ಮುಂದುವರಿದ ಪಾಕ್ ಉಗ್ರ ಪೋಷಣೆ: ಭಯೋತ್ಪಾದಕ ಹಫೀಸ್ ಸಯೀದ್ ಗೆ ಸರ್ಕಾರದಿಂದ ಭದ್ರತೆ
ಇಸ್ಲಾಮಾಬಾದ್: ವಿಶ್ವದ ಭಯೋತ್ಪಾದಕರ ಉತ್ಪಾದನೆಯ ತಾಣ, ಪೋಷಣೆಯ ನೆಲೆ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಂದುವರಿಸಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್, ವಿಶ್ವ ಉಗ್ರಪಟ್ಟಿಯಲ್ಲಿರುವ ಭಯೋತ್ಪಾದಕ ಹಫೀಸ್ ಸಯೀದ್ ಗೆ ಪಾಕಿಸ್ತಾನ ಸರ್ಕಾರವೇ ಭದ್ರತೆ ನೀಡುವ ಮೂಲಕ ಮತ್ತೊಮ್ಮೆ ತನ್ನ ಕರಾಳ ಮುಖವನ್ನು ಬಯಲು ಮಾಡಿಕೊಂಡಿದೆ.
ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಸಯೀದ್ ಗೆ ಕೆಲ ತಿಂಗಳ ಹಿಂದೆ ಪಾಕ್ ಕೋರ್ಟ್ ತೀರ್ಪು ನೀಡಿ, ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹಫೀಸ್ ಸಯೀದ್ ಗೆ ಜೀವಕ್ಕೆ ಆತಂಕವಿದ್ದು, ಆದ್ದರಿಂದ ಭದ್ರತೆ ನೀಡಲಾಗುತ್ತಿದೆ ಎಂದು ನೆಪ ಹೇಳಿದೆ.
ಇತ್ತೀಚೆಗೆ ಉಗ್ರ ಹಫೀಸ್ ಸಯೀದ್ ಕಾಶ್ಮೀರದಲ್ಲಿ ಸೈನಿಕರ ಗುಂಡಿಗೆ ಬಲಿಯಾಗಿದ್ದ ಭಯೋತ್ಪಾದಕರ ಸ್ಮರಣೆ ಮಾಡಿ, ಭಾರತ ವಿರೋಧಿ ನಿಲುವು ತಳಿದಿದ್ದ. ಇದೇ ವೇಳೆಯಲ್ಲೇ ಸಯೀದ್ ಗೆ ಭದ್ರತೆ ಒದಗಿಸಿರುವುದು ಪಾಕಿಸ್ತಾನ ನೇರವಾಗಿ ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.
Leave A Reply