ಮೋದಿಯ 56 ಇಂಚಿನ ಎದೆಯನ್ನು ಎದುರಿಸಲು 3 ತಿಂಗಳಲ್ಲೇ ಸಿದ್ದರಾಮಯ್ಯ ಖರ್ಚು ಮಾಡಿದ್ದು 56 ಕೋಟಿ
ಬೆಂಗಳೂರು: ಈ ಮೇಲಿನ ಸಂಖ್ಯೆಗಳನ್ನು ನೋಡಿದರೇ ಒಂದು ಕ್ಷಣ ಅವಕ್ಕಾಗಬಹುದು. ಎಲ್ಲಿಯ ಮೋದಿಯ 56 ಇಂಚಿನ ಎದೆ, ಎಲ್ಲಿಯ ಸಿದ್ದರಾಮಯ್ಯ ಸರ್ಕಾರ. ಈ ಸಂಖ್ಯೆಗಳು ಕಾಕತಾಳಿಯ. ಆದರೆ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಬಿಜೆಪಿಯ ಅಲೆಯನ್ನು ಎದುರಿಸಲು ರಾಜ್ಯದ ಮಾಧ್ಯಮ ಸಂಸ್ಥೆಗಳಿಗೆ ಜಾಹಿರಾತು ನೀಡಲು ಕಳೆದ ಮೂರು ತಿಂಗಳಲ್ಲಿ ಖರ್ಚು ಮಾಡಿದ್ದು ಒಟ್ಟು 56 ಕೋಟಿ ರೂಪಾಯಿ. ಸಿದ್ದರಾಮಯ್ಯ ಜನರನ್ನು ಸೆಳೆಯಲು ಕಳೆದ ಮೂರು ತಿಂಗಳಲ್ಲಿ ಜಾಹೀರಾತಿಗಾಗಿ ಖರ್ಚು ಮಾಡಿದ್ದು, 56 ಕೋಟಿ ರೂಪಾಯಿ ಎಂಬ ಮಾಹಿತಿ ಆರ್ ಟಿಐ ನಿಂದ ಬಹಿರಂಗವಾಗಿದೆ.
ಐದು ವರ್ಷದಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ಕೇವಲ ಮೂರು ತಿಂಗಳಲ್ಲಿ ಜನರಿಗೆ ತಿಳಿಸಲು ಸಿದ್ದರಾಮಯ್ಯ ಸರ್ಕಾರ ಮಾಡಿರುವ ಖರ್ಚು ಹಲವು ಅನುಮಾನಗಳನ್ನು ಮೂಡಿಸಿದೆ. 56 ಎದೆಯಿಂಚಿನ ನರೇಂದ್ರ ಮೋದಿ ಪ್ರಚಾರಕ್ಕೆ ಬರುವರು ಎಂಬ ಭೀತಿಯಿಂದ ರಾಜ್ಯ ಸರ್ಕಾರ ಈ ಮಟ್ಟಕ್ಕೆ ಹಣ ಖರ್ಚು ಮಾಡಿರಬಹುದಾ ಎಂಬ ಅನುಮಾನ ಮೂಡಿಸಿದೆ.
ಮಾಹಿತಿ ಹಕ್ಕಿನಡಿ ದೊರಕಿರುವ ಉತ್ತರದ ಪ್ರಕಾರ ‘ಕೇವಲ ಇಲಾಖಾವಾರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ, ಮತ ಪಡೆಯುವ ಹುನ್ನಾರ. ಚುನಾವಣೆಯ ಹೊತ್ತಿನಲ್ಲಿ ನಡೆದಿರುವುದು ಸ್ಪಷ್ಟವಾಗಿದೆ. ಮಾಧ್ಯಮಗಳು, ಆಟೋ, ಬಸ್ ಗಳ ಮೇಲೆ ಪೋಸ್ಟರ್, ಎಲ್ ಇಡಿ ಮೊಬೈಲ್ ವ್ಯಾನ್ ಗಳು, ಎಲ್ ಇಡಿ ಹೋಲ್ಡಿಂಗ್ಸ್ ಗಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು, ಜನರ ಹಣವನ್ನು ಬೇಕಾಬಿಟ್ಟಿಯಾಗಿ ಪ್ರಚಾರಕ್ಕೆ ಬಳಸಿರುವುದು ಸ್ಪಷ್ಟವಾಗಿದೆ.
ಸಿದ್ದರಾಮಯ್ಯ ಸಂಪುಟದ ಸಚಿವರಾದ ಎಂಬಿ ಪಾಟೀಲ್ ಮತ್ತು ಕೆ.ಜೆ.ಜಾರ್ಜ್ ಒಂದು ಹೆಜ್ಜೆ ಮುಂದು ಹೋಗಿ ಡಿಜಿಟಲ್ ಪ್ರಚಾರ ಕೈಗೊಂಡರು. ಟಿವಿಗಳಿಗೂ ಜಾಹಿರಾತು ನೀಡಿದ್ದರು. ಇವರು ಪ್ರತ್ಯೇಕವಾಗಿ ಇಲಾಖಾವಾರು ಹಣ ಬಳಸಿಕೊಂಡಿದ್ದಾರೆ.
ಡಿಸೆಂಬರ್ 1ರಿಂದ ಮಾರ್ಚ್ 20ರವರೆಗೆ ಅಂದರೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವವರೆಗೆ ರಾಜ್ಯ ಸರ್ಕಾರ ಒಟ್ಟು 56 ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿದೆ.
Leave A Reply