ಜೆಎನ್ ಯು ನಲ್ಲಿ ಉಪನ್ಯಾಸ ಏರ್ಪಡಿಸಿ, ನಕ್ಸಲರನ್ನು ಸೃಷ್ಟಿಸಲು ಭೀಮಾಕೋರೆಗಾಂವ್ ಗಲಭೆ ಆರೋಪಿಗಳ ಪ್ಲಾನ್
ಪುಣೆ: ಮಹಾರಾಷ್ಟ್ರದಲ್ಲಿ ನಡೆದ ಭೀಮಾಕೋರೆಗಾಂವ್ ಗಲಭೆ ಆರೋಪಿಗಳಿಂದ ದೇಶಕ್ಕೆ ಮಾರಕವಾಗುವಂತ ಆಘಾತಕಾರಿ ವಿಷಯಗಳು ಹೊರ ಹೊಮ್ಮುತ್ತಿದ್ದು, ವಿಚಾರಣೆಯಲ್ಲಿ ಇಡೀ ಗಲಭೆಯ ಹಿಂದಿನ ವ್ಯವಸ್ಥಿತ ಸಂಚು ಬಯಲಾಗುತ್ತಿದೆ. ಇದೀಗ ಗಲಭೆ ಆರೋಪದಲ್ಲಿ ಬಂಧಿಸಲಾಗಿರುವ ವ್ಯಕ್ತಿಗಳೇ ಆಘಾತಕಾರಿ ವಿಷಯವೊಂದನ್ನು ಹೊರ ಹಾಕಿದ್ದು, ದೆಹಲಿಯ ಪ್ರತಿಷ್ಟಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಗಳನ್ನು ಏರ್ಪಡಿಸಿ, ಯುವ ವಿದ್ಯಾರ್ಥಿಗಳನ್ನು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೇರಣೆ ನೀಡಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ.
ಗುರುವಾರ ನಾಲ್ವರು ಆರೋಪಿಗಳಾದ ಸುಧೀರ್ ದಾವಲೆ, ಮಹೇಶ್ ರೌತ್, ಶೋಮಾ ಸೇನ್, ರೋನಾ ವಿಲ್ಸನ್ ರನ್ನು ಕೋರ್ಟ್ ಗೆ ಹಾಜರು ಪಡಿಸಿದ್ದು, ಈ ವೇಳೆ ‘ಮೃತ ನಕ್ಸಲರ ಸ್ಮರಣೆ’ (ಪೊಲೀಸರಿಂದ ಹತರಾದ ನಕ್ಸಲರ) ಹೆಸರಲ್ಲಿ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸವನ್ನು ಏರ್ಪಡಿಸಿ, ವಿದ್ಯಾರ್ಥಿಗಳನ್ನು ನಕ್ಸಲ ಚಟುವಟಿಕೆಗೆ ತಳ್ಳುವ ಷಡ್ಯಂತ್ರ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಹೊರ ಹಾಕಿದ್ದಾರೆ. ಜೆಎನ್ ಯು ವಿದ್ಯಾರ್ಥಿಗಳನ್ನು ನಿಷೇಧಿತ ನಕ್ಸಲರ ‘ಸಿಪಿಐ (ಮಾವೋಇಸ್ಟ್) ಬಂಡಾಯಕಾರರ’ ಸಂಘಟನೆಗೆ ಸೇರಿಸುವ ಉದ್ದೇಶ ಇದರ ಹಿಂದೆ ಹೊಂದಲಾಗಿತ್ತು ಎನ್ನಲಾಗಿದೆ.
ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಇಂತಹ ಪ್ರಯತ್ನಗಳು ಭಾರತದ ರಕ್ಷಣಾ ವ್ಯವಸ್ಥೆಗೆ ಆಘಾತಕಾರಿಯಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಬ್ಲಿಕ್ ಪ್ರಾಸಿಕೂಟರ್ ಉಜ್ವಲ್ ಪವಾರ್ ಈ ಕುರಿತು ಮಾಹಿತಿ ನೀಡಿದ್ದು ‘ಪೊಲೀಸ್ ಎನ್ ಕೌಂಟರ್ ನಲ್ಲಿ ಮೃತಪಟ್ಟಿರುವ ನಕ್ಸಲ್ ನವೀನ್ ಬಾಬು ಸ್ಮರಣೆಯಲ್ಲಿ ಉಪನ್ಯಾಸ ಏರ್ಪಡಿಸಿ, ನಕ್ಸಲರ ಮಾರ್ಗದರ್ಶನಂತೆ ವಿದ್ಯಾರ್ಥಿಗಳನ್ನು ಪ್ರಚೋದನೆಗೆ ಒಳಪಡಿಸಿ, ದೇಶವಿರೋಧಿ ಚಟುವಟಿಕೆಗಳಿಗೆ ಭಾಗಿಯಾಗುವಂತೆ ಮಾಡುವ ಹುನ್ನಾರ ಹೊಂದಿದ್ದರು ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
Leave A Reply