ದೇಶದ್ರೋಹಿಗಳಿಂದ ಮೈಸೂರು ಪೊಲೀಸ್ ವೆಬ್ ಸೈಟ್ ಹ್ಯಾಕ್, ರಾಷ್ಟ್ರ ಧ್ವಜಕ್ಕೆ ಅಪಮಾನ
ಮೈಸೂರು: ಭಾರತದಲ್ಲಿ ದೇಶದ್ರೋಹಿಗಳ ಕಿರಿಕಿರಿ ಮುಂದುವರಿದಿದ್ದು, ಸದಾ ಭಾರತದೊಂದಿಗೆ ಸೆಣಸಾಡುವ, ದೇಶದ ಅನ್ನವೇ ತಿಂದು ದ್ರೋಹ ಬಗೆಯುವ ಕೆಲವು ವಿಕೃತ ಮನಸ್ಸಿನವರು ಕುತಂತ್ರದ ಕಾರ್ಯಗಳು ಸದಾ ಚಾಲ್ತಿಯಲ್ಲಿವೆ. ಇಷ್ಟು ದಿನ ನೇರವಾಗಿ ದೇಶದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದ ಕೆಲವು ಕೊಳಕು ಮನಸ್ಸುಗಳು ಇದೀಗ ಅಂತರ್ಜಾಲದಲ್ಲಿ ದೇಶವನ್ನು, ರಾಷ್ಟ್ರಧ್ವಜವನ್ನು ಅವಮಾನಿಸುವ ಕಾರ್ಯದಲ್ಲಿ ನಿರತವಾಗಿವೆ. ಅದಕ್ಕೆ ಸಾಕ್ಷಿ ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಘಟಕದ ವೆಬ್ ಸೈಟ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ರಾಷ್ಟ್ರಧ್ವಜವನ್ನು ಅವಮಾನ ಮಾಡುವಂತ ಪೋಸ್ಟ್ ಮಾಡಿದ್ದಾರೆ.
ಮೈಸೂರು ನಗರ ಪೊಲೀಸ್ ಘಟಕದ http://mysorecitypolice.gov.in/ ವೆಬ್‌ಸೈಟ್ ಹ್ಯಾಕ್ ಆಗಿದ್ದು, ‘ಮೈಸೂರು ಸಿಟಿ ಪೊಲೀಸ್ – ಗವರ್ನಮೆಂಟ್ ಆಫ್ ಇಂಡಿಯಾ ಹ್ಯಾಕಡ್- ಮಿಸ್ಟರ್. ನೈಟ್ರೋಜಿನ್ ಟೀಂ ಪಿಸಿಇ, ಪಾಕಿಸ್ತಾನ್ ಜಿಂದಾಬಾದ್ ‘ಎಂದು ವೆಬ್ ಸೈಟ್ ವಾಲ್ ನಲ್ಲಿ ಪೋಸ್ಟ್ ಮಾಡಿದಲ್ಲದೇ, ರಾಷ್ಟ್ರಧ್ವಜವನ್ನು ಕಾಲಿನಿಂದ ತುಳಿಯುತ್ತಿರುವ ಚಿತ್ರವನ್ನು ಪ್ರಕಟಿಸಿ, ಹೀನ ಮನಸ್ಥಿತಿ ತೋರ್ಪಡಿಸಿದೆ. ಅಲ್ಲದೇ ದೇಶಕ್ಕೆ ಅಪಮಾನ ಮಾಡಲಾಗಿದೆ.
ಇನ್ನು ವೆಬ್ ಸೈಟ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ವೆಬ್ ಸೈಟ್ ನ್ನು ಬ್ಲಾಕ್ ಮಾಡಿದೆ. ವೆಬ್‌ಸೈಟ್ ಹ್ಯಾಕ್ ಮಾಡಿರುವದನ್ನು ಗಮನಿಸಿದ ಪೊಲೀಸರು, ತಜ್ಞರ ಸಹಾಯದಿಂದ ವೆಬ್‌ಸೈಟ್ ಬ್ಲಾಕ್ ಮಾಡಿಸಿ, ಹ್ಯಾಕಿಂಗ್ ತಡೆಹಿಡಿಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ಮೈಸೂರಿನ ನಗರ ಪೊಲೀಸ್ ಇಲಾಖೆಯ ವೆಬ್ ಸೈಟ್ ಹ್ಯಾಕ್ ಮಾಡಿರುವುದು ಗಮನಕ್ಕೆ ಬಂದಿದೆ. ವೆಬ್ ಸೈಟ್ ಹ್ಯಾಕ್ ಕುರಿತು ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
Leave A Reply