ಬಿಜೆಪಿ ಸಮಾನತೆ ವಿರೋಧಿ ಎನ್ನುವವರೇ ಎಲ್ಲಿದ್ದೀರಿ:ಅಂತರ್ಜಾತಿ ವಿವಾಹ ಉತ್ತೇಜನಕ್ಕೆ ಮಹಾ ಸರ್ಕಾರ ನಿರ್ಧಾರ
ಮುಂಬೈ: ಬಿಜೆಪಿ ದಲಿತ ವಿರೋಧಿ, ಮನುವಾದವನ್ನು ಹೇರುವ ಪಕ್ಷ ಎನ್ನುವ ವಿರೋಧಿಗಳ ತೀವ್ರ ವಾಗ್ದಾಳಿಯನ್ನು ಎದುರಿಸಿಯೂ ಬಿಜೆಪಿ ಸರ್ಕಾರವೊಂದು ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡಲು ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಸೂಕ್ತ ರಕ್ಷಣೆ ಒದಗಿಸುವುದು ಮತ್ತು ಪೋಷಣೆ ಮಾಡುವ ನಿಯಮ ತರಲು ನಿರ್ಧರಿಸಿದೆ ಎಂದು ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಮೀತಿ ಸಚಿವ ರಾಜಕುಮಾರ ಬದೊಲೆ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅಂತರ್ಜಾತಿ ವಿವಾಹಕ್ಕೆ ಬಲಿಯಾಗುವವರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದ್ದರಿಂದ ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ರಕ್ಷಣೆ ನೀಡುವ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ. ಅನ್ಯ ಜಾತಿಯ, ವಿಶೇಷವಾಗಿ ದಮನಕ್ಕೆ ಒಳಗಾಗಿರುವ ಜಾತಿಯ ವ್ಯಕ್ತಿಗಳ ಮಧ್ಯೆ ಮದುವೆಯಾದರೆ ಆ ಜೋಡಿಗಳಿಗೆ ಸೂಕ್ತ ಸಹಾಯಧನ ನೀಡುವುದು, ಮಕ್ಕಳಾದರೂ ವಿಶೇಷ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.
ಅಂತರ್ಜಾತಿ ವಿವಾಹವಾದವರ ಮಕ್ಕಳಿಗೆ ಶಾಲೆ ಫೀಯಲ್ಲಿ ರಿಯಾಯಿತಿ ನೀಡುವುದು, ಸಾಮಾಜಿಕ ಬಹಿಷ್ಕಾರ ನೀಡಿದರೇ ಸೂಕ್ತ ರಕ್ಷಣೆ ನೀಡುವುದು, ಅಗತ್ಯವಿದ್ದಲ್ಲಿ ಸೂಕ್ತ ಆರ್ಥಿಕ ಸಹಾಯಧನ ನೀಡಲು ಯೋಜಿಸಲಾಗಿದೆ. ಪ್ರಸ್ತುತ ಇರುವ ವಿಶೇಷ ಮದುವೆ ಕಾಯಿದೆಗೆ ಸೂಕ್ತ ಬದಲಾವಣೆ ತರುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ದೆಹಲಿ ಡಾ.ಅಂಬೇಡ್ಕರ್ ಫೌಂಡೇಷನ್ ಅಂತರ್ಜಾತಿ ವಿವಾಹವಾಗುವ ನವದಂಪತಿಗೆ 2.5 ಲಕ್ಷ ರೂಪಾಯಿ ನೀಡುತ್ತದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಸಹಾಯಧನ, ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
Leave A Reply