ಮಡಿಕೇರಿ: ಗುಡ್ಡ ಕುಸಿತ, ಒಂದೇ ಕುಟುಂಬ ನಾಲ್ವರು ಸಮಾಧಿ, ರಕ್ಷಣೆಗೆ ಸೇನಾ ಹೆಲಿಕ್ಯಾಪ್ಟರ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕುಂಭ ದ್ರೋಣ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಹೆಮ್ಮೆತ್ತಾಳು ಗ್ರಾಮದಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮನೆ ಸಮೇತ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ.
ಗುಡ್ಡ ಕುಸಿತವಾಗಿ ಅಪಾಯಕ್ಕೆ ಸಿಲುಕಿದ್ದ 20 ಜನರನ್ನು ರಕ್ಷಿಸಿರುವ ಬಗ್ಗೆ ವರಿದಿಯಾಗಿದೆ. ಹೆಮ್ಮೆತ್ತಾಳು , ಮೇಘತ್ತಾಳು ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸುತ್ತಿರುವ ಬಗ್ಗೆ ವರದಿಯಾಗಿದೆ.
ಬದಿಗೆರೆಯಲ್ಲಿ 200 ಮಂದಿ ಆತಂಕದಲ್ಲಿ: ಮಡಿಕೇರಿಯ ಬದಿಗೆರೆಯಲ್ಲಿ ಗ್ರಾಮ ಜಲಾವೃತವಾಗಿರುವ ಹಿನ್ನಲೆಯಲ್ಲಿ 200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿ ಗುಡ್ಡ ಏರಿ ಕುಳಿತಿದ್ದಾರೆ. ಗುಡ್ಡವೂ ಕುಸಿಯುತ್ತಿದ್ದು ಜನರು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಜಿಲ್ಲಾಡಳಿತ ಹೆಲಿಕ್ಯಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಸೇನಾ ಹೆಲಿಕ್ಯಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕೊಡಗಿಗೆ ತರಿಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿಯಾಗಿದೆ.
Leave A Reply