• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ವಿವಿ ಆವರಣದಲ್ಲಿ ಅಶ್ಲೀಲ ವರ್ತನೆ ತೋರಿದವನನ್ನು ನೋಡಿ ಸಿಸಿಟಿವಿಗಳು ನಗುತ್ತಿವೆ!!

Hanumantha kamath Posted On September 7, 2018


  • Share On Facebook
  • Tweet It

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಹಾಲಿ ಪರಿಸ್ಥಿತಿ ನೋಡಿದರೆ ಅಲ್ಲಿನ ವಿದ್ಯಾರ್ಥಿನಿಯರ ಶಾಪಕ್ಕೆ ತಪ್ಪು ಮಾಡಿದವರು, ಭ್ರಷ್ಟರು ಸುಟ್ಟು ಬೂದಿಯಾಗುವ ಸಾಧ್ಯತೆಗಳಿವೆ. ಕಳೆದ ತಿಂಗಳು ಅಂದರೆ ಅಗಸ್ಟ್ 29 ರಂದು ವಿವಿಯ ಮೂರು ಜನ ವಿದ್ಯಾರ್ಥಿನಿಯರು ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಅವರತ್ತ ಅಶ್ಲೀಲವಾಗಿ ಹಾವಭಾವ ತೋರಿಸುತ್ತಾ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದ. ಬಹುಶ: ಸಭ್ಯ ಸಮಾಜ ಅದನ್ನು ಒಪ್ಪಲು ಸಾಧ್ಯವೇ ಇಲ್ಲದ ಹಾಗೆ ಅವರು ವರ್ತಿಸಿದ್ದನ್ನು ನೋಡಿ ಆ ಹೆಣ್ಣುಮಕ್ಕಳು ವಿವಿಯ ರಿಜಿಸ್ಟ್ರಾರ್ ಅವರಿಗೆ ದೂರು ಕೊಟ್ಟಿದ್ದರು. ಆದರೆ ದೂರಿಗೆ ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇದ್ದಾಗ ಕಾಲೇಜಿನ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡರು. ಆ ಪ್ರಕಾರವಾಗಿ ಅಗಸ್ಟ್ 30 ರಂದು ಕಾಲೇಜಿನ ಮುಂಭಾಗದಲ್ಲಿಯೇ ಪ್ರತಿಭಟನೆ ಕೂಡ ನಡೆಸಲಾಯಿತು.

ಪ್ರತಿಭಟನೆಯ ಸಂದರ್ಭ ವಿವಿಯ ಪ್ರಭಾರ ಕುಲಸಚಿವ ಲೋಕೇಶ್ ಬಂದು ವಿದ್ಯಾರ್ಥಿಗಳನ್ನು ಸಮಾಧಾನ ಮಾಡಲು ಯತ್ನಿಸಿದರು. ನಂತರ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ರಾಮ ರಾವ್ ಅವರು ಬಂದು ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಾಗಿ ಭರವಸೆ ನೀಡಿದರು. ಕುಲಪತಿ, ರಿಜಿಸ್ಟ್ರಾರ್, ಎಸಿಪಿ ಎಲ್ಲರೂ ವಿದ್ಯಾರ್ಥಿನಿಯರಿಗೆ ಆದ ಅವಮಾನದ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ವಿದ್ಯಾರ್ಥಿಗಳು ಕೂಡ ಪ್ರತಿಭಟನೆಯನ್ನು ಕೈಬಿಟ್ಟರು. ಇವತ್ತು ದೂರು ದಾಖಲಾಗುತ್ತದೆ, ನಾಳೆ ದೂರು ದಾಖಲಾಗುತ್ತದೆ ಎಂದು ವಿದ್ಯಾರ್ಥಿಗಳು ಕಾದು ಕುಳಿತದ್ದೇ ಬಂತು. ಆದರೆ ಈಗ ವಿಷಯ ಏನೆಂದರೆ ಪ್ರಕರಣ ನಡೆದು ಹತ್ತು-ಹನ್ನೆರಡು ದಿನಗಳು ನಡೆದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಂಗಳೂರು ವಿವಿಯ ಕುಲಪತಿ ಆಗಲಿ, ರಿಜಿಸ್ಟ್ರಾರ್ ಆಗಲಿ ಕೊಣಾಜೆ ಪೊಲೀಸ್ ಠಾಣೆಯ ತನಕ ಹೋಗಿ ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಆಗಿರುವ ಮುಜುಗರ ಮತ್ತು ಮಾನಸಿಕ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಲೇ ಇಲ್ಲ. ಏಕೆಂದರೆ ಇವರೆಲ್ಲ ಯಾವ ಮುಖ ಹೊತ್ತುಕೊಂಡು ಹೋಗಿ ಪ್ರಕರಣ ದಾಖಲಿಸುತ್ತಾರೆ ಎನ್ನುವುದು ಎಲ್ಲರೂ ಕೇಳುತ್ತಿರುವ ಮೂಲಭೂತ ಪ್ರಶ್ನೆ.

