ಅರವಿಂದ್ ಕೇಜ್ರಿವಾಲ್ ಕಚೇರಿ ಬಿಸ್ಕೆಟ್, ಟೀಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂದು ತಿಳಿದರೆ ಬೆಚ್ಚಿ ಬೀಳ್ತೀರಿ!
ದೆಹಲಿ: ದೆಹಲಿ ಸರ್ಕಾರದ ವಿರುದ್ಧ ಕೇಳಿಬಂದ ಹಗರಣ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಶಾಸಕರ ಅಮಾನತು ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಅರವಿಂದ್ ಕೇಜ್ರಿವಾಲ್ ಕಚೇರಿಯಲ್ಲಿ ಟೀ, ಬಿಸ್ಕೆಟ್ ಗಾಗಿ ಖರ್ಚು ಮಾಡಿರುವ ಹಣದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಹೌದು, ಸುದ್ದಿಸಂಸ್ಥೆಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿಯಲ್ಲಿ ಟೀ ಮತ್ತು ತಿಂಡಿಗಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದು, ಬರೋಬ್ಬರಿ 1.03 ಕೋಟಿ ರೂ. ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಆರ್ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ಇದುವರೆಗೆ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪ್ರಯಾಣಕ್ಕಾಗಿ 11 ಲಕ್ಷ ರೂ. ಖರ್ಚು ಮಾಡಿದ್ದು, ಕಚೇರಿಯಲ್ಲಿ ಟೀ-ತಿಂಡಿಗಾಗಿಯೇ ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2015-16ರಲ್ಲಿ 23.12 ಲಕ್ಷ ರೂ., 2016-17ನೇ ಸಾಲಿನಲ್ಲಿ 46.54 ಲಕ್ಷ ರೂ. ಮತ್ತು 2017-18ನೇ ಸಾಲಿನಲ್ಲಿ 33.36 ಲಕ್ಷ ರೂ. ಟೀ ಮತ್ತು ಬಿಸ್ಕೆಟ್ ಗಾಗಿ ಖರ್ಚು ಮಾಡಲಾಗಿದೆ ಎಂದು ಆರ್ಟಿಐ ತಿಳಿದುಬಂದಿದೆ. ಸಾರ್ವಜನಿಕರ ಹಣದಲ್ಲಿ ಕೇಜ್ರಿವಾಲ್ ಅವರು ತಮ್ಮ ಕಚೇರಿಗೆ ಟೀ-ತಿಂಡಿಗಾಗಿಯೇ ಇಷ್ಟೊಂದು ಹಣ ಖರ್ಚು ಮಾಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
Leave A Reply