ಮೋದಿಯ ತೆಗಳುವವರೇ ಕೇಳಿ, 4 ವರ್ಷದಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ಅನುದಾನ ಶೇ.62ರಷ್ಟು ಹೆಚ್ಚಿಸಲಾಗಿದೆ!
ಪ್ರಧಾನಿ ನರೇಂದ್ರ ಮೋದಿ ಎಂದರೆ ಮುಸ್ಲಿಂ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಎನ್ನುವವರು ತುಂಬ ಜನರಿದ್ದಾರೆ. ಅಲ್ಪಸಂಖ್ಯಾತರನ್ನು ಗುತ್ತಿಗೆ ಪಡೆದವರಂತೆ ಆಡುವ ಕಾಂಗ್ರೆಸ್ ಮೋದಿ ಅವರನ್ನು ತೆಗಳಲು ಇದೊಂದೇ ಅಸ್ತ್ರವನ್ನೇ ಬಳಸುತ್ತದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಹಾಗಲ್ಲ. ಸರ್ವ ಜನಾಂಗದವರು, ಸರ್ವ ಸಮುದಾಯದವರನ್ನು ಒಗ್ಗೂಡಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಹಲವು ಯೋಜನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಇದನ್ನು ಮೋದಿ ಅವರನ್ನು ತೆಗಳುವ ದೃಷ್ಟಿಯಿಂದ, ಅಲ್ಪಸಂಖ್ಯಾತರ ಮತಪಡೆದೂ ಅವರನ್ನು ಅಭಿವೃದ್ಧಿಗೊಳಿಸದ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ತೆಗಳುತ್ತಾರೆ.
ಆದರೆ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಅಲ್ಪಸಂಖ್ಯಾತರ ಏಳಿಗೆಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ಇದುವರೆಗೆ ಅಲ್ಪಸಂಖ್ಯಾತರ ಏಳಿಗೆಗೆ ನೀಡುತ್ತಿದ್ದ ಅನುದಾನವನ್ನು ಶೇ.62ರಷ್ಟು ಹೆಚ್ಚಿಸಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ ಇದುವರೆಗೂ ಅಲ್ಪಸಂಖ್ಯಾತರ ಏಳಿಗೆಗೆ ಮೀಸಲಿಡಲಾಗದಂತಹ ಹಣ, ಎಂದರೆ ಕೇಂದ್ರ ಸರ್ಕಾರ ಬರೋಬ್ಬರಿ 4,700 ಕೋಟಿ ರೂಪಾಯಿಗಳನ್ನು ಮೀಸಲಿಡುವ ಮೂಲಕ ಇತಿಹಾಸ ಬರೆಯಿತು.
ಇದುವರೆಗೂ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಏಳಿಗೆಗಾಗಿ ಮೀಸಲಿಟ್ಟರಿಲಿಲ್ಲ. ಈ ಹಣದಲ್ಲಿ ಪ್ರಸ್ತುತ 45 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಕೌಶಲ ಅಭಿವೃದ್ಧಿಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮ್ ಮಹಿಳೆಯರು ಪುರುಷರ ಸಹಾಯವಿಲ್ಲದೆ ಹಜ್ ಯಾತ್ರೆ, ಅಂದರೆ ಸ್ವತಂತ್ರವಾಗಿ ಹಜ್ ಯಾತ್ರೆ ಕೈಗೊಳ್ಳಲು ಅನುಕೂಲ ಮಾಡಿದ್ದಾರೆ. ಆ ಮೂಲಕ ಮಹಿಳೆಯರೂ ಸ್ವಾವಲಂಬಿಯಾಗಿ ಯಾತ್ರೆ ಕೈಗೊಳ್ಳುವ ಅವಕಾಶ ಮಾಡಿದ್ದಾರೆ. ಇದೇ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ 1300 ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಯಾತ್ರೆ ಕೈಗೊಳ್ಳಲಿದ್ದಾರೆ.
ಅಷ್ಟೇ ಅಲ್ಲ, ಹಜ್ ಸಬ್ಸಿಡಿ ರದ್ದುಗೊಳಿಸಿ, ಆ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಬಳಸಲು ಮುಂದಾಗಿದ್ದಾರೆ. ತ್ರಿವಳಿ ತಲಾಖ್ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರು ನರಕ ಅನುಭವಿಸುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಕೌಶಲ ಅಭಿವೃದ್ಧಿಗಾಗಿ ಮೌಲಾನಾ ಆಜಾದ್ ನ್ಯಾಷನಲ್ ಅಕಾಡೆಮಿ ಸ್ಥಾಪಿಸಿದ್ದಾರೆ. ಗರಿಬ್ ನವಾಜ್ ಕೌಶಲ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿದ್ದಾರೆ. ಹೇಳಿ ಮೋದಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿಯಾಗಿದ್ದಾರೆ ಇಷ್ಟೆಲ್ಲ ಮಾಡುತ್ತಿತ್ತಾ?
Leave A Reply