ರೈತರ ಹಿತ ಕಾಪಾಡಲು ಮಹಾರಾಷ್ಟ್ರ ಸರ್ಕಾರ ಯಾವ ಸಂಸ್ಥೆ ಜತೆ ಮಹತ್ತರ ಒಪ್ಪಂದ ಮಾಡಿಕೊಂಡಿದೆ ಗೊತ್ತಾ?
ಮುಂಬೈ: ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ರೈತರು ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದಾಗ, ಬಿಜೆಪಿ ವಿರೋಧಿಗಳೆಲ್ಲ ಮೋದಿ ಅವರನ್ನೇ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯ ಸರ್ಕಾರದ ವಿರುದ್ಧವೂ ಮಾತನಾಡಿದರು.
ಆದರೆ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಆರು ತಿಂಗಳ ಒಳಗೆ ರೈತರ ಎಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡುವ ಮೂಲಕ ತಮ್ಮದು ರೈತಪರ ಸರ್ಕಾರ ಎಂಬುದನ್ನು ಘೋಷಿಸಿದ್ದರು. ಆದರೆ ಇದೇ ದೆಹಲಿಯಲ್ಲಿ ಭೂ ಸ್ವಾಧೀನ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು ಎಂದು ಅವರ ಗುಡಿಸಲುಗಳನ್ನೇ ಸುಟ್ಟು ಹಾಕಿದರೂ ಯಾರೂ ದೆಹಲಿ ಸರ್ಕಾರದ ವಿರುದ್ಧ ಸೊಲ್ಲೆತ್ತಲ್ಲಿಲ್ಲ.
ಈ ಮೋದಿ ವಿರೋಧಿಗಳ ಇಬ್ಬಂದಿತನ ಒತ್ತಟ್ಟಿಗಿರಲಿ. ಈಗ ಮಹಾರಾಷ್ಟ್ರ ಸರ್ಕಾರ ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಂದಾಗಿದ್ದು, ಕೃಷಿ ಅಭಿವೃದ್ಧಿಗಾಗಿ 2,726 ಕೋಟಿ ರೂ. ವಿನಿಯೋಗಿಸಲು ವಿಶ್ವಸಂಸ್ಥೆ ಜತೆ ಮಹತ್ತರ ಒಪ್ಪಂದ ಮಾಡಿಕೊಂಡಿದೆ.
ತೀವ್ರ ಬರದಿಂದ ಕಂಗೆಟ್ಟಿರುವ ಹಾಗೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಮಹಾರಾಷ್ಟ್ರದ ಮರಾಠವಾಡ ಹಾಗೂ ವಿದರ್ಭ ಪ್ರದೇಶಗಳ ಕೃಷಿ ಸಮಸ್ಯೆ ಬಗೆಹರಿಸಲು ಇಷ್ಟೂ ಹಣವನ್ನು ವಿನಿಯೋಗಿಸಲಿದ್ದು, ಈ ಭಾಗದ ರೈತರಿಗೆ ಯೋಜನೆ ವರದಾನವಾಗಲಿದೆ.
ಇದಕ್ಕೆ ಮಹಾರಾಷ್ಟ್ರ ಕೃಷಿ ಹವಾಮಾನ ಚೇತರಿಕೆ ಯೋಜನೆ ಎಂದು ಹೆಸರಿಟ್ಟಿದ್ದು, ವಿಶ್ವಸಂಸ್ಥೆ ಈ ಯೋಜನೆಗೆ ನೆರವು ನೀಡಲಿದೆ. ಮಹಾರಾಷ್ಟ್ರದ ಈ ಎರಡೂ ಭಾಗದಲ್ಲಿ ಕೃಷಿಗೆ ನೀರಾವರಿ, ವೈಜ್ಞಾನಿಕ ವಿಧಾನ ಅಳವಡಿಕೆ ಸೇರಿ ಹಲವು ಅಭಿವೃದ್ಧಿಗಾಗಿ ಹಣ ವಿನಿಯೋಗಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರವೊಂದು ತನ್ನ ರಾಜ್ಯದ ಜನರ ಒಳಿತಿಗಾಗಿ ವಿಶ್ವಸಂಸ್ಥೆಯೊಂದಿಗೆ ಮಹತ್ತರ ಒಪ್ಪಂದ ಮಾಡಿಕೊಂಡು ಸಾವಿರಾರು ಕೋಟಿ ರೂ. ವ್ಯಯಿಸುತ್ತಿರುವುದು ರೈತರ ಹಿತದೃಷ್ಟಿಯಿಂದ ಶ್ಲಾಘನೀಯವಾಗಿದೆ. ಎಲ್ಲ ರಾಜ್ಯಗಳಲ್ಲೂ ಇಂತಹ ಯೋಜನೆ ಜಾರಿಯಾಗಿ ರೈತರ ಕಷ್ಟ ನೀಗಲಿ ಎಂಬುದೇ ಆಶಯವಾಗಿದೆ.
Leave A Reply