ಯೋಗಿ ಎಫೆಕ್ಟ್: ಒಳ್ಳೆ ಜೀವನ ನಡೆಸುತ್ತೇವೆ ಎಂದು ಶಪಥ ಮಾಡಿದ 51 ರೌಡಿ ಶೀಟರ್ ಗಳು
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅಪರಾಧ ಲೋಕಕ್ಕೆ ಭಾರಿ ಪೆಟ್ಟು ನೀಡಿದ್ದು, ತಮ್ಮ ಕಠೋರ ನಿಲುವುಗಳ ಮೂಲಕವೇ ಗಮನಸೆಳೆದಿದ್ದು, ಅಪರಾಧಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ಸರ್ಕಾರದ ಕಠೋರ ನಿಲುವುಗಳು, ಪೊಲೀಸರು ಕೈಗೊಂಡಿರುವ ದಿಟ್ಟ ಕಾರ್ಯಾಚರಣೆಗಳಿಗೆ ಬೆದರಿರುವ ರೌಡಿ ಶೀಟರ್ ಗಳು ರೌಡಿಸಂ ಬಿಟ್ಟು ಉತ್ತಮ ಜೀವನ ನಡೆಸುತ್ತೇನೆ ಎಂದು ಪೊಲೀಸರ ಎದುರು ಶಪಥ ಸ್ವೀಕಾರ ಮಾಡಿದ್ದಾರೆ.
ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರ ವ್ಯಾಪ್ತಿಯ 51 ರೌಡಿ ಶೀಟರ್ ಗಳು ಯೋಗಿ ಸರ್ಕಾರ ಎನ್ ಕೌಂಟರ್ ಮತ್ತು ರೌಡಿಗಳ ಹೆಡೆಮುರಿ ಕಟ್ಟುತ್ತಿರುವ ಕಠೋರ ನಿಯಮಗಳಿಗೆ ಹೆದರಿ ಬಾಲ ಮುದುರಿಸಿಕೊಂಡಿದ್ದಾರೆ, ಯೋಗಿ ಅಧಿಕಾರಕ್ಕೆ ಬರುವ ಮುಂಚೆ ರಾಜ್ಯದಲ್ಲಿ ಭಾರಿ ಅಪರಾಧ ಚಟುವಟಿಕೆಗಳು ನಡೆದು, ಜನರು ನಿತ್ಯ ಆತಂಕದಲ್ಲೇ ದಿನದೂಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಠೋರ ನಿಲುವುಗಳಿಗೆ ಹೆದರಿ ರೌಡಿಗಳು ಮುನ್ನೆಲೆಗೆ ಬರುತ್ತಿದ್ದು ಏಕಕಾಲಕ್ಕೆ 51 ರೌಡಿಗಳು ರೌಡಿಸಂ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುತ್ತೇನೆ ಎಂಬ ನಿಲುವು ತಾಳಿರುವುದು ಯೋಗಿ ಮತ್ತು ಪೊಲೀಸರು ಕೈಗೊಂಡ ದಿಟ್ಟ ಕ್ರಮಗಳೇ ಕಾರಣ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಪೊಲೀಸರು ಇದುವರೆಗೆ 31 ಅಪರಾಧಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದು, ಗಮನಾರ್ಹ.
Leave A Reply