• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತಮ್ಮದೇ ಅಂಗಣದ ಅವೈಜ್ಞಾನಿಕ ಕಾಮಗಾರಿಗೆ ಕಣ್ಣು ಮುಚ್ಚಿದ ಮನಪಾ

Hanumantha Kamath Posted On May 23, 2018
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದ ಕಾಮಗಾರಿಗಳು ಎಷ್ಟು ಅವೈಜ್ಞಾನಿಕವಾಗಿರುತ್ತವೆ ಮತ್ತು ಕಳಪೆಯಾಗಿರುತ್ತವೆ ಎನ್ನುವುದು ನಮಗೆ ಗೊತ್ತು. ಇವತ್ತು ನಾವೇನೂ ತುಂಬಾ ದೂರ ಹೋಗಬೇಕಿಲ್ಲ. ಪಾಲಿಕೆಯ ಆವರಣವನ್ನೇ ತೆಗೆದುಕೊಳ್ಳೋಣ. ಆವರಣದಲ್ಲೇ ಇವರು ಮಾಡಿದ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ಕೆಲಸಗಳು ಎಷ್ಟರಮಟ್ಟಿಗೆ ಇಲ್ಲಿನ ಇಂಜಿನಿಯರ್ಸ್ ತಮ್ಮ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

ಪಾಲಿಕೆಯ ಹಿಂದಿನ ದ್ವಾರದ ಹತ್ತಿರ ಬನ್ನಿ. ಆ ಗೇಟಿನ ಒಳಗೆ ಕಾಲಿಟ್ಟ ಕೂಡಲೇ ನಿಮಗೆ ಮ್ಯಾನ್ ಹೋಲ್ ಒಂದು ಸ್ವಾಗತ ಮಾಡುತ್ತದೆ. ನೀವು ಆ ಮ್ಯಾನ್ ಹೋಲ್ ಮುಚ್ಚಳವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಸಾಧ್ಯವೇ ಇಲ್ಲ. ಯಾಕೆಂದರೆ ಅದನ್ನು ಗುತ್ತಿಗೆದಾರರು ಹಾಗೆ ಎಲ್ಲರಿಗೂ ಎದ್ದು ಕಾಣುವಂತೆ ಇಟ್ಟಿದ್ದಾರೆ. ನೀವು ಕಾರಿನಲ್ಲಿ ಒಳಗೆ ಬರುವವರಾದರೆ ಒಂದಿಷ್ಟು ಹೆಚ್ಚು ಜಾಗ್ರತೆ ಮಾಡಿ. ಇಲ್ಲದಿದ್ದರೆ ನಿಮ್ಮ ಕಾರಿಗೆ ಪೆಟ್ಟಾದೀತು. ಇನ್ನು ದ್ವಿಚಕ್ರ ವಾಹನದಲ್ಲಿ ಒಳ ಪ್ರವೇಶಿಸುವವರಿಗೆ ಇದೊಂದು ಸರ್ಕಲ್ ತರಹ ಆಗುತ್ತದೆ. ಅಷ್ಟಕ್ಕೂ ರಸ್ತೆಯಿಂದ ಮೇಲೆ ಎಲ್ಲರಿಗೂ ಕಾಣುವಂತೆ ಈ ಮ್ಯಾನ್ ಹೋಲ್ ಯಾಕೆ ಇಟ್ಟಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಬಹುಶ: ಪಾಲಿಕೆಯ ಇಂಜಿನಿಯರ್ ಗಳಿಗೆ ಕೆಳಗೆ ಬಂದು ಪರೀಕ್ಷಿಸುವ ಕೆಲಸ ಕೊಡುವುದು ಯಾಕೆ, ಅವರಿಗೆ ಮೊದಲ ಮಹಡಿಯ ಕಿಟಕಿಯಿಂದಲೇ ಕೆಲಸ ಕಾಣಲಿ ಎನ್ನುವುದು ಗುತ್ತಿಗೆದಾರರ ಐಡಿಯಾ ಇರಬಹುದಾ ಎನ್ನುವುದು ಪ್ರಶ್ನೆ.

ವಿಷಯ ಏನೆಂದರೆ ಪಾಲಿಕೆಯವರು ಒಂದು ಕಾಮಗಾರಿ ಮಾಡಿಸಲು ಅಂದಾಜು ಪಟ್ಟಿ ತಯಾರಿಸಬೇಕು. ನಂತರ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕು. ಕಾಮಗಾರಿ ನಡೆಯುವಾಗ ಪಾಲಿಕೆಯ ಇಂಜಿನಿಯರ್ಸ್ ಅಲ್ಲಿ ಭೇಟಿ ನೀಡಿ ಪರೀಕ್ಷಿಸಬೇಕು. ಆದರೆ ನಮ್ಮ ಪಾಲಿಕೆಯ ಇಂಜಿನಿಯರ್ಸ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವುದೇ ಇಲ್ಲ. ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ. ಕಳಪೆ ಆದಷ್ಟು ಇಂಜಿನಿಯರ್ಸ್ ಮತ್ತು ಅಧಿಕಾರಿಗಳಿಗೆ ಲಾಭ. ಅವರು ಕೆಲವು ಸಮಯದ ಬಳಿಕ ಮತ್ತೆ ಬೇಕಾದರೆ ಹಣ ಸ್ಯಾಂಕ್ಷನ್ ಮಾಡಿಸಿ ಕೆಲಸ ಮಾಡಿಸುತ್ತಾರೆ. ಮತ್ತೆ ಕಮೀಷನ್ ಹೊಡೆಯಲು ಅವಕಾಶ. ಇದರಿಂದ ಯಾವ ಅಧಿಕಾರಿಗೂ ಜನರ ತೆರಿಗೆಯ ಹಣದ ಮೇಲೆ ಪ್ರೀತಿ ಇಲ್ಲ ಎಂದು ಸಾಬೀತಾಗಿದೆ. ಇಲ್ಲದಿದ್ದರೆ ರಸ್ತೆಗಿಂತ ಎತ್ತರದಲ್ಲಿ ಯಾರು ತಾನೇ ಮ್ಯಾನ್ ಹೋಲ್ ನಿರ್ಮಿಸುತ್ತಾರೆ. ಇದರ್ಥ ಏನೆಂದರೆ ಕಾಮಗಾರಿ ಯಾರಿಗೆ ಕೊಡಲಾಗಿದೆಯೋ ಆ ಗುತ್ತಿಗೆದಾರರಿಗೆ ಕೆಲಸದ ಪರಿಜ್ಞಾನ ಇಲ್ಲ. ಮ್ಯಾನ್ ಹೋಲ್ ಒಂದು ಪ್ರದೇಶದಲ್ಲಿ ಅಳವಡಿಸುವಾಗ ಅದು ರಸ್ತೆಯ ಮಟ್ಟಕ್ಕಿಂತ ಮೇಲೆ ಇರಬಾರದು ಎನ್ನುವ ಕನಿಷ್ಟ ಜ್ಞಾನ ಕೂಡ ಇಲ್ಲ. ಗುತ್ತಿಗೆದಾರರು ಯಾರ್ಯಾರಿಗೋ ಕಮೀಷನ್ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿರುತ್ತಾರೆ. ಅವರಿಗೆ ಮ್ಯಾನ್ ಹೋಲ್ ರಸ್ತೆಯ ಮೇಲೆ ಎತ್ತರದಲ್ಲಿ ಇರಬಾರದು ಎನ್ನುವಷ್ಟು ಬುದ್ಧಿ ಇಲ್ಲ ಎಂದೇ ಇಟ್ಟುಕೊಳ್ಳೋಣ. ಅಂತವರ ಕೈಗೆ ಕಾಮಗಾರಿ ಕೊಡುತ್ತಾರಲ್ಲ, ನಮ್ಮ ಪಾಲಿಕೆಯ ಅಧಿಕಾರಿಗಳು, ಅವರಿಗೆ ಏನು ಹೇಳುವುದು? ಇನ್ನು ಪಾಲಿಕೆಯ ಆವರಣದಲ್ಲಿ ಇಂತಹ ಕಾಮಗಾರಿ ಆದರೂ ಅದನ್ನು ನೋಡದ ಇಂಜಿನಿಯರ್ ಗಳಿಗೆ ಏನು ಹೇಳುವುದು.

ಇಂಜಿನಿಯರ್ ಗಳಿಗೆ ಆಶ್ಚರ್ಯವಾಯಿತಾ, ಅಸಹ್ಯವಾಯಿತಾ.

ನನಗೆ ಇವರ ಇಷ್ಟು ನಿರ್ಲಕ್ಷ್ಯ ನೋಡಿ ತಡೆಯಲಾಗಲಿಲ್ಲ. ಸೀದಾ ಪಾಲಿಕೆಯ ಇಂಜಿನಿಯರ್ ಗಳಿಗೆ ಈ ವಿಷಯ ತಲುಪಿಸಿದೆ. ಅವರನ್ನು ಕರೆದು ಈ ಅವೈಜ್ಞಾನಿಕ ಕಾಮಗಾರಿಯನ್ನು ತೋರಿಸಿದೆ. ಅವರಿಗೆನೆ ಆಶ್ಚರ್ಯವಾಯಿತು. ಆದಷ್ಟು ಬೇಗ ಇದನ್ನು ಸರಿಪಡಿಸುವ ಭರವಸೆ ಕೊಟ್ಟರು. ಅದರ ನಂತರ ಮತ್ತೆ ಕಾಮಗಾರಿ ನಡೆಸಿ ಮ್ಯಾನ್ ಹೋಲ್ ರಸ್ತೆಗೆ ಸರಿಯಾಗಿ ಇರುವಂತೆ ನೋಡಿಕೊಂಡಿದ್ದಾರೆ. ನನ್ನ ಪ್ರಶ್ನೆ ಇಷ್ಟೇ. ನಾನು ಪಾಲಿಕೆಯ ಆವರಣದಲ್ಲಿ ಇದನ್ನು ನೋಡಿ, ಅಲ್ಲಿನ ಇಂಜಿನಿಯರ್ಸ್ ಗಮನಕ್ಕೆ ತಂದ ಕಾರಣ ಇದನ್ನು ಸರಿಪಡಿಸಲಾಯಿತು. ಇಂತಹುದೇ ನಮ್ಮ ಪಾಲಿಕೆ ವ್ಯಾಪ್ತಿಯ ಅರವತ್ತು ವಾರ್ಡುಗಳಲ್ಲಿ ಎಷ್ಟಿದೆ ಎಂದು ಹುಡುಕುತ್ತಾ ಹೋಗುವುದು ಯಾರು? ಗುತ್ತಿಗೆದಾರರು ಹೀಗೆ ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ತಿದ್ದುವವರು ಯಾರು? ಕಮೀಷನ್ ತೆಗೆದುಕೊಂಡರೆ ಪಾಲಿಕೆಯ ಅಧಿಕಾರಿಗಳ, ಇಂಜಿನಿಯರ್ಸ್ ಕೆಲಸ ಮುಗಿಯಿತಾ? ಜನ ಇವರ ಕಳಪೆ ಮತ್ತು ಮನಸ್ಸಿಗೆ ಬಂದ ರೀತಿಯ ಕೆಲಸದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇಂಜಿನಿಯರ್ಸ್ ಪಾಲಿಕೆಯಲ್ಲಿ ಚೇರ್ ಬಿಸಿ ಮಾಡಲು ಇರುವುದಾ? ಇವತ್ತು ನಾನು ಹೇಳಿದ್ದು ಅವೈಜ್ಞಾನಿಕ ಕೆಲಸವೊಂದರ ಸ್ಯಾಂಪಲ್. ನಾಳೆ ಇದೇ ಮ್ಯಾನ್ ಹೋಲ್ ಇರುವ ಪ್ರದೇಶಕ್ಕೆ ಪಾಲಿಕೆ ಇಂಟರ್ ಲಾಕ್ ಹಾಕಿದೆಯಲ್ಲ, ಅದರ ಕಳಪೆ ಕಾಮಗಾರಿಯನ್ನು ವಿವರಿಸುತ್ತೇನೆ. ಅದರ ಫೋಟೋ ಕೂಡ ಇದೆ. ತಮ್ಮದೇ ಪಾಲಿಕೆಯ ಅಂಗಣದಲ್ಲಿ ಕಳಪೆ ಕಾಮಗಾರಿ ಮಾಡಿಸುವ ಅಧಿಕಾರಿಗಳು ಉಳಿದ ಕಡೆ ಬಿಡುತ್ತಾರಾ!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search