ಜೆಎನ್ ಯು ವಿವಿಯಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಕುರಿತು ಕೋರ್ಸ್ ಪ್ರಸ್ತಾಪ, ಇನ್ನಾದರೂ ಇವರಿಗೆ ಬುದ್ಧಿ ಬರಲಿ!
ದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ಒಂದು ವಿಲಕ್ಷಣ ಘಟನೆಯೊಂದು ನಡೆಯಿತು. ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ್ದ, ಪಾಪಿ ಅಫ್ಜಲ್ ಗುರು ತಿಥಿ ಆಚರಿಸುವ ಭರದಲ್ಲಿ, ಭಾರತದ ಅನ್ನವೇ ತಿನ್ನುವ ಕೆಲವು ಕುತ್ಸಿತ ಮನಸ್ಸುಗಳು ಭಾರತದ ವಿರುದ್ಧ ಘೋಷಣೆ ಕೂಗಿದ್ದರು. ಅದೂ ಅಫ್ಜಲ್ ಗುರು ಒಬ್ಬ ಇಸ್ಲಾಮಿಕ್ ಭಯೋತ್ಪಾದನೆಯ ದ್ಯೋತಕ, ಆತ ಭಾರತೀಯರನ್ನೇ ಕೊಂದಿದ್ದ ಎಂಬುದನ್ನೂ ಮರೆತು.
ಇಂತಹ ವಿದ್ಯಾರ್ಥಿಗಳು ಇದ್ದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಈಗ ಬದಲಾವಣೆಯ ಪುಟ್ಟ ಗಾಳಿಯೊಂದು ಬೀಸಿದ್ದು, ವಿಶ್ವದ ಶಾಂತಿಗೇ ಭಂಗ ತಂದಿರುವ ಇಸ್ಲಾಮಿಕ ಭಯೋತ್ಪಾದನೆ ಕುರಿತು ಕೋರ್ಸ್ ಒಂದನ್ನು ತೆರೆಯಲು ಜೆಎನ್ ಯು ವಿವಿಯ ಅಕಾಡೆಮಿಕ್ ಕೌನ್ಸಿಲ್ ಕೇಂದ್ರದ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದೆ.
ಇತ್ತೀಚೆಗಷ್ಟೇ ವಿವಿಯ ಅಕಾಡೆಮಿ ಸಮಿತಿ 145ನೇ ಸಭೆ ನಡೆದಿದ್ದು, ಸಭೆಗೆ ಆಗಮಿಸಿದವರಲ್ಲಿ ಕೆಲವು ಜನ ಇದು ಜಾತ್ಯತೀತ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಇಂತಹದದ್ದೊಂದು ಕೋರ್ಸ್ ಅನ್ನು ವಿವಿಯಲ್ಲಿ ತೆರೆಯುವುದು ಬೇಡ ಎಂದು ವಾದಿಸಿದ್ದರು. ಆದರೂ ಇಸ್ಲಾಮಿಕ್ ಭಯೋತ್ಪಾದನೆ ಕುರಿತು ಅಧ್ಯಯನ ಮಾಡಲು ಹಿನ್ನೆಲೆಯಲ್ಲಿ ಕೋರ್ಸ್ ತೆರೆಯಲು ಪ್ರಸ್ತಾಪ ರಚಿಸಲಾಗಿದೆ ಎಂದು ಸಮಿತಿಯ ವಿಶೇಷ ಆಹ್ವಾನಿತ ಸುಧೀರ್ ಕೆ. ಸುತಾರ್ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರವು ಒಪ್ಪಿಗೆ ಸೂಚಿಸಿದರೆ, ಜೆಎನ್ ಯು ವಿವಿಯಲ್ಲಿ ವಿದ್ಯಾರ್ಥಿಗಳು ಇಸ್ಲಾಮಿಕ್ ಭಯೋತ್ಪಾದನೆ ಕುರಿತು ಅಧ್ಯಯನ ಮಾಡಲಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದ್ದರೆ ವಿವಿಯಲ್ಲಿ ಮೊದಲ ಐದು ವರ್ಷದ ತನಕ ಇಸ್ಲಾಮಿಕ್ ಭಯೋತ್ಪಾದನೆ ಕುರಿತ ಸಂಶೋಧನೆಯೇ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಟ್ಟಿನಲ್ಲಿ ಇಸ್ಲಾಮಿನ ಹೆಸರಿನಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದವನ ತಿಥಿಯನ್ನೇ ಆಚರಿಸಿದ್ದ ವಿಶ್ವವಿದ್ಯಾಲಯದಲ್ಲಿ ಈಗ ಅದೇ ಇಸ್ಲಾಮಿಕ್ ಭಯೋತ್ಪಾದನೆ ಕುರಿತು ಅಧ್ಯಯನ ಮಾಡಲು ಕೋರ್ಸ್ ತೆರೆಯಲು ಮುಂದಾಗಿರುವುದು ಉತ್ತಮ ನಡೆಯಾಗಿದೆ. ಇನ್ನಾದರೂ ಭಾರತ್ ತೇರೆ ತುಕಡೆ ಹೋಂಗೆ ಎನ್ನುವವರಿಗೆ ಬುದ್ಧಿ ಬರಲಿ.
Leave A Reply