ದೇಶಾದ್ಯಂತ ಬಿಜೆಪಿ ಅಲೆ, ಜಾರ್ಖಂಡಿನ ಐದು ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್!
ರಾಂಚಿ: ದೇಶಾದ್ಯಂತ ಬಿಜೆಪಿ ಅಲೆ ಜೋರಾಗಿಯೇ ಬೀಸುತ್ತಿದೆ. ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಕರ್ನಾಟಕದಲ್ಲೂ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ಸುವರ್ಣ ನ್ಯೂಸ್ ನಡೆಸಿದ ಫೋನ್ ಕಾಲ್ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಇದಕ್ಕೆ ಮುನ್ನುಡಿಯಾಗಿ ಇತ್ತೀಚೆಗೆ ಜಾರ್ಖಂಡ್ ನ ಐದು ಮೇಯರ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಐದೂ ಸ್ಥಾನದಲ್ಲಿ ಬಿಜೆಪಿ ಭರ್ಜರಿಯಾಗಿ ಜಯಿಸಿದ್ದು, ಬರೀ ಲೋಕಸಭೆ ರಾಜ್ಯ ಸಭೆ ಅಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನ ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂಬುದು ದಿಟವಾಗಿದೆ.
ಹಜರೀಬಾಗ್ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ನಗರ್ ನಿಗಮ್ಸ್, ಮೇದಿನಿನಗರ್, ಗಿರಿದಿಹ್, ರಾಂಚಿ ಹಾಊ ಆದಿತ್ಯಪುರ ಮೇಯರ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ.
ಈ ಗೆಲುವಿನಿಂದ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಪ್ರಾಬಲ್ಯ ಸಾಧಿಸಲಿದ್ದು, ಮೇಯರ್ ಹಾಗೂ ಉಪಮೇಯರ್ ಎರಡೂ ಸ್ಥಾನಗಳು ಗೆಲುವಿನಿಂದ ಬಿಜೆಪಿ ಪಾಲಾಗಿವೆ. ಆದಾಗ್ಯೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ನಡೆದ ಬಹುತೇಕ ಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸುವ ಮೂಲಕ ದೇಶದ ಬೃಹತ್ ಪಕ್ಷವಾಗಿ ಹೊರಹೊಮ್ಮಿದೆ.
Leave A Reply