ಯಾವ ಸಿಸಿಟಿವಿ ಕೆಲಸ ಮಾಡುತ್ತದೆ ಎನ್ನುವ ಕ್ವಿಝ್ ಇಟ್ಟರೆ ಒಳ್ಳೆಯದು…

ವಿಷಯ ಏನೆಂದರೆ ಮಂಗಳೂರು ವಿವಿಯ ಆವರಣದಲ್ಲಿ ಹಾಕಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಯಾವುದೂ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಯಾಕೆಂದರೆ ನಿಕಟಪೂರ್ವ ಕುಲಪತಿ ಭೈರಪ್ಪನವರು ಸಿಸಿಟಿವಿಯ ಗುತ್ತಿಗೆಯನ್ನು ಕೊಟ್ಟಿರುವುದು ಅವರದ್ದೇ ಆತ್ಮೀಯರಿಗೆ. ಅದರಲ್ಲಿ ಆಗಿರುವ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಎದ್ದು ಕಾಣುತ್ತಿದೆ ಎಂದರೆ ಆವರಣದಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬೆರಳೆಣಿಕೆಯದ್ದು ಬಿಟ್ಟರೆ ಉಳಿದವು ಕೇವಲ ತೋರಿಕೆಗೆ ಮಾತ್ರ ಹಾಕಿದಂತೆ ಕಾಣುತ್ತದೆ. ಇದರಿಂದ ಏನಾಗಿದೆ ಎಂದರೆ ಸಿಸಿಟಿವಿ ಕ್ಯಾಮೆರಾದ ಉದ್ದೇಶವೇ ಹಾಳಾಗಿದೆ. ಸಿಸಿಟಿವಿ ಕ್ಯಾಮೆರಾ ಕೇವಲ ನಾಮಕಾವಸ್ತೆ ಮಾತ್ರ ಹಾಕಿದಂತೆ ಕಾಣುತ್ತದೆ. ಸಿಸಿಟಿವಿ ಹಾಕಿರುವುದು ವಿವಿಯ ಆವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಆದರೆ ಅದು ಸಿಸಿಟಿವಿಯಲ್ಲಿ ದಾಖಲಾಗಿ ಅದರಿಂದ ಆರೋಪಿಗಳ ಪತ್ತೆಗೆ ಸುಲಭವಾಗಲಿ ಎನ್ನುವ ಕಾರಣಕ್ಕೆ. ಆದರೆ ಇಲ್ಲಿ ಹಾಕಲ್ಪಟ್ಟಿರುವ ಸಿಸಿಟಿವಿಗಳು ಕೇವಲ ದಾಖಲೆಗಳಲ್ಲಿ ಬಿಲ್ ಮಾಡಲು ಮಾತ್ರ ಸೀಮಿತವಾಗಿವೆ. ಯಾಕೆಂದರೆ ಸಿಸಿಟಿವಿ ಹಾಕುವ ಗುತ್ತಿಗೆ ತೆಗೆದುಕೊಂಡವರು ವಿವಿಯಲ್ಲಿ ಯಾರಿಗೆ ಎಷ್ಟು ಕೊಡಬೇಕು ಅಷ್ಟು ಕೈತುಂಬಾ ಕೊಟ್ಟಾಗಿದೆ. ಆದ್ದರಿಂದ ಅವರಿಗೆ ಬೈದರೆ ಅವರು ಕ್ಯಾರ್ ಮಾಡುವುದಿಲ್ಲ. ಇನ್ನು ಬೈರಪ್ಪನವರು ಮೊನ್ನೆಯಷ್ಟೇ ವಿಶ್ರಾಂತಿ ಜೀವನಕ್ಕೆ ಹೋಗಿ ಆಗಿದೆ. ಅವರ ಸ್ಥಾನದಲ್ಲಿ ಅವರಿಗೆ ಬೇಕಾದ ಜನರು ಬಂದು ಕುಳಿತಾಗಿದೆ. ಸಿಸಿಟಿವಿ ಕಳಪೆ ಎಂದು ಧ್ವನಿ ಎತ್ತುವಂತಹ ವ್ಯಕ್ತಿಗಳ ಬಾಯಿ ಮುಚ್ಚಿಸಿ ಪ್ರಾಮುಖ್ಯವಿಲ್ಲದ ಸ್ಥಳಗಳಿಗೆ ಕುಳ್ಳಿರಿಸಲಾಗಿದೆ. ಸಿಸಿಟಿವಿಯ ಬಿಲ್ ನಲ್ಲಿ ನುಂಗಿದ ಹಣ ತೆಗೆದುಕೊಂಡವರದ್ದು ಜೀರ್ಣವಾಗಿ ತೇಗು ಕೂಡ ಬಂದಿರಬಹುದು.

