ಇಸ್ಲಾಂ ಸ್ವೀಕರಿಸದ್ದಕ್ಕೇ ರಾಷ್ಟ್ರಮಟ್ಟದ ಶೂಟರ್ ಗೆ ಧರ್ಮಾಂಧ ಪತಿ ವಿಚ್ಛೇದನ ನೀಡಿದ್ದಾರೆ ನೋಡಿ!
ದೇಶದಲ್ಲಿ ದಿನೇದಿನೆ ಬೆಳಕಿಗೆ ಬರುತ್ತಿರುವ ಲವ್ ಜಿಹಾದ್ ಪ್ರಕರಣ ನೋಡಿದಾಗ ಇಸ್ಲಾಂ ಮೂಲಭೂತವಾದದ ಬಗ್ಗೆ ಟೀಕೆ ವ್ಯಕ್ತವಾಗುತ್ತವೆ. ಇವರೇನೋ ಧಾರ್ಮಿಕ ಅಸಹಿಷ್ಣುಗಳು, ಧರ್ಮದ ಹೆಸರಿನಲ್ಲಿ ಹೇಯ ಕೃತ್ಯ ಮಾಡುವವರು ಎಂದು ಸುಮ್ಮನಾಗಬಹುದು. ಆದರೆ ಅಕ್ಷರಸ್ಥರೂ, ಕ್ರೀಡಾಪಟುಗಳೇ ಧರ್ಮಾಂಧತೆ ಮೆರೆದಿದರೆ ಸಮಾಜದ ಗತಿ ಇನ್ನೇನಾಗಬೇಕು?
ಹೌದು, ರಾಷ್ಟ್ರಮಟ್ಟದ ಶೂಟರ್ ಆಗಿರುವ ಜಾರ್ಖಂಡ್ ನ ತಾರಾ ಶಾಹ್ ದೇವ್ 2014ರಲ್ಲಿ ಶೂಟರ್ ಒಬ್ಬರನ್ನು ಮದುವೆಯಾಗಿದ್ದು, ಈಗ ಇಸ್ಲಾಂ ಧರ್ಮಕ್ಕೆ ತಾರಾ ಒಪ್ಪಿಕೊಳ್ಳದ ಕಾರಣ ವಿಚ್ಛೇದನ ನೀಡಿದ್ದಾನೆ.
ಶೂಟರ್ ಆಗಿರುವ ವ್ಯಕ್ತಿ ಮೊದಲು ತಾನು ಹಿಂದೂ ಎಂದೂ, ತನ್ನ ಹೆಸರು ರಂಜೀತ್ ಕುಮಾರ್ ಎಂದೂ ತಾರಾ ಹಾಗೂ ಆಕೆಯ ಕುಟುಂಬಸ್ಥರನ್ನು ನಂಬಿಸಿದ್ದಾನೆ. ಅಲ್ಲದೆ ಇಬ್ಬರೂ 2014ರ ಜುಲೈ 7ರಂದು ಹಿಂದೂ ಸಂಪ್ರದಾಯದಂತೆ ಮದುವೆ ಸಹ ಆಗಿದ್ದಾರೆ. ಮದುವೆಯಾದ ಆರಂಭದ ದಿನಗಳಲ್ಲಿ ಎಲ್ಲವೂ ಚೆನ್ನಾಗೇ ಇತ್ತು.
ಆದರೆ ಮದುವೆಯಾಗಿ ಕೆಲ ದಿನಗಳ ಬಳಿಕ ತಾರಾಗೆ ಭಯಾನಕ ಮಾಹಿತಿ ಗೊತ್ತಾಗಿದ್ದು, ರಂಜೀತ್ ಕುಮಾರ್ ಹಿಂದೂವೇ ಅಲ್ಲ, ಆತನ ಹೆಸರು ರಖಿಬುಲ್ ಹಸನ್ ಎಂಬುದು ಗೊತ್ತಾಗಿದೆ, ಆದರೂ ತಾರಾ ಗಂಡನ ಮನೆಯಲ್ಲೇ ವಾಸವಿದ್ದರು ಎಂದು ತಿಳಿದುಬಂದಿದೆ.
ಆದರೆ ಬಳಿಕ ರಖಿಬುಲ್ ಹಸನ್ ಹಾಗೂ ಆತನ ತಾಯಿ ತಾರಾ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅಲ್ಲದೆ ತಾರಾ ಇಸ್ಲಾಂಗೆ ಮತಾಂತರವಾಗಬೇಕು ಎಂದು ಬಲವಂತ ಮಾಡಿದ್ದಾರೆ. ಇದರಿಂದ ಬೇಸತ್ತ ತಾರಾ ತವರು ಮನೆಗೆ ತೆರಳಿ ಜೀವನ ಸಾಗಿಸುತ್ತಿದ್ದರು. ಈಗ ರಖಿಬುಲ್ ಹಸನ್ ನ್ಯಾಯಾಲಯದ ಮೊರೆ ಹೋಗಿ ತಾರಾಗೆ ವಿಚ್ಛೇದನ ನೀಡಿದ್ದಾನೆ, ಆ ಮೂಲಕ ಧರ್ಮಾಂಧತೆ ಮೆರೆದಿದ್ದಾನೆ.
Leave A Reply