ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ: ಎಲ್ಲಿದ್ದಾರೇ ಬುದ್ಧಿಜೀವಿಗಳು?
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತದ ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷಗಳ ಕಾರ್ಯಕರ್ತರ ಕೊಲೆಗಳು ನಿರಂತರವಾಗಿದ್ದು, 15 ದಿನದಲ್ಲೇ ಬಿಜೆಪಿಯ ಇಬ್ಬರು ಕಾರ್ಯಕರ್ತರ ಕೊಲೆಯಾಗಿದೆ. ಶನಿವಾರ ಬಲಾರಾಮಪುರದ ಪುರಲಿಯಾ ಪ್ರದೇಶದ ದಾಭಾ ಗ್ರಾಮದಲ್ಲಿ ನೇತು ಹಾಕಿದ ಸ್ಥಿತಿಯಲ್ಲಿ 32 ವರ್ಷದ ದುಲಾಲ್ ಕುಮಾರ ಎಂಬ ಬಿಜೆಪಿ ಕಾರ್ಯಕರ್ತನ ಕಾರ್ಯಕರ್ತನ ದೇಹ ದೊರೆತಿದೆ.
ಕೊಲೆಯ ಹಿಂದೆ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ದುಲಾಲ್ ಕೊಲೆಗೆ ಮತ್ತು ಇತ್ತೀಚೆಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ತ್ರಿಲೋಚನ ಮಹಾತೊ ಕೊಲೆಯಲ್ಲಿ ಸಾಮ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ ವಿಜಯವರ್ಗಿಯ ಟ್ವೀಟರ್ ನಲ್ಲಿ ಆರೋಪಿಸಿದ್ದಾರೆ.
ತ್ರಿಲೋಚನ ಮಹಾತೋ ದೇಹವನ್ನು ನೇತು ಹಾಕಿ. ಅದರ ಹಿಂದೆ ಬಿಜೆಪಿಗೆ ಬೆಂಬಲ ನೀಡಿದರೇ ಕೊಲೆಯೇ ಗತಿ ಎಂಬರ್ಥದಲ್ಲಿ ಸಂದೇಶವನ್ನು ಬರೆದಿದ್ದ ಚೀಟಿ ದೊರೆತ್ತಿತ್ತು. ಇದೀಗ ದುಲಾಲ್ ಕೊಲೆಯಲ್ಲೂ ರಾಜಕೀಯ ದ್ವೇಷವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ನ ರೌಡಿಗಳು ರಾಜಕೀಯ ವಿರೋಧಿಗಳ ಕೊಲೆಗಳನ್ನು ಮಾಡಿಸುತ್ತಿದ್ದಾರೆ.
ಕೊಲೆಯನ್ನು ವಿರೋಧಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಏಳಿಗೆಯನ್ನು ಸಹಿಸದೇ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿಸುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವ ತಾಕತ್ತು ಬಿಜೆಪಿಗಿದೆ. ಜನರೇ ತೃಣಮೂಲ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಪಶ್ಚಿಮ ಬಂಗಾಳ ಮುಖ್ಯಸ್ಥ ದಿಲೀಪ್ ಘೋಷ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ ನಡೆದಿತ್ತು. 839 ಸ್ಥಾನ ಟಿಎಂಸಿ ಮತ್ತು 645 ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲದೇ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಎಂಸಿ 26 ಮತ್ತು ಬಿಜೆಪಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ತೃಣಮೂಲ ಕಾಂಗ್ರೆಸ್ ಗೆ ತಕ್ಕ ಸೆಡ್ಡು ಹೊಡೆಯುತ್ತಿರುವುದು ಟಿಎಂಸಿ ಮುಖಂಡರಿಗೆ ಸಹಿಸಲು ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
Leave A Reply