ರಾಜ್ಯಪಾಲರದ್ದು ಮತ್ತೆ ದಿವ್ಯಮೌನ…

ಈ ಪ್ರಕರಣ ವಿವಿಯ ಆವರಣದಲ್ಲಿ ನಡೆದಿರುವುದರಿಂದ ಕೇಸ್ ದಾಖಲಿಸಲು ಆಡಳಿತ ಮಂಡಳಿಗೆ ಮಾತ್ರ ಹಕ್ಕಿರುವುದು. ವಿದ್ಯಾರ್ಥಿನಿಯರು ನೇರವಾಗಿ ಠಾಣೆಯಲ್ಲಿ ದೂರು ದಾಖಲಿಸುವಂತಿಲ್ಲ. ಅಷ್ಟಕ್ಕೂ ಮಂಗಳೂರು ವಿವಿಯಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ಅಲ್ಲಿನ ಆಡಳಿತ ಮಂಡಳಿ ಯಾವತ್ತೂ ಕೂಡ ನೀರಿಗೆ ಬಿದ್ದಂತೆನೆ ಇರುವುದು. ಎರಡು ವರ್ಷಗಳ ಹಿಂದೆ ಲೇಡಿಸ್ ಟಾಯ್ಲೆಟಿನಲ್ಲಿ ಯುವಕನೊಬ್ಬ ಮೊಬೈಲ್ ಕ್ಯಾಮೆರಾ ಇಟ್ಟು ಸಿಕ್ಕಿಬಿದ್ದಾಗ ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಬೇರೆ ದಾರಿ ಕಾಣದೆ ಕುಲಪತಿಯಾಗಿದ್ದ ಭೈರಪ್ಪ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ನಂತರ ಅದನ್ನು ವಿವಿಯ ಸ್ಪರ್ಶ ಎನ್ನುವ ವಿಭಾಗವೇ ತನಿಖೆ ಮಾಡಿ ಶಿಕ್ಷೆ ನೀಡುತ್ತದೆ ಎಂದು ಹೇಳಿ ಪ್ರಕರಣ ಹಿಂದಕ್ಕೆ ತೆಗೆದುಕೊಂಡಿದ್ದರು. ನಂತರ ಆ ಪ್ರಕರಣ ಹಳ್ಳ ಸೇರಿತ್ತು.

