ಹಣ ಕೊಡದೆ ಟೋಲ್ ಗೇಟ್ ನಲ್ಲಿ ಹೋಗಲು ಆಗುತ್ತಾ?
ಟೋಲ್ ಗೇಟ್ ಕಟ್ಟಬೇಕಾ, ಬೇಡವೇ ಎನ್ನುವುದು ಒಂದು ಕಡೆ ಚರ್ಚೆಯಲ್ಲಿದ್ದರೆ ಮತ್ತೊಂದೆಡೆ ನೀವು ಟೋಲ್ ಗೇಟ್ ಕಟ್ಟದೆ ಅಲ್ಲಿಂದ ಹೋದರೂ ನೀವು ಆತಂಕ ಪಡಬೇಕಾಗಿಲ್ಲ ಎನ್ನುವ ಸತ್ಯ ಕೂಡ ಬಹಿರಂಗವಾಗಿದೆ. ಅದು ಹೇಗೆ ಗೊತ್ತಾ?
[td_block_ad_box spot_id=”custom_ad_1″ spot_title=”- Advertisement -“]
ನೀವು ಮಂಜೇಶ್ವರದಿಂದ ಬೈಂದೂರಿಗೆ ಹೋಗುತ್ತಿದ್ದಿರಿ ಎಂದು ಅಂದುಕೊಳ್ಳಿ. ನಿಮ್ಮ ಕಾರು ತಲಪಾಡಿ ದಾಟಿದ ತಕ್ಷಣ ಒಂದು ಟೋಲ್ ಗೇಟ್ ಎದುರಾಗುತ್ತದೆ. ಅದರ ನಂತರ ಎನ್ ಐಟಿಕೆ ಬಳಿ, ಮತ್ತೊಂದು ಪಡುಬಿದ್ರೆ-ಹೆಜಮಾಡಿ ಬಳಿ ನಂತರ ಸಾಸ್ತಾನದ ಹತ್ತಿರ ಟೋಲ್ ಗೇಟ್ ಎದುರಾಗುತ್ತದೆ. ನೀವು ಪ್ರತಿ ಟೋಲ್ ಗೇಟ್ ಬಳಿ ಹೋಗುವಾಗಲು ಅಲ್ಲಲ್ಲಿ ವಾಹನಗಳ ಸರದಿ ಸಾಲು ಕಾಣುತ್ತದೆ. ಹಾಗಾದರೆ ನೀವು ಪ್ರತಿ ಟೋಲ್ ಗೇಟಿನ ಬಳಿಯೂ ಐದೈದು ನಿಮಿಷ ಕಾಯುತ್ತಾ ಹೋದರೆ ನಿಮಗೆ ಒಟ್ಟು 20 ನಿಮಿಷ ಟೋಲ್ ಗೇಟಿನಲ್ಲಿ ಕಾಯುವುದು ವ್ಯರ್ಥವಾಗುತ್ತದೆ. ಇದು ಕೇವಲ ಕಾಸರಗೋಡು, ಮಂಗಳೂರು, ಉಡುಪಿ ಜಿಲ್ಲೆಯ ನಾಗರಿಕರ ಸಮಸ್ಯೆ ಅಲ್ಲ. ಇದು ಭಾರತದಲ್ಲಿ ವಾಸಿಸುವ ಪ್ರತಿಯೊಂದು ಬಸ್ಸು, ಕಾರು, ಲಾರಿ, ಜೀಪ್ ಸಹಿತ ಎಲ್ಲಾ ಚತುಚಕ್ರ ಮತ್ತು ಅದಕ್ಕಿಂತ ಹೆಚ್ಚು ಚಕ್ರಗಳ ವಾಹನಗಳ ಸವಾರರ ಮತ್ತು ಪ್ರಯಾಣಿಕರ ಸಮಸ್ಯೆ. ಇದರಿಂದ ಎಷ್ಟೋ ಬ್ಯುಸಿ ಶೆಡ್ಯೂಲ್ ನಲ್ಲಿ ಕೆಲಸ ನಿರ್ವಹಿಸುವ ನಾಗರಿಕರು ತೊಂದರೆಯನ್ನು ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಬೇರೆ ದಾರಿಯಿಲ್ಲದೆ ಒದ್ದಾಡುತ್ತಾರೆ.
