ದಕ್ಷಿಣ ಕನ್ನಡ ಜಿಪಂನಲ್ಲಿ ಧೂಳು ಹಿಡಿಯುತ್ತಿವೆ ಅಂಗವಿಕಲರ ವಾಹನಗಳು!
ಮಂಗಳೂರು: ರಾಜ್ಯ ಸರ್ಕಾರದಿಂದ ಅಂಗವಿಕಲರಿಗಾಗಿ ಮಂಜೂರಾಗಿರುವ ವಾಹನಗಳು ವಿತರಣೆಯಾಗದೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಧೂಳು ಹಿಡಿಯುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ 91 ಅಂಗವಿಕಲರಿಗಾಗಿ ರಾಜ್ಯ ಸರ್ಕಾರದಿಂದ ವಾಹನಗಳೂ ಬಂದಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಂದಾಗಿ ವಾಹನಗಳು ವಿತರಣೆಯಾಗದೇ ತುಕ್ಕು ಹಿಡಿಯುತ್ತಿವೆ.
ಜಿಲ್ಲೆಯ 91 ಫಲಾನುಭವಿಗಳಿಗೆ 2017-18 ರ ಸಾಲಿನಲ್ಲಿ 91 ದ್ವಿಚಕ್ರ ವಾಹನಗಳು ಮಂಜೂರಾಗಿ ಕಳೆದ ಮಾರ್ಚ್ ತಿಂಗಳಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಬಂದಿವೆ . ಆದರೆ ಅವುಗಳನ್ನು ಈ ವರೆಗೆ ವಿತರಿಸಲಾಗಿಲ್ಲ.ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದ ಕೆಳ ಅಂತಸ್ಥಿನಲ್ಲಿ ಈ ವಾಹನಗಳು ಧೂಳು ಹಿಡಿಯುತ್ತಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಕೆಲ ವಾಹನಗಳು ತುಕ್ಕು ಹಿಡಿಯುತ್ತಿವೆ.
ಆದರೆ ಈ ವಾಹನಗಳತ್ತ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ. ಜಿಲ್ಲಾಉಸ್ತುವಾರಿ ಸಚಿವರಿಗೆ ಈ ವಿಚಾರವೇ ಗೊತ್ತಿಲ್ಲ. ಅದರೆ ಅಂಗವಿಕಲ ಫಲಾನುಭವಿಗಳು ಮಾತ್ರ ವಾಹನಗಳಿಗಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇನ್ನಾದರೂ ಸರ್ಕಾರ ಈ ವಾಹನಗಳ ವಿತರಣೆಗೆ ಗಮನ ಹರಿಸುವುದೋ ಕಾದು ನೋಡಬೇಕಿದೆ.
Leave A Reply