ಪಾಕ್ ಉಗ್ರ ಪೋಷಣೆ ಬಯಲು: ಪಾಕಿಸ್ತಾನದಲ್ಲಿದ್ದಾರೆ 139 ಮೋಸ್ಟ್ ವಾಟೆಂಡ್ ಉಗ್ರರು
ದೆಹಲಿ: ಭಯೋತ್ಪಾದಕರ ಮೂಲ ಕೇಂದ್ರ ಸ್ಥಾನ ಪಾಕಿಸ್ತಾನ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಇದೀಗ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಿಡುಗಡೆ ಮಾಡಿರುವ ಘೋಷಿತ ಭಯೋತ್ಪಾದಕರ ಪಟ್ಟಿಯಲ್ಲಲಿ 139 ಪಾಕಿಸ್ತಾನಿಯರು ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಯೋತ್ಪಾದಕರನ್ನು ಪಾಕಿಸ್ತಾನ ಸಲಹುತ್ತಿರುವುದು ಪದೇ ಪದೆ ಸಾಬೀತಾಗಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಮುಂಬಯಿ ದಾಳಿ ಸಂಚುಕೋರ ಹಫೀಜ್ ಸಯೀದ್ ಈ ಪಟ್ಟಿಯಲ್ಲಿದ್ದಾರೆ.
ಈ ಕುರಿತು ಪಾಕಿಸ್ತಾನದ ಡಾನ್ ವರದಿ ಮಾಡಿದ್ದು, ಪಾತಕಿ ದಾವೂದ್ ಇಬ್ರಾಹಿಂ ರಾವಲ್ಪಿಂಡಿ ಹಾಗೂ ಕರಾಚಿಯಿಂದ ಪಾಸ್‌ಪೋರ್ಟ್‌ಗಳನ್ನು ತನ್ನ ಹೆಸರಿನಲ್ಲಿ ಪಡೆದುಕೊಂಡಿದ್ದಾನೆ. ಕರಾಚಿಯ ನೂರಾಬಾದ್‌ನಲ್ಲಿ ಅರಮನೆಯಂತಹ ಬಂಗಲೆ ಹೊಂದಿದ್ದಾರೆ ಎಂದು ಭದ್ರತಾ ಮಂಡಳಿ ವಿವರಿಸಿದೆ ಎಂದು ಡಾನ್ ವರದಿ ಮಾಡಿದೆ.
ಎಲ್‌ಇಟಿ ಸ್ಥಾಪಕ ಸಯೀದ್, ಎಲ್‌ಇಟಿಯ ‘ಮಾಧ್ಯಮ ಸಂಪರ್ಕ’ ಹಾಜಿ ಮೊಹಮ್ಮದ್ ಯಾಹ್ಯಾ ಮುಜಾಹಿದ್ ಮತ್ತು ಈತನ ಸಹಾಯಕರಾದ ಅಬ್ದುಲ್ ಸಲಾಮ್ ಹಾಗೂ ಝಫರ್ ಇಕ್ಬಾಲ್ ಕೂಡ ‘ಉಗ್ರರ ಪಟ್ಟಿಯಲ್ಲಿ’ ಸೇರಿದ್ದಾರೆ.
ಎಲ್‌ಇಟಿ ಜತೆಗೆ, ಅಲ್- ಮನ್ಸೂರಿಯನ್, ಪಾಸ್ಬಾನ್-ಇ-ಕಾಶ್ಮೀರ್, ಪಾಸ್ಬಾನ್-ಇ-ಅಹ್ಲೆ ಹಾದಿತ್, ಜಮಾತ್ ಉದ್‌ದಾವ, ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್‌ಗಳನ್ನೂ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ.
Leave A Reply