ಇದಲ್ಲವೇ ಬದಲಾವಣೆ: ಘೋರಖಪುರದ ಮದರಸಾದಲ್ಲಿ ಸಂಸ್ಕೃತ ಪಾಠ ಬೋಧನೆ
ಘೋರಖಪುರ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾಗಿನಿಂದ ಹಲವು ಮಹತ್ತರ ಬದಲಾವಣೆಗಳಾಗುತ್ತಿವೆ. ಕೋಮುಗಲಭೆ, ಕೊಲೆ, ಸುಲಿಗೆಗಳಿಂದ ನಿತ್ಯ ಉತ್ತರ ಪ್ರದೇಶ ತತ್ತರಿಸಿ ಹೋಗಿತ್ತು. ಕೋಮು ಸೌಹಾರ್ದತೆಯಂತೂ ಹದಗಟ್ಟಿತ್ತು. ಆದರೆ ಇದೀಗ ಯೋಗಿ ಎಲ್ಲ ಸಮುದಾಯದವರಿಗೆ ನೀಡುತ್ತಿರುವ ಅಭಯದಿಂದ ಹೊಸ ಬದಲಾವಣೆಗಳಾಗುತ್ತಿದ್ದು, ಘೋರಖಪುರದಲ್ಲಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಪಾಠ ಬೋಧಿಸುವ ಮದರಸಾದಲ್ಲಿ ಸಂಸ್ಕೃತವನ್ನು ಬೋಧಿಸಲು ಆರಂಭಿಸಲಾಗಿದೆ.
ಘೋರಖಪುರದ ಮದರಸಾವೊಂದರಲ್ಲಿ ಮಕ್ಕಳಿಗೆ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಯೊಂದಿಗೆ ಸಂಸ್ಕೃತಿವನ್ನು ಬೋಧಿಸಲಾಗುತ್ತಿದೆ. ಇಲ್ಲಿನ ದಾರುಲ್ ಉಲೂಮ್ ಹುಸೈನಿಯಾ ಮದರಸಾದಲ್ಲಿ ಈ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದು, ಹೊಸ ಕಲಿಕೆಯನ್ನು ಮಕ್ಕಳು ಖುಷಿಯಿಂದ ಆಹ್ವಾನಿಸಿದ್ದಾರೆ.
‘ಸಂಸ್ಕೃತ ಕಲಿಯುವುದು ನಮಗೆ ಬಹಳ ಸಂತಸ ಮೂಡಿಸಿದೆ. ನಾವು ಎಲ್ಲ ಭಾಷೆಗಳಂತೆಯೇ ಸಂಸ್ಕೃತವನ್ನೂ ಸಂಭ್ರಮದಿಂದ ಕಲಿಯುತ್ತೇವೆ’ ಎನ್ನುತ್ತಾರೆ ಇಲ್ಲಿನ ಮಕ್ಕಳು.
‘ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ, ಉರ್ದು ಮತ್ತು ಅರಾಬಿಕ್ ನಂತೆಯೇ ಸಂಸ್ಕೃತವನ್ನೂ ಕಲಿಸಲಾಗುತ್ತಿದೆ. ಐದನೇ ತರಗತಿಗಿಂತ ಮೇಲ್ಪಟ್ಟ ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿರುವ ಬಗ್ಗೆ ಈ ಮಕ್ಕಳ ಪಾಲಕರಿಗೂ ಬಹಳ ಹೆಮ್ಮೆಯಿದೆ” ಎಂದು ಮದರಸಾದ ಪ್ರಿನ್ಸಿಪಲ್ ಹಫಿಜ್ ನಜಾರ್ ಅಲಂ ತಿಳಿಸಿದ್ದಾರೆ.
ಸಂಸ್ಕೃತಿ ಬೋಧನೆಯಿಂದ ಕೋಮುಭಾವನೆ ತೊಡೆದು ಹಾಕಿ, ಸೌಹಾರ್ದದ ವಾತಾವರಣ ನಿರ್ಮಿಸಬಹುದು ಎಂಬುದು ಮದರಸಾದ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Leave A Reply