್ವಮಟ್ಟದಲ್ಲಿ ಚರ್ಚೆಯಾಗಿದ್ದು, ಭಾರತದ ಗಣರಾಜ್ಯೋತ್ಸವಕ್ಕೆ ಆಸಿಯಾನ್ ರಾಷ್ಟ್ರಗಳ ಮುಖಂಡರನ್ನು ಕರೆಸಿದ್ದು ಮೋದಿ ಅವರ ಪ್ರಭಾವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಭಾವಿಸಿ ಸುದ್ದಿಸಂಸ್ಥೆಯು ಮೋದಿ ಅವರಿಗೆ ನಂಬರ್ ಒನ್ ಸ್ಥಾನ ನೀಡಿದೆ. ಈ ಕುರಿತು ಸುದ್ದಿಸಂಸ್ಥೆಯೇ ವಿವರಣೆ ನೀಡಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದ್ದಾರೆ.
Leave A Reply