ಹೆಣ್ಣುಮಕ್ಕಳ ಟಾಯ್ಲೆಟಿನಲ್ಲಿ ಮೊಬೈಲ್ ಕ್ಯಾಮೆರಾ ಪ್ರಕರಣವನ್ನೇ ಬಹಳ ಹಗುರವಾಗಿ ತೆಗೆದುಕೊಂಡಿದ್ದ ಭೈರಪ್ಪ ಅಂಡ್ ಟೀಮ್ ಈ ಹೊಸ ಪ್ರಕರಣದಲ್ಲಿ ಹೆಚ್ಚು ಉತ್ಸಾಹ ತೋರಿಸುತ್ತದೆ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಹೆಣ್ಣುಮಕ್ಕಳೇನೂ ಎಎಂ ಖಾನ್, ಲೋಕೇಶ್ ಅಥವಾ ಇವರ ಟೀಮ್ ನ ಸದಸ್ಯರ ಅಕ್ಕ, ತಂಗಿಯರು ಅಲ್ಲವಲ್ಲ. ಆದ್ದರಿಂದ ಎಲ್ಲರೂ ಈ ಪ್ರಕರಣವನ್ನು ಕಸದ ಬುಟ್ಟಿಗೆ ಬಿಸಾಡಿದ್ದಾರೆ. ಸಿಸಿಟಿವಿಗಳು ಸುಮ್ಮನೆ ಟೈಮ್ ಪಾಸ್ ಮಾಡುತ್ತಿವೆ. ಈಗ ಆಶ್ಚರ್ಯ ಎಂದರೆ ಮಂಗಳೂರು ವಿವಿಯಲ್ಲಿ ನಡೆದಿರುವ ಮೊದಲ ಅಸಹ್ಯ ಪ್ರಕರಣ ಇದು ಅಲ್ಲವೇ ಅಲ್ಲ. ಒಂದು ಪುಸ್ತಕಕ್ಕೆ ಆಗುವಷ್ಟು ಭ್ರಷ್ಟಾಚಾರ ಇಲ್ಲಿದೆ. ಎಲ್ಲವನ್ನು ಕರ್ನಾಟಕದ ರಾಜ್ಯಪಾಲ ವಜುಬಾಯಿ ಪಟೇಲ್ ಅವರ ಕಿವಿಯ ತನಕ ಹೋಗಿ ಹೇಳಿ ಆಗಿದೆ. ಆದರೆ ರಾಜ್ಯಪಾಲರು ಕಿವಿಗೆ ಹತ್ತಿ ಇಟ್ಟಂತೆ ವರ್ತಿಸುತ್ತಿರುವುದರಿಂದ ಈ ವಿಷಯದಲ್ಲಿ ಆಮೆಗಿಂತ ಸ್ಲೋ ಆಗಿದ್ದಾರೆ. ಬಿಜೆಪಿಯವರು ಮಾತನಾಡಿದರೆ ವಜುಬಾಯ್ ಪಟೇಲ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನಲೆಯವರು, ಮೋದಿಯ ಗುಜರಾತಿನವರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆರ್ ಎಸ್ ಎಸ್ ಹಿನ್ನಲೆಯ, ಗುಜರಾತಿನ ಮಾರ್ವಾಡಿಗಳೇ ಹೀಗೆ ರಗ್ಗು ಹೊದ್ದು ಮಲಗಿಬಿಟ್ಟರೆ ಭೈರಪ್ಪನವರು ವಿವಿಯನ್ನು ಯಾರಿಗಾದರೂ ಕಡಿಮೆ ಬೆಲೆಗೆ ಮಾರಿಬಿಟ್ಟರೂ ಏನು ಆಗುವುದಿಲ್ಲವೇನೋ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search