ಇತ್ತೀಚೆಗೆ ಲೂಧಿಯಾನದ ವಕೀಲ ಹರಲಾಮ್ ಜಿಂದಾಲ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಂದು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೊದಲನೇ ಪ್ರಶ್ನೆ: ಟೋಲ್ ಕೌಂಟರಿನಲ್ಲಿ ಅಲ್ಲಿನ ಸಿಬ್ಬಂದಿ ರಸೀದಿ ಕೊಡಲು ವ್ಯಯವಾಗುವ 30 ಸೆಕೆಂಡುಗಳಿಗಿಂತ ಹೆಚ್ಚು ಒಟ್ಟು ಎಷ್ಟು ಸಮಯವನ್ನು ನಾವು ಅಲ್ಲಿ ವ್ಯಯಿಸಬೇಕು? ಅದಕ್ಕೆ ಪ್ರಾಧಿಕಾರ ಕೊಟ್ಟ ಉತ್ತರ: ಒಟ್ಟು 2 ನಿಮಿಷ 50 ಸೆಕೆಂಡುಗಳು ಕ್ಯೂನಲ್ಲಿ ಗರಿಷ್ಟವಾಗಿ ಕಾಯುವ ಅಗತ್ಯ ಬೀಳಬಹುದು.
ಎರಡನೇ ಪ್ರಶ್ನೆ: ಬೇರೆ ಬೇರೆ ಕೌಂಟರ್ ಗಳಿಗೆ ಬೇರೆ ಬೇರೆ ಸಮಯ ಬೇಕಾಗುತ್ತದಾ? ಉತ್ತರ: ಇಲ್ಲ
ಮೂರನೇ ಪ್ರಶ್ನೆ: ಒಂದು ವೇಳೆ ತುಂಬಾ ಹೊತ್ತು ಟೋಲ್ ಗೇಟಿನಲ್ಲಿ ಸಮಯ ವ್ಯರ್ಥವಾದರೆ ಆಗ ಆ ಸಮಯ ನಷ್ಟದ ಜವಾಬ್ದಾರಿಯನ್ನು ನೀವು ತೆಗೆದುಕೊಂಡು ನಮಗೆ ಪರಿಹಾರ ನೀಡುವಿರಾ? ಉತ್ತರ: ಒಂದು ವೇಳೆ ಒಟ್ಟು ಸಮಯ ಮೂರು ನಿಮಿಷ ದಾಟಿ ಹೋದರೆ ನೀವು ನಿಮ್ಮ ಸರದಿಗಾಗಿ ಕಾಯದೆ ಮತ್ತು ಯಾವುದೇ ಟೋಲ್ ಪಾವತಿಸದೆ ಅಲ್ಲಿಂದ ಹೊರಟು ಹೋಗಬಹುದು. ಈ ಉತ್ತರ ನಿಜಕ್ಕೂ ಗಮನಾರ್ಹ. ಏಕೆಂದರೆ ಇಂತಹ ಅನೇಕ ಉಪಯುಕ್ತ ಮಾಹಿತಿಗಳ ಪಟ್ಟಿ ಟೋಲ್ ಗೇಟಿನಲ್ಲಿ ಹಾಕಿರುವುದಿಲ್ಲ. ಅದಕ್ಕಾಗಿ ಜನಸಾಮಾನ್ಯರು ಟೋಲ್ ಕೊಡದೆ ಹೋಗುವುದು ಅಪರಾಧ ಎಂದು ತುಂಬಾ ಹೊತ್ತು ಅಲ್ಲಿ ಕಾಯುತ್ತಾರೆ. ಆದರೆ ವಕೀಲರು ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಪ್ರಾಧಿಕಾರ ಸರಿಯಾದ ಉತ್ತರ ಕೊಡುವ ಮೂಲಕ ನಮ್ಮ ನಿಮ್ಮ ಬಹುಮೂಲ್ಯ ಸಮಯವನ್ನು ಉಳಿಸಿದೆ. ಗೊತ್ತಾಯಿತಲ್ಲ, ಇನ್ನು ಮುಂದೆ ಟೋಲ್ ಗೇಟ್ ಬಳಿ ಸರದಿಯಲ್ಲಿ ಕಾಯುವಾಗ ವಾಚ್ ಒಮ್ಮೆ ನೋಡಿ. ಕಾಯುವುದು ಮೂರು ನಿಮಿಷ ದಾಟಿತಾ, ಹಣ ಕಿಸೆಯಲ್ಲಿಡಿ, ಗಾಡಿ ಸ್ಟಾರ್ಟ್ ಮಾಡಿ ರೊಯ್ಯನೆ ಅಲ್ಲಿಂದ ಹೊರಡಿ, ಪ್ರಯಾಣ ಶುಭಕರವಾಗಿರಲಿ!
1 Comment
anna test super