ಮುಸ್ಲಿಮರ ಮತಕ್ಕಾಗಿ ಕಾಂಗ್ರೆಸ್ ಮುಖಂಡರೊಬ್ಬರು ಏನು ಮಾಡಿದ್ದಾರೆ ನೋಡಿ!
ದೇಶದಲ್ಲಿ ಪ್ರತಿಯೊಂದು ಸಹ ರಾಜಕೀಯದಿಂದ ಹೊರತಾಗಿಲ್ಲ ಎಂಬುದಕ್ಕೆ ನಿದರ್ಶನವೊಂದು ದೊರೆತಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ಏಳಿಗೆಗೆ ಶೈಕ್ಷಣಿಕ ಸೇರಿ ಹಲವು ಮಾರ್ಗಗಳ ಮೂಲಕ ಸುಧಾರಣೆಗೆ ಮುಂದಾಗಿದ್ದರೆ, ಮತ್ತೊಂದೆಡೆ ಮುಸ್ಲಿಂ ಶಾಸಕರೊಬ್ಬರು ತಮ್ಮ ಸಮುದಾಯದ ಮತಗಳಿಗಾಗಿ ಸೌದಿ ಅರೇಬಿಯಾದ ಎದುರು ಕೈ ಚಾಚಿ ನಿಲ್ಲುವ ಮೂಲಕ ಎಲ್ಲ ಮುಸ್ಲಿಮರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ.
ಹೌದು, ಕಾಂಗ್ರೆಸ್ಸಿನ ಹಿರಿಯ ಮುಖಂಡ ಮೊಹಮ್ಮದ್ ನಸೀಮ್ ಅವರು ಸೌದಿ ಅರೇಬಿಯಾದಲ್ಲಿ ಮುಸ್ಲಿಮರು ಉಮ್ರಾಆಚರಿಸಲು ತೆರಳಲಿದ್ದುಘ, ಇದಕ್ಕಾಗಿ ಮುಸ್ಲಿಮರ ಪ್ರಯಾಣದ ವಿಮಾನಯಾನದ ಬಾಡಿಗೆ ವೀಸಾ ಶುಲ್ಕ ಕಡಿತಗೊಳಿಸಬೇಕು ಎಂದು ಮನವಿ ಮಾಡುವ ಮೂಲಕ ಮುಸ್ಲಿಮರ ಸ್ವಾಭಿಮಾನ ಹರಾಜಿಗಿಟ್ಟಿದ್ದಾರೆ ಎಂಬ ಟೀಕೆ ವ್ಯಕ್ತವಾಗಿವೆ.
ಈ ಕುರಿತು ಮೊಹಮ್ಮದ್ ಅವರೇ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ವಿಮಾನಯಾನದ ಬಾಡಿಗೆ ಹಾಗೂ ವೀಸಾ ಶುಲ್ಕ ಕಡಿತಗೊಳಿಸಬೇಕು ಎಂದು ಸೌದಿ ಅರೇಬಿಯಾ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಕಾಂಗ್ರೆಸ್ ಮುಸ್ಲಿಮರ ಮತಕ್ಕಾಗಿ ಮೆಕ್ಕಾ ಯಾತ್ರಿಕರಿಗೆ ರಿಯಾಯಿತಿ, ವೆಚ್ಚ ಭರಿಸುವ ಮೂಲಕ ಓಲೈಕೆಯ ರಾಜಕಾರಣ ಮಾಡಿತ್ತುಘಿ. ಆದರೆ ನರೇಂದ್ರ ಮೋದಿ ಅವರು ಇದನ್ನು ಕಡಿತಗೊಳಿಸಿ, ಆ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ವಿನಿಯೋಗಿಸುವ ಮೂಲಕ ಮುಸ್ಲಿಮರ ಏಳಿಗೆಗೆ ಮುಂದಾಗಿದ್ದಾರೆ.
ಆದರೆ ಇದೇ ಮುಸ್ಲಿಂ ಮುಖಂಡ ರಿಯಾಯಿತಿಗಾಗಿ ಸೌದಿ ಅರೇಬಿಯಾಕ್ಕೆ ಪತ್ರ ಬರೆಯುವ ಮೂಲಕ ತಮ್ಮ ಸಮುದಾಯದ ಸ್ವಾಭಿಮಾನಕ್ಕೇ ಧಕ್ಕೆ ತರುವ ಕೆಲಸ ಮಾಡಿದ್ದಾರೆ.
Leave A Reply