ಬಿಜೆಪಿಯವರು ಜೀವಂತವಿದ್ದಾಗ ಮಾತ್ರ ಸಿಪಿಎಂ ಸೇರುವ ಪ್ರಶ್ನೆ: ಕೇರಳ ಸಿಪಿಎಂ ಮುಖ್ಯಸ್ಥ ಬಾಲಕೃಷ್ಣನ್
ಕೊಚ್ಚಿ: ದೇವರ ನಾಡು ಎಂದೇ ಹೆಸರಾಗಿರುವ ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ರ ಧರ್ಪ ದೌರ್ಜನ್ಯ ಮಿತಿ ಮೀರಿದ್ದು, ಇದುವರೆಗೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ, ಹಿಂದೂಪರ ಕಾರ್ಯಕರ್ತರ ಹತ್ಯೆಗಳು ಸಾಮಾನ್ಯವಾಗಿ ನಡೆಯುತ್ತಿದ್ದವು. ಆದರೆ ಇದೀಗ ಕೇರಳದ ಸಿಪಿಎಂ ಪಕ್ಷದ ಮುಖ್ಯಸ್ಥನೇ ಬಹಿರಂಗವಾಗಿ ಬಿಜೆಪಿ ಕಾರ್ಯರ್ತರಿಗೆ ಪರೋಕ್ಷವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರು ಎದುರಾಳಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಜೀವಂತವಾಗಿದ್ದರೇ ಮಾತ್ರ ಅವರು ನಮ್ಮ ಪಕ್ಷವನ್ನು ನಾಳೆ ಸೇರಬಹುದು ಎಂದು ಪರೋಕ್ಷವಾಗಿ ಬೆದರಿಕೆಯನ್ನು ಕೇರಳ ಸಿಪಿಎಂ ಮುಖಂಡ ಕೊಡಯೇರಿ ಬಾಲಕೃಷ್ಣನ್ ಒಡ್ಡಿದ್ದಾರೆ. ಈ ಮೂಲಕ ಬಹಿರಂಗವಾಗಿ ತಮ್ಮ ಕಾರ್ಯಕರ್ತರಿಗೆ ಹಿಂಸೆಗೆ ಪ್ರಚೋಧನೆಯನ್ನು ನೀಡಿದ್ದಾರೆ.
ಬಿಜೆಪಿ, ಆರ್ ಎಸ್ ಎಸ್ ನವರು ಕೇರಳದಲ್ಲಿ ಮಾರ್ಕಿಸ್ಟ್ ಪಕ್ಷವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ. ಅದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಬಿಜೆಪಿ ಕಾರ್ಯರ್ತರು ಜೀವಂತವಾಗಿದ್ದಾಗ ಮಾತ್ರ ಕೇರಳದಲ್ಲಿ ಬದಲಾವಣೆಯ ಪರ್ವ ಬೀಸಲಿದೆ. ನಾವು ಅವರನ್ನು ಜೀವಂತವಾಗಿ ಇಟ್ಟುಕೊಳ್ಳಲು ಬಯಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
Leave A Reply