ನೋಟು ನಿಷೇಧ ವಿರೋಧಿಸಿದವರು ಓದಲೇಬೇಕಾದ ಸುದ್ದಿ ಇದು!
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿರುವ ಕಪ್ಪುಹಣ ಹಾಗೂ ಕಪ್ಪು ಕುಳಗಳನ್ನು ಹೊರತೆಗೆಯಲು 2016ರ ನವೆಂಬರ್ 8ರಂದು ನೋಟು ನಿಷೇಧ ಮಾಡಿದಾಗ ತುಂಬ ಜನ ವಿರೋಧಿಸಿದರು. ಅದರಲ್ಲೂ ಇವರೆಲ್ಲ ಮೋದಿ ವಿರೋಧಿಗಳೇ ಆಗಿರುವುದರಿಂದ ಸುಖಾಸುಮ್ಮನೆ ಟೀಕಿಸಿದರು.
ಆದರೆ ಹೀಗೆ ವಿರೋಧಿಗಳ ಲೆಕ್ಕಾಚಾರವೆಲ್ಲವನ್ನೂ ಸುಳ್ಳು ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ಸೀಮರು. ಹಾಗಾಗಿ ನೋಟು ನಿಷೇಧದ ಬಳಿಕ ದೇಶದಲ್ಲಿ ಕಪ್ಪು ಕುಳಗಳ ಉಪಟಳ ಕಡಿಮೆಯಾಗಿದೆ. ಕಪ್ಪು ಹಣ ಬ್ಯಾಂಕು ಸೇರಿದೆ. ಇಂತಹ ನೋಟು ನಿಷೇಧ ನಿರ್ಧಾರಕ್ಕೆ ಈಗ ಮತ್ತೊಂದು ಗರಿ ಸಿಕ್ಕಿದೆ.
ಹೌದು, ಆದಾಯ ಬಹಿರಂಗಪಡಿಸದ ಸುಮಾರು 10,767 ಕೋಟಿ ರೂಪಾಯಿಗಳನ್ನು ಆದಾಯ ಮತ್ತು ತೆರಿಗೆ ಇಲಾಖೆ ಪತ್ತೆಹಚ್ಚಿದ್ದು, ಇದು ಕಳೆದ ಬಾರಿ ಪತ್ತೆ ಹಚ್ಚಿದ್ದಕ್ಕಿಂತ ಶೇ.20ರಷ್ಟು ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.
2017-18ನೇ ಸಾಲಿನಲ್ಲಿ ಆದಾಯ ಬಹಿರಂಗಪಡಿಸದ ಹಾಗೂ ತೆರಿಗೆ ಪಾವತಿಸದ ಇಷ್ಟು ಮೊತ್ತವನ್ನು ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ ಪತ್ತೆ ಹಚ್ಚಿದ್ದು, ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. 2016-17ರಲ್ಲಿ ಐಟಿ ಇಲಾಖೆ, ಹೀಗೆ ಆದಾಯ ಬಹಿರಂಗಪಡಿಸದ 9,051 ಕೋಟಿ ರೂಪಾಯಿ ಪತ್ತೆ ಹಚ್ಚಿತ್ತು.
ಪ್ಯಾನ್ ಕಾರ್ಡ್ ಹೊಂದಿರದೆ ಅತಿ ಹೆಚ್ಚು ಹಣ ಇರುವ ಬ್ಯಾಂಕ್ ಖಾತೆಗಳು, ವಿದೇಶಿ ಖಾತೆ ತೆರಿಗೆ ಅನುಸರಣೆ ಕಾಯ್ದೆ, ಸ್ವಯಂಕೃತವಾಗಿ ಮಾಹಿತಿ ವಿನಿಮಯ, ಸಾಮಾನ್ಯ ವಿನಿಮಯ ಮಾಪನದ ಅನ್ವಯ ಐಟಿ ಇಲಾಖೆ ಈ ಹಣ ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ನೋಟು ನಿಷೇಧದಿಂದ ದೇಶದಲ್ಲಿ ಕಪ್ಪು ಹಣ ಪತ್ತೆಯಾಗುತ್ತಿರುವುದು ಶ್ಲಾಘನೀಯವಾಗಿದೆ.
Leave A Reply