ಕೇರಳದ ಮಾಂಸ ತ್ಯಾಜ್ಯ ಸುರಿಯುತ್ತಿದ್ದ ಐವರ ಬಂಧನ
ಮಂಗಳೂರು : ಕೇರಳದ ಮಾಂಸ ತ್ಯಾಜ್ಯ ತಂದು ಪುತ್ತೂರು, ವಿಟ್ಲ ಪ್ರದೇಶದಲ್ಲಿ ಸುರಿದು ಪರಾರಿಯಾಗುತ್ತಿದ್ದ ತಂಡವನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ.ಕೋಳಿ ಹಾಗೂ ಇನ್ನಿತರ ಮಾಂಸ ತ್ಯಾಜ್ಯ ತುಂಬಿದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪತ್ತೂರು ವಳಮೊಗರು ಗ್ರಾಮದ ಮಹಮ್ಮದ್ ರಫೀಕ್ (30), ಕೇರಳ ಕೋಯಿಕೋಡ್ ನಿವಾಸಿ ಅಹಮ್ಮದ್ ಗಜನಿ (34), ಕೇರಳ ಮಲಪರಂ ನಿವಾಸಿ ಸೌಫಿ (30), ಕೇರಳ ಕೋಯಿಕೋಡ್ ನಿವಾಸಿ ಮಸೂದ್ (25) , ಬಿಹಾರದ ಪೊಸಿಬಾಕಾ ನಿವಾಸಿ ಮಹಮ್ಮದ್ ಜಿಯಾವುಲ್ ಅನ್ಸಾರಿ (20) ಎಂದು ಗುರುತಿಸಲಾಗಿದೆ.ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಟನ್ ಗಟ್ಟಲೆ ಕೋಳಿ ತ್ಯಾಜ್ಯ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ಬಂದು ಸುರಿದು ಪರಾರಿಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದವು .
ಕೇರಳದಿಂದ ತ್ಯಾಜ್ಯವನ್ನು ತಂದು ಕರ್ನಾಟಕದ ಹೆದ್ದಾರಿ ಬದಿಯಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ವಿಚಾರವನ್ನು ಕಿಡಿಗೇಡಿಗಳು ಬಾಯ್ಬಿಟ್ಟಿದ್ದಾರೆ. ಲಾರಿ ಹಾಗು ಕಾರಿನಲ್ಲಿ ಬಂದು ತ್ಯಾಜ್ಯವನ್ನು ವಿಲೇವಾರಿ ಮಾಡಿ ಹೋಗುತ್ತದ್ದ ವಿಚಾರ ಬೆಳೆಕಿಗೆ ಬಂದಿದೆ. ಸ್ಥಳೀಯ ಯುವಕರು ಕೂಡ ಇದರಲ್ಲಿ ಶಾಮೀಲಾಗಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
Leave A Reply