ಚೀನಾದಲ್ಲಿ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಾಟ ಕಡ್ಡಾಯ ಮಾಡಿದ ಮುಸ್ಲಿಂ ಸಂಘಟನೆ
ಬೀಜಿಂಗ್: ಚೀನಾದಲ್ಲಿರುವ ಎಲ್ಲ ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಾಟ ಮಾಡುವುದು ಕಡ್ಡಾಯ ಮತ್ತು ಮಸೀದಿಗಳಲ್ಲಿ ಸಾಮಾಜಿಕ ಮೌಲ್ಯಗಳ ಕುರಿತು ಬೋಧನೆ ಮಾಡುವುದನ್ನು ಎಂದು ಚೀನಾ ಇಸ್ಲಾಮಿಕ್ ಅಸೋಸಿಯೇಷನ್ ಕಡ್ಡಾಯ ಮಾಡಿದೆ ಎಂದು ಚೀನಾ ಮೂಲದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಚೀನಾದ ಮುಸ್ಲಿಂ ಧಾರ್ಮಿಕ ಮುಖಂಡರು ದೇಶದ ಐಕತ್ಯೆ, ರಾಷ್ಟ್ರೀಯತೆಯನ್ನು ಬಿತ್ತಲು ಈ ನಿಯಮ ಜಾರಿಗೆ ತಂದಿದ್ದಾರೆ. ಧಾರ್ಮಿಕ ಅಭಿವೃದ್ಧಿಯ ಜೊತೆಗೆ ರಾಷ್ಟ್ರದ ಏಳಿಗೆಯ ಬಗ್ಗೆ ಚಿಂತನೆ ನಡೆಸುವುದು ಅನಿವಾರ್ಯ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಚೀನಾ ಮುಸ್ಲಿಂ ಅಸೋಸಿಯೇಷನ್ ಈ ಕುರಿತು ಪತ್ರವೊಂದನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ‘ಎಲ್ಲ ಮಸೀದಿಗಳ ಮೇಲೆ ರಾಷ್ಟ್ರೀಯ ಹಬ್ಬಗಳು ಸೇರಿ ರಾಷ್ಟ್ರೀಯ ಮುಖ್ಯ ದಿನಗಳಲ್ಲಿ ಎಲ್ಲ ರಾಷ್ಟ್ರಧ್ವಜ ಹಾರಾಟ ಕಡ್ಡಾಯ ಎಂದು ಸೂಚನೆ ನೀಡಿದೆ.
ಮಸೀದಿಗಳಲ್ಲಿ ಸಾಮಾಜಿಕ ಮೌಲ್ಯಗಳು, ಚೀನಾದ ಸಂಸ್ಕೃತಿ ಮತ್ತು ವೈಭವ ಮತ್ತು ಸಂವಿಧಾನದ ಕುರಿತು ಪಾಠ ಬೋಧಿಸಬೇಕು. ಅಲ್ಲದೇ ಚೀನಾದ ಕಾನೂನಿನ ಅಡಿಯಲ್ಲೇ ಮಸೀದಿಗಳು ಪಾಠ ಬೋಧಿಸಬೇಕು ಎಂದು ಸೂಚಿಸಿದೆ. ಕೆಲವು ಮಸೀದಿಗಳು ಈಗಾಗಲೇ ಈ ನಿಯಮವನ್ನು ಆರಂಭಿಸಿದ್ದು, ರಾಷ್ಟ್ರಧ್ವಜಾರೋಹಣ ಮಾಡುತ್ತಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಕೆಲವರು ಈ ಕುರಿತು ಅಭಿಪ್ರಾಯ ಭೇದ ವ್ಯಕ್ತಪಡಿಸಿದ್ದು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಲಾಗಿದೆ. ರಾಷ್ಟ್ರಧ್ವಜಾರೋಹಣ ರಾಜಕೀಯ ವಿಷಯವಲ್ಲ. ಅದು ರಾಷ್ಟ್ರೀಯತೆಯ ಪ್ರತೀಕ. ಈ ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
Leave A Reply