ಸಾವಿನ ನಂತರವೂ ಅಂಗ ದಾನದ ಮೂಲಕ ಏಳು ಜೀವ ಉಳಿಸಿದ ನಿರ್ಮಲಾ ಭಟ್
ಉಡುಪಿ : ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರು ಏಳು ಜೀವಗಳನ್ನು ಉಳಿಸಿದ್ದಾರೆ. ತಾವು ಮೃತಪಡುವಾಗ ಆಕೆ ಮಾಡಿದ ಸಾಹಸ ಅಂಥದ್ದಾ ಎಂದು ಹುಬ್ಬೇರಿಸುವ ಮುನ್ನ ವರದಿಯನ್ನೇ ಪೂರ್ತಿ ಓದಿಬಿಡಿ. ಆಕೆ ಹೆಸರು ನಿರ್ಮಲಾ ಭಟ್.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಅಪಘಾತದಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ವಿಚಾರವನ್ನು ಮಣಿಪಾಲದ ವೈದ್ಯರು ಘೋಷಣೆ ಮಾಡಿದರು. ಆಗ ನಿರ್ಮಲಾ ಭಟ್ ಅವರ ಕುಟುಂಬ ಕೂಡ ಇತರ ಎಲ್ಲರಂತೆ ದುಃಖದಲ್ಲಿ ಮುಳುಗಿದ್ದು ಸುಳ್ಳಲ್ಲ. ಆದರೆ ನಿರ್ಮಲಾ ಅವರ ಅಂಗದಾನ ಮಾಡುವ ತೀರ್ಮಾನ ಕೈಗೊಂಡರು. ಕುಟುಂಬದವರ ಅನುಮತಿಯನ್ನು ಪಡೆದು, ಇದೀಗ ಅಂಗ ದಾನದ ಮೂಲಕ ಏಳು ಜೀವವನ್ನು ಉಳಿಸಲಾಗಿದೆ. ನಿರ್ಮಲಾ ಅವರ ಎರಡು ಹೃದಯ ಕವಾಟ, ಕಣ್ಣು ಗುಡ್ಡೆ (ಕಾರ್ನಿಯಾ), ಮೂತ್ರಪಿಂಡ (ಕಿಡ್ನಿ) ಮತ್ತು ಯಕೃತ್ತು (ಲಿವರ್) ಕಸಿ ಮಾಡಿ, ಮಣಿಪಾಲ ಕಸ್ತೂರಬಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ, ಕಣ್ಣು ಗುಡ್ಡೆ ಮತ್ತು ಒಂದು ಮೂತ್ರಪಿಂಡವನ್ನು ಬೆಂಗಳೂರಿನಲ್ಲಿ ಗುರುತಿಸಿದ ರೋಗಿಗಳಿಗೆ ನೀಡಲಾಗಿದೆ. ಯಕೃತ್ತು ಮತ್ತು ಎರಡು ಹೃದಯ ಕವಾಟವನ್ನು ಮಂಗಳೂರಿನ ಗುರುತಿಸಿದ ರೋಗಿಗೆ ಹಾಗೂ ಒಂದು ಮೂತ್ರಪಿಂಡವನ್ನು ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಯಿತು.
ಒಟ್ಟಿನಲ್ಲಿ ನಿರ್ಮಲಾ ಭಟ್ ಅಂಗ ದಾನದ ಮೂಲಕ ಏಳು ಮಂದಿಯಲ್ಲಿ ಜೀವಂತವಿದ್ದಾರೆ. ಮಣಿಪಾಲದ ವೈದ್ಯರು ಎರಡನೇ ಬಾರಿ ಯಶಸ್ವಿಯಾಗಿ ಅಂಗಗಳನ್ನು ರವಾನಿಸಿದರು
Leave A Reply