ಮೋದಿ ಅವರು ಮಾತಾಡಲ್ಲ ಮಾತಾಡಲ್ಲ ಅಂದರು, ಆದರೆ ಅವರು ಮಾಡಿಯೇ ತೋರಿಸಿದರಲ್ಲ!
ಅದು ಕಠುವಾದ ಬಾಲಕಿ ಮೇಲೆ ನಡೆದ ಅತ್ಯಾಚಾರವೇ ಇರಬಹುದು. ಉನ್ನಾವೋ ಎಂಬಲ್ಲಿ ನಡೆದ ಅತ್ಯಾಚಾರದ ಪ್ರಕರಣವೇ ಇರಬಹುದು. ಈ ಎರಡೂ ಪ್ರಕರಣಗಳೂ ಖಂಡನೀಯ ಹಾಗೂ ಆರೋಪಿಗಳನ್ನು ಹಿಡಿದು ಗಲ್ಲಿಗೆ ಏರಿಸಿದರೂ ಅಡ್ಡಿಯಿಲ್ಲ.
ಆದರೆ ಈ ಪ್ರಕರಣವನ್ನೇ ರಾಜಕೀಯವಾಗಿ ಬಳಿಸಿಕೊಂಡ ಪ್ರತಿಪಕ್ಷಗಳು, ಬುದ್ಧಿಜೀವಿಗಳು, ಪ್ರಗತಿಪರರು ದೇಶದ ತುಂಬ ಬೊಬ್ಬೆ ಹಾಕಿದರು. ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟಕಟೆಗೆ ಎಳೆದು ತಂದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕರಣದಲ್ಲಿ ಮಾತೇ ಆಡುತ್ತಿಲ್ಲ, ಅತ್ಯಾಚಾರ ನಡೆದರೂ ಬಾಯಿಬಿಡದ ಮೋದಿ ಮೌನ ತಾಳಿದ್ದಾರೆ. ಇಲ್ಲಿ ಅತ್ಯಾಚಾರ ನಡೆದರೂ ಮೋದಿ ವಿದೇಶಕ್ಕೆ ಹೋಗಿದ್ದಾರೆ ಎಂದೆಲ್ಲ ಘೀಳಿಟ್ಟರು.
ಆದರೆ ಭಾರತಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದಿದ್ದಾರೆ. ಹೌದು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅಷ್ಟೇ ಅಲ್ಲ 16 ವರ್ಷ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಜೀವಾವಧಿ ವಿಧಿಸಲು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಆದರೆ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೆಹಲಿ ಎಂದರೆ ರೇಪ್ ಕ್ಯಾಪಿಟಲ್ ಎಂದೇ ಹೆಸರಲಾಗಿತ್ತು. ಇಂದಿಗೂ ದೆಹಲಿ ಅತ್ಯಾಚಾರ ಪ್ರಕರಣಗಳಿಗೆ ಸುದ್ದಿಯಾಗುತ್ತಿದೆ. ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರತವನ್ನು ವಿಶ್ವಮಟ್ಟದಲ್ಲಿ ಸಕಾರಾತ್ಮವಾಗಿ ಸುದ್ದಿಯಾಗುವಂತೆ ಮಾಡಿತು.
ಇಷ್ಟಾದರೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ತರಲು ಚಿಂತಿಸದ ಇದೇ ಕಾಂಗ್ರೆಸ್, ಕಳೆದ ಮೂರು ಅವಧಿಯಿಂದ ಸಂಸದರಾಗಿರುವ ರಾಹುಲ್ ಗಾಂಧಿ ಸೊಲ್ಲೆತ್ತಲಿಲ್ಲ. ಆದರೆ ಉನ್ನಾವೋ, ಕಠುವಾ ಪ್ರಕರಣ ಇಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಆದರೆ ನರೇಂದ್ರ ಮೋದಿ ಅವರು ಈಗ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯಿದೆ ತರಲು ಮುಂದಾಗಿದ್ದಾರೆ. ಒಬ್ಬ ನಾಯಕನ ವೇಗದ ನಿರ್ಧಾರ ಎಂದರೆ ಅದು ನರೇಂದ್ರ ಮೋದಿ ಅವರಿಂದ ಕಲಿಯಬೇಕು. ಇನ್ನಾದರೂ ಅತ್ಯಾಚಾರ ಪ್ರಕರಣ ನಿಲ್ಲಲಿ ಎಂಬುದೇ ನಮ್ಮ ಆಶಯ.
Leave A Reply