ಉತ್ತರಾಖಂಡದಲ್ಲಿ ಲವ್ ಜಿಹಾದಿನಲ್ಲಿ ತೊಡಗಿದ್ದವನಿಗೆ ತಕ್ಕ ಶಾಸ್ತಿ, ಅರ್ಷಾದ್ ಅಲಿಗೆ 12 ವರ್ಷ ಜೈಲು ಶಿಕ್ಷೆ!
ಡೆಹ್ರಾಡೂನ್: ದೇಶದಲ್ಲಿ ದಿನೇದಿನೆ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಉತ್ತರಾಖಂಡದಲ್ಲಿ ಲವ್ ಜಿಹಾದ್ ಎಸಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡುವ ಮೂಲಕ ದೇಶದಲ್ಲಿ ಯಾರೂ ಲವ್ ಜಿಹಾದಿನಲ್ಲಿ ತೊಡಗಬಾರದು ಎಂಬ ಸ್ಪಷ್ಟ ಸಂದೇಶ ರವಾನಿಸಲಾಗಿದೆ.
ಹೌದು, ಉತ್ತರಾಖಂಡದ ನೈನಿತಲ್ ಜಿಲ್ಲೆಯ ರಾಮನಗರ ಎಂಬಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಕೊನೆಗೆ ಮತಾಂತರಗೊಳಿಸಿದ ಪ್ರಕರಣದಲ್ಲಿ ಅರ್ಷಾದ್ ಅಲಿ ಎಂಬಾತನಿಗೆ ಉತ್ತರಾಖಂಡ್ ಪೋಕ್ಸೋ ವಿಶೇಷ ನ್ಯಾಯಾಲಯ ಬರೋಬ್ಬರಿ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2016ರ ಮಾರ್ಚ್ 19ರಂದು ಹೈಸ್ಕೂಲು ವಿದ್ಯಾರ್ಥಿನಿಯನ್ನು ಅಪಹರಣ ಮಾಡಿದ್ದ ಅರ್ಷಾದ್ ಅಲಿ, ರಾಮನಗರದ ಕಾಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ತನ್ನ ಮನೆಗೆ ಕರೆದೊಯ್ದು ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾಗಿದ್ದ. ಬಳಿಕ ಬಾಲಕಿಯ ತಂದೆ ಮಾರ್ಚ್ 20ರಂದು ಬಾಲಕಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ಉದ್ದಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರ ಎಂಬಲ್ಲಿ ಅರ್ಷಾದ್ ಅಲಿಯನ್ನು ಬಂಧಿಸಿದ್ದಲ್ಲದೆ, ಬಾಲಕಿಯನ್ನು ರಕ್ಷಿಸಿದ್ದರು. ಬಾಲಕಿಯು ನ್ಯಾಯಾಲಯದ ಎದುರು ಅರ್ಷಾದ್ ಅಲ್ ತನ್ನನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಲ್ಲದೆ, ಬಲವಂತವಾಗಿ ಮತಾಂತರಿಸಿ ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಳು.
ಈಗ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿದಿದ್ದು, ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಬಲವಂತವಾಗಿ ಮತಾಂತರಗೊಳಿಸಿದ ಆರೋಪದಲ್ಲಿ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಆ ಮೂಲಕ ಹಿಂದೂ ಯುವತಿಯರನ್ನು ಪ್ರೀತಿಸುವ ನಾಟಕವಾಡಿಯೋ, ಬಲವಂತವಾಗಿ ಎಳೆದೊಯ್ದು ಮತಾಂತರ ಮಾಡುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳಿಗೆ ಸರಿಯಾದ ಪಾಠ ಕಲಿಸಲಾಗಿದೆ.
Leave A Reply