ಮೋದಿ ಸರ್ಕಾರದ ದಾಳಿಗೆ ಹೆದರಿದ ನಕ್ಸಲರು, ಶರಣಾಗತಿ ಪ್ರಮಾಣ ಶೇ.143ಕ್ಕೆ ಏರಿಕೆ!
2014ನೇ ಇಸವಿಯನ್ನು ಪ್ರತಿ ಭಾರತೀಯನೂ ನೆನಪಿಟ್ಟುಕೊಳ್ಳುವಂತಹ ಇಸವಿ. ಇದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಇಸವಿ. ಹಾಗಂತ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಾನು ಪ್ರಧಾನಿಯಾದೆ ಎಂದೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಅವರು ನಾನೊಬ್ಬ ಪ್ರಧಾನ ಸೇವಕ ಎಂದೇ ಹೇಳಿಕೊಂಡಿದ್ದಾರೆ ಹಾಗೂ ಅದರಂತೆಯೇ ಆಳ್ವಿಕೆ ನಡೆಸಿದ್ದಾರೆ.
ಇಂತಹ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮುಖ್ಯವಾಗಿ ದೇಶಕ್ಕೇ ಮುಳುವಾಗಿರುವ ನಕ್ಸಲರು ನಿರ್ನಾಮವಾಗುತ್ತಿದ್ದಾರೆ ಎಂಬುದೇ ಸಂತಸದ ವಿಷಯ. ಹೌದು, ಮೋದಿ ಅವರು ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲಿ ನಕ್ಸಲರ ಹೆಡೆಮುರಿಕಟ್ಟಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹೆದರಿ ನಕ್ಸಲರು ಪೊಲೀಸರಿಗೆ ಬಂದು ಶರಣಾಗುತ್ತಿದ್ದು, ಈ ಪ್ರಮಾಣ ನಾಲ್ಕು ವರ್ಷದಲ್ಲಿ ಶೇ.143ರಷ್ಟು ಪ್ರಗತಿ ಕಂಡಿದೆ ಎಂದರೆ ಎಷ್ಟರಮಟ್ಟಿಗೆ ಕೇಂದ್ರ ಸರ್ಕಾರ ನಕ್ಸಲರನ್ನು ಸದೆಬಡಿದಿರಬೇಕು ಯೋಚಿಸಿ.
2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚಿಸಿದ ಬಳಿಕ ನಕ್ಸಲರ ವಿರುದ್ಧ ಸಮರ ಸಾರಿದ್ದು, ಭಾರತೀಯ ಭದ್ರತಾ ಪಡೆಗಳು 2014ರಿಂದ ಇದುವರೆಗೆ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಹಲವು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಇದರ ಪರಿಣಾಮವಾಗಿ 2014ರಿಂದ ಇದುವರೆಗೆ 3,373 ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಈ ಶರಣಾಗತಿ ಪ್ರಕ್ರಿಯೆಯಲ್ಲಿ ಶೇ.143ರಷ್ಟು ಪ್ರಗತಿಯಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಮಾಹಿತಿಯಾಗಿದೆ.
ಅಷ್ಟೇ ಅಲ್ಲ, ನಕ್ಸಲರ ದಾಳಿ ಹಾಗೂ ಹಿಂಸಾತ್ಮಕ ಘಟನೆಯಲ್ಲೂ ಕಡಿಮೆಯಾಗಿದ್ದು, 2016ರಲ್ಲಿ 6,524 ದಾಳಿಗಳಾದರೆ, 2017ರಲ್ಲಿ ಇದರ ಪ್ರಮಾಣ 4,136ಕ್ಕೆ ಕುಸಿದಿದ್ದು, ಶೇ. 36ರಷ್ಟು ಕುಸಿತ ಕಂಡಿದೆ. ಜತೆಗೆ ನಕ್ಸಲರ ದಾಲಿಯಿಂದ ಮೃತಪಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು, ಶೇ55.5ರಷ್ಟು ಕುಸಿತವಾಗಿದೆ.
2017ರಲ್ಲಿ ನಕ್ಸಲರ ದಾಳಿಯಲ್ಲಿ 188 ಜನ ಮೃತಪಟ್ಟಿದ್ದು, 1999-2017ರ ಅವಧಿಯಲ್ಲಿ ಇದೇ ವರ್ಷ ಕಡಿಮೆ ಜನ ಮೃತಪಟ್ಟಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಅಂದರೆ 2010ರ ಇಸವಿಯಲ್ಲಿ 720 ಜನ ನಕ್ಸಲರ ದಾಳಿಯಿಂದ ಮೃತಪಟ್ಟಿದ್ದರು.
ಒಟ್ಟಿನಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನ ಬಾಲ ಮುದುರಿಕೊಂಡು ಕೂತಿದೆ. ಪಾಕ್ ದಾಳಿಗೆ ಭಾರತ ಪ್ರತಿದಾಳಿ ಮಾಡುವ ಮೂಲಕ ಛಾಟಿಯೇಟು ನೀಡಿದೆ. ಚೀನಾವೂ ಭಾರತದ ಎದುರು ಮಂಡಿಯೂರಿದೆ. ಹಾಗೆಯೇ ದೇಶದ ಆಂತರಿಕ ಕಂಟವಾಗಿರುವ ನಕ್ಸಲರೂ ಹೆದರುತ್ತಿದ್ದಾರೆ. ಒಬ್ಬ ದಕ್ಷ ಪ್ರಧಾನ ಸೇವಕನಿಂದ ದೇಶದ ಭದ್ರತೆ ಜಾಸ್ತಿಯಾಗಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವೂ ದ್ವಿಗುಣವಾಗಿದೆ. ಇನ್ನೇನು ಬೇಕು!
Leave A Reply