ಅಚ್ಚೇ ದಿನ್ ಎಲ್ಲಿ ಎನ್ನುವವರೇ ಕೇಳಿ, ಒಂದೇ ಯೋಜನೆ ದೇಶದ 12 ಕೋಟಿ ಜನರಿಗೆ ಲಾಭವಾಗಿರುವುದನ್ನು
ದೆಹಲಿ: ದೇಶದಲ್ಲಿ ಅಚ್ಛೇ ದಿನ್ ಇಲ್ಲ, ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಸದಾ ಬೊಗಳೆ ಬಿಡುತ್ತಿರುವ ಕೆಲವು ಅತೃಪ್ತ ಆತ್ಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪರೋಕ್ಷವಾಗಿ ತಕ್ಕ ಉತ್ತರವನ್ನು ನೀಡಿದ್ದಾರೆ.
ಮಂಗಳವಾರ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮುದ್ರಾದ ಫಲಾನುಭವಿಗಳ ಜೊತೆಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಮೋದಿ ಅವರು, ಮುದ್ರಾ ಯೋಜನೆಯಲ್ಲಿ ಕಿರು ಉದ್ದಿಮೆ, ಸಣ್ಣ ವ್ಯಾಪಾರ ಆರಂಭಸುವವರಿಗೆ ಒಟ್ಟು ಆರು ಲಕ್ಷ ಕೋಟಿ ರೂ. ಸಾಲ ವಿತರಿಸಲಾಗಿದೆ. ಮುದ್ರಾ ಯೋಜನೆಯಿಂದ ದೇಶಾದ್ಯಂತ ಸುಮಾರು 12 ಕೋಟಿ ಜನರಿಗೆ ಲಾಭವಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳು ಸಾಲ ಮೇಳಗಳ್ನು ನಡೆಸಿ, ಸಾಲ ವಿತರಿಸಿದರೂ, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ವಿಫಲರಾಗಿದ್ದರು. ಆದರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ತಮ್ಮ ವಿಡಿಯೋ ಭಾಷಣದಲ್ಲೂ ಹಿಂದಿನ ಸರ್ಕಾರಗಳ ವೈಪಲ್ಯವನ್ನು ಎತ್ತಿತೋರಿಸಿರುವ ಪ್ರಧಾನಿ ನರೇಂದ್ರ ಮೋದಿ 25-30 ವರ್ಷದ ಹಿಂದೆ ರಾಜಕೀಯ ಲಾಭಕ್ಕಾಗಿ ಸಾಲ ಮೇಳ ಆಯೋಜಿಸಿ, ರಾಜಕಾರಣಿಗಳ ಆಪ್ತರು, ಸಂಬಂಧಿಕರು ಸಾಲ ಪಡೆದು, ಬ್ಯಾಂಕ್ ಗಳಿಗೆ ವಂಚಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಸಾಲ ಮೇಳ ಆಯೋಜಿಸದೇ, ಯುವಕರ ಮೇಲೆ ಭರವಸೆ ಇಟ್ಟಿದ್ದು, ನೇರವಾಗಿ ಸಾಲ ಪಡೆದು ಉದ್ಯೋಗ ಆರಂಭಿಸಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
2015ರ ಏಪ್ರಿಲ್ 8ರಂದು ಆರಂಭವಾದ ಮುದ್ರಾ ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರ, ಉದ್ದಿಮೆ ಆರಂಭಿಸಲು 10 ಲಕ್ಷ ರೂವರೆಗೆ ಸಾಲ ನೀಡಲಾಗುತ್ತದೆ. 2017 ರಲ್ಲಿ ಮುದ್ರಾ ಯೋಜನೆಯಲ್ಲಿ ಕೇಂದ್ರ ಸರ್ಕಾರ 2.53 ಲಕ್ಷ ಕೋಟಿ ಸಾಲವನ್ನು ವಿತರಿಸಲಾಗಿತ್ತು. ಇದುವರೆಗೆ ಒಟ್ಟು 5.73 ಲಕ್ಷ ಕೋಟಿ ರೂ. ಸಾಲ ವಿತರಿಸಿದ್ದು, ಕೋಟ್ಯಂತರ ಯುವಕರಿಗೆ ಇದರಿಂದ ಉದ್ಯೋಗ ದೊರಕಿದೆ.
Leave